janadhvani

Kannada Online News Paper

ಹಾನಿಕಾರಕ ಬ್ಯಾಕ್ಟೀರಿಯಾ- ಯುಎಸ್‌ನ ಕ್ವೇಕರ್ ಬ್ರಾಂಡ್ ಓಟ್ಸ್ ಉತ್ಪನ್ನಗಳನ್ನು ಬಳಸದಂತೆ ಎಚ್ಚರಿಕೆ

ಈ ಉತ್ಪನ್ನಗಳನ್ನು ಹಿಂಪಡೆದಿರುವುದಾಗಿ US ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌ನ ಅಧಿಸೂಚನೆಯನ್ನು ಆಧರಿಸಿ ಈ ಎಚ್ಚರಿಕೆ ನೀಡಲಾಗಿದೆ.

ದೋಹಾ: ಕತಾರ್‌ನ ಸಾರ್ವಜನಿಕ ಆರೋಗ್ಯ ಸಚಿವಾಲಯವು ಯುಎಸ್‌ನ ಕ್ವೇಕರ್ ಬ್ರಾಂಡ್ ಓಟ್ಸ್ ಉತ್ಪನ್ನಗಳ ವಿಶೇಷ ಬ್ಯಾಚ್ ಅನ್ನು ಬಳಸದಂತೆ ಎಚ್ಚರಿಕೆ ನೀಡಿದೆ.

2024 ಜನವರಿ 9, ಮಾರ್ಚ್ 12, ಜೂನ್ 3, ಆಗಸ್ಟ್ 2, ಸೆಪ್ಟೆಂಬರ್ 1 ಅಥವಾ ಅಕ್ಟೋಬರ್ 1 ರ ಮುಕ್ತಾಯ ದಿನಾಂಕಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ವೇಕರ್ ಓಟ್ಸ್ ಉತ್ಪನ್ನಗಳನ್ನು ಬಳಸಬಾರದೆಂದು ಎಚ್ಚರಿಕೆ ನೀಡಲಾಗಿದೆ.

ಅವುಗಳಲ್ಲಿ ಸಂಭಾವ್ಯ ಹಾನಿಕಾರಕ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವನ್ನು ಹೊಂದಿರುವುದನ್ನು ಕಂಡುಹಿಡಿದ ನಂತರ ಕ್ವೇಕರ್, ಈ ಉತ್ಪನ್ನಗಳನ್ನು ಹಿಂಪಡೆದಿರುವುದಾಗಿ US ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌ನ ಅಧಿಸೂಚನೆಯನ್ನು ಆಧರಿಸಿ ಈ ಎಚ್ಚರಿಕೆ ನೀಡಲಾಗಿದೆ.

ಈ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವುದು ಸೇರಿದಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸಹಯೋಗದೊಂದಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

error: Content is protected !! Not allowed copy content from janadhvani.com