ಮಂಗಳೂರು: ನೆರೆಯ ರಾಜ್ಯ ಕೇರಳದಲ್ಲಿ ನಿಫಾ ಎಂಬ ಮಾರಕ ರೋಗವು ಜನರನ್ನು ಆತಂಕಕ್ಕೀಡು ಮಾಡಿದ್ದು, ಇದೀಗ ಮಂಗಳೂರಿಗೂ ಕಾಲಿಟ್ಟಿರುವ ಸುದ್ದಿ ಕೇಳಿ ಬಂದಿದೆ. ಎಲ್ಲರೂ ಆರೋಗ್ಯ ಇಲಾಖೆಯು ಸೂಚಿಸುವ ಮುಂಜಾಗರೂಕತಾ ಕ್ರಮವನ್ನು ಪಾಲಿಸುವುದರೊಂದಿಗೆ, ಎಲ್ಲಾ ಮಸೀದಿಗಳಲ್ಲಿ ತರಾವೀಹ್ ನಮಾಝ್ ಬಳಿಕ ಬದ್ರ್ ಮೌಲಿದ್ ಏರ್ಪಡಿಸಿ ವಿಶೇಷ ಪ್ರಾರ್ಥನೆ ನಡೆಸುವಂತೆ ದ.ಕ.ಸಂಯುಕ್ತ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕರೆ ಕೊಟ್ಟಿದ್ದಾರೆ.
ಯುವಜನತೆಯು ಅತಿರೇಕದ ವರ್ತನೆಗಳಿಂದ ದೂರ ಇದ್ದು, ನೈತಿಕ ಚೌಕಟ್ಟಿನೊಳಗೆ ಜೀವನ ರೂಪಿಸಲು ಮುಂದಾಗಬೇಕು. ಆ ಮೂಲಕ ಆರೋಗ್ಯವಂತ ಸದೃಢ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕೈ ಜೋಡಿಸಬೇಕೆಂದು ಅವರು ಪ್ರಕಟನೆಯಲ್ಲಿ ಕರೆ ನೀಡಿದ್ದಾರೆ.