ಮಲೇಷ್ಯಾ ಮತ್ತು ಬಾಂಗ್ಲಾದೇಶದಲ್ಲಿ ಕೆಲವು ವರ್ಷಗಳ ಹಿಂದೆ ನಿಪ್ಹಾ ವೈರಸ್ ಭಯದ ವಾತಾವರಣವನ್ನು ಉಂಟು ಮಾಡಿತ್ತು.
ಇದೀಗ ಕೆರಳದ ಕೋಝಿಕ್ಕೋಡಿನ ಒಂದು ಕುಟುಂಬದ ಮೂವರು ವ್ಯಕ್ತಿಗಳು ಇದೇ ನಿಪ್ಹಾ ವೈರಸ್ನಿಂದಾಗಿ ಮರಣ ಹೊಂದಿದರು. ಅದೇ ರೀತಿ ಅವರ ಆರೈಕೆ ಮಾಡಿದ ದಾದಿಯೊಬ್ಬರು ಇದೇ ಜ್ವರಕ್ಕೆ ತುತ್ತಾಗಿ (ಅದಿನ್ನೂ ಅಧಿಕೃತವಾಗಿ ದೃಢಪಡಿಸಲಾಗಿಲ್ಲ) ನಿಧನರಾದರು.
ಇತ್ತೀಚಿನ ದಿನಗಳಲ್ಲಿ ಮಲಪ್ಪುರಂ ಮತ್ತು ಕೊಝಿಕ್ಕೋಡ್ ಜಿಲ್ಲೆಗಳಲ್ಲಿ ಹನ್ನೊಂದು ಜನರು ಸಾವನ್ನಪ್ಪಿದ್ದು, ಅವರ ಪೈಕಿ ಮೂವರಿಗೆ ವೈರಸ್ ತಗುಲಿರುವುದನ್ನು ಖಚಿತಪಡಿಸಲಾಗಿದೆ.
ಏತನ್ಮಧ್ಯೆ, 25 ಕ್ಕೂ ಹೆಚ್ಚಿನ ಜನರಿಗೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಇದೇ ರೋಗಲಕ್ಷಣಗಳನ್ನು ಪತ್ತೆ ಮಾಡಲಾಗಿದ್ದು, ಅವರಲ್ಲಿ ಆರು ಮಂದಿ ಚಿಂತಾಜನಕ ಸ್ಥಿತಿಯಲ್ಲಿ ಇರುವುದಾಗಿ ವರದಿಯಾಗಿದೆ.
1998 ರಲ್ಲಿ ಮಲೇಶಿಯಾದಲ್ಲಿ ಅಪಾಯಕಾರಿ ನಿಪ್ಹಾ ವೈರಸ್ ಮೊದಲ ಬಾರಿಗೆ ಪತ್ತೆಯಾಯಿತು. ಅಲ್ಲಿ ನಿಪ್ಹಾ ವೈರಸ್ ಸೋಂಕಿನಿಂದ 100 ಕ್ಕಿಂತಲೂ ಹೆಚ್ಚು ಜನರು ಮೃತಪಟ್ಟಿದ್ದರು.
ನಿಪ್ಹಾ ಹುಟ್ಟು ಮಲೇಷ್ಯಾದಲ್ಲಿ
1998 ರಲ್ಲಿ ಮಲೇಷಿಯಾದ ಕಪುಂಗಂಗ್ ಸುಂಗೈ ನಿಪ್ಹಾದ ಕ್ಯಾಂಪಿಂಗ್ ಶಿಬಿರದಿಂದ ಈ ವೈರಸ್ ಮೊದಲ ಬಾರಿಗೆ ಪತ್ತೆಹಚ್ಚಲ್ಪಟ್ಟಿತು.
ನಿಪ್ಹಾದಲ್ಲಿ ಕಂಡು ಬಂದ ವೈರಸ್ಗೆ ನೆಪ್ಹಾ ಎಂಬ ಹೆಸರನ್ನೇ ನೀಡಲಾಗುತ್ತದೆ.
1998 ರ ಬರಗಾಲದ ಸಮಯ ಮಲೇಷ್ಯಾದಲ್ಲಿ ನಿಪ್ಹಾ ವೈರಸ್ ಕಂಡುಬಂದಿತು. ಬರಗಾಲದ ಹಿನ್ನೆಲೆಯಲ್ಲಿ ಅಲ್ಲಿನ ಕಾಡುಗಳು ಜಲಕ್ಷಾಮವನ್ನು ಎದುರಿಸಿದ್ದವು. ಆ ಕಾರಣದಿಂದಾಗಿ ಅನೇಕ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳು ಅರಣ್ಯವನ್ನು ತೊರೆದವು. ಇದಲ್ಲದೆ, ಕಾಡಿನ ಹಣ್ಣುಗಳನ್ನು ಸೇವಿಸಿ ಬದುಕುತ್ತಿದ್ದ ಮಲೇಷಿಯಾದ ಬಾವಲಿಗಳು ಈ ಪ್ರದೇಶಕ್ಕೆ ಆಗಮಿಸಿದವು.
ಹಂದಿಗಳಿಂದ ಮಾನವರಿಗೆ
ಬಾವಲಿಗಳ ಹಾವಳಿಯಿಂದ ರೈತರ ಬೆಳೆಗಳು ನಾಶಗೊಂಡವು ಎಂದಷ್ಟೇ ಅಲ್ಲಿನ ಜನರು ನಿಟ್ಟುಸಿರು ಬಿಟ್ಟಿದ್ದರು.
ಆದರೆ ಕೆಲವು ದಿನಗಳ ನಂತರ, ಮಲೇಷ್ಯಾದಲ್ಲಿ ಹಂದಿ ಸಾಕಣೆ ಕೇಂದ್ರದಲ್ಲಿ ಹಂದಿಗಳು ಅಪರೂಪದ ಸೋಂಕಿನಿಂದ ಬಳಲಲು ಆರಂಭಿದ್ದವು. ಲಕ್ಷಗಟ್ಟಲೆ ಹಂದಿಗಳು ಗುಂಪಿನಲ್ಲಿ ಸತ್ತು ಬಿದ್ದಿತು. ಆದರೂ ನಿಪ್ಹಾ ಸೋಂಕು ಎಂಬುದು ಅಂದಿನ ವರೆಗೆ ಯಾರಿಗೂ ತಿಳಿದಿರಲಿಲ್ಲ. ಅಪರೂಪದ ಸೋಂಕಿನಿಂದಾಗಿ ಹಂದಿ ಸಾಕಣೆ ಕೆಲಸ ಮಾಡುತ್ತಿದ್ದ ನೌಕರರಿಗೆ ಸಹ ಆ ಸೋಂಕಿಗೆ ತುತ್ತಾಗಿದ್ದರು. ಅನೇಕ ಜನರು ಗಂಭೀರ ಜ್ವರಕ್ಕೆ ಗುರಿಯಾದರು.
ಅವರ ಪೈಕಿ ನೂರಾರು ಮಂದಿ ತನ್ನ ಪ್ರಾಣವನ್ನೇ ಕಳಕೊಂಡರು.
ಬಾವಲಿಗಳು ತಿಂದ ಹಣ್ಣು
ಬಾವಲಿಗಳಿಂದ ಬಾವಲಿಗಳಿಗೆ ರೋಗ ಹರಡಿತು. ಇಲ್ಲಿಂದ ಹಂದಿಗಳು ಸೋಂಕಿಗೆ ಒಳಗಾದವು.
ಹಂದಿಗಳಿಂದ ಕಾರ್ಮಿಕರಿಗೆ ವೈರಸ್ ತಗುಲಿತು.
ನಂತರ, ಜನರಿಗೆ ಆ ಸೋಂಕು ತಗುಲತೊಡಗಿತು. ಮಲೇಷಿಯಾದಲ್ಲಿ ಸುಮಾರು 200 ಕ್ಕಿಂತ ಹೆಚ್ಚು ಜನರು ನಿಪ್ಹಾಗೆ ತುತ್ತಾಗಿ, ಸುಮಾರು 100 ಕ್ಕಿಂತ ಹೆಚ್ಚು ಜನರು ಮೃತಪಟ್ಟರು. ಹಾಗಾದರೂ, ಆರೋಗ್ಯ ಇಲಾಖೆ ನೆಪ್ಹಾ ವೈರಸ್ನಿಂದಾಗಿ ಸಾವು ಸಂಭವಿಸಿದ ಬಗ್ಗೆ ಕಂಡುಹಿಡಿಯಲಿಲ್ಲ. ಮಲೇಶಿಯಾದ ಪರಿಶೋಧಕರ ನಿಗಮನವು ಜಪಾನಿ ಜ್ವರದಿಂದಾಗಿ ಮರಣ ಸಂಭವಿಸಿದೆ ಎಂಬುದಾಗಿತ್ತು.
ನಿಪ್ಹಾ ವೈರಸ್
ಸೊಳ್ಳೆಗಳ ಸಂತಾನವೃದ್ಧಿಯನ್ನು ತೊಡೆದುಹಾಕುವ ಪ್ರಯತ್ನದಲ್ಲಿ ತೊಡಗಿಸಿಕೊಂಡಾಗ ನಿಪ್ಹಾ ವೈರಸ್ ನ್ನು ಕಂಡು ಹಿಡಿಯಲಾಗುತ್ತದೆ. ಸೋಂಕಿಗೊಳಗಾದ ರೋಗಿಯ ಮೆದುಳಿನಿಂದ ವೈರಸ್ ರೋಗಾಣು ಗುರುತಿಸಲ್ಪಟ್ಟಿತು. ಎಂದು ಅಪಾಯಕಾರಿ ನಿಪ್ಹಾ ಎನ್ನುವುದು ಪ್ರಾಣಿಗಳಿಂದ ಪ್ರಾಣಿಗಳಿಗೆ ಮತ್ತು ಪ್ರಾಣಿಗಳಿಂದ ಮಾನವರಿಗೆ ವರ್ಗಾಯಿಸುವ ಒಂದು ವೈರಸಾಗಿದೆ.
ಬಂಗ್ಲಾದೇಶದಲ್ಲಿ 160 ಸಾವು
2001 ರಿಂದ ಮಲೇಷ್ಯಾದ ನಂತರ ಬಾಂಗ್ಲಾದೇಶದಲ್ಲಿ ನಿಪ್ಹಾ ವೈರಸ್ ದಾಖಲಿಸಲ್ಪಟ್ಟಿತು.
ಬಾಂಗ್ಲಾದೇಶದ ಆರು ಜಿಲ್ಲೆಗಳಲ್ಲಿ ನಿಪ್ಹಾ ವೈರಸ್ ಆರಂಭದಲ್ಲಿ ವರದಿಯಾಗಿದೆ.
ಮಾರ್ಚ್ 2012 ರಲ್ಲಿ, 209 ಜನರಿಗೆ ಬಾಂಗ್ಲಾದೇಶದಲ್ಲಿ ನಿಪ್ಹಾ ವೈರಸ್ ತಗುಲಿರುವುದಾಗಿ ದೃಢಪಟ್ಟಿತು. ಆ ಪೈಕಿ, 161 ಜನರು ಮೃತಪಟ್ಟರು.
2001 ಜನವರಿಯಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಿಪ್ಹಾ ವೈರಸ್ ಮೊದಲು ವರದಿಯಾದವು. 2001 ರಲ್ಲಿ ಸಿಲಿಗುರಿಯಲ್ಲಿ ನಿಪ್ಹಾದಿಂದಾಗಿ 66 ಜನರು ವೈರಸ್ ಗೆ ತುತ್ತಾಗಿ, ಕನಿಷ್ಠ 45 ಜನರು ಮೃತಪಟ್ಟಿದ್ದರು.
2007 ರಲ್ಲೂ ಪಶ್ಚಿಮ ಬಂಗಾಳದಲ್ಲಿ ನಿಪಾ ವೈರಸ್ ಪ್ರಕರಣಗಳು ವರದಿಯಾಗಿವೆ. ಅದೇ ವರ್ಷ, ಪಶ್ಚಿಮ ಬಂಗಾಳದ ನಂಡಿಯಾದಲ್ಲಿ ಐದು ಜನರು ಸಾವನ್ನಪ್ಪಿದರು.
(ಸಂ: ಬ.ಅ.ಕಿ)