ಜಿದ್ದಾ:ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ಟರ್ಮಿನಲ್ ರಮಝಾನ್ 7ಕ್ಕೆ ಆರಂಭಿಸಲಿದೆ ಎಂದು ಸೌದಿ ಸಿವಿಲ್ ಏವಿಯೇಷನ್ ತಿಳಿಸಿದೆ.
2015 ರಲ್ಲಿ ಎಂಟನೆಯ ವಾರ್ಷಿಕ ಇಂಟರ್ ನ್ಯಾಷನಲ್ ಇನ್ ಫ್ರಾ ಸ್ಟ್ರಕ್ಚರ್ ಡೆವಲಪ್‌ಮೆಂಟ್ ಫೋರಂ ವಿಶ್ವದ ಅತ್ಯುತ್ತಮ ಎಂಜಿನಿಯರಿಂಗ್ ಯೋಜನೆಯಾಗಿ ಜಿದ್ದಾ ವಿಮಾನ ನಿಲ್ದಾನವನ್ನು ಆಯ್ಕೆ ಮಾಡಲಾಗಿತ್ತು.
ಆರಂಭಿಕ ಹಂತದಲ್ಲಿ, ಎಲ್ಲಾ ದೇಶೀಯ ವಿಮಾನಗಳು, ಹೊಸ ಟರ್ಮಿನಲ್ ಮೂಲಕ ತನ್ನ ಸೇವೆಗಳನ್ನು ನಿರ್ವಹಿಸಲಿದೆ.ವಿಮಾನನಿಲ್ದಾಣದ ಪ್ರಾರಂಭದೊಂದಿಗೆ, ವಿಶ್ವದಾದ್ಯಂತ ಹಜ್ ಮತ್ತು ಉಮ್ರಾ ಯಾತ್ರಾರ್ಥಿಗಳಿಗೆ ಜಿದ್ದಾ ವಿಮಾನನಿಲ್ದಾಣವು ಹೊಸ ಪ್ರವೇಶ ದ್ವಾರವಾಗಲಿದೆ.
ವಿಶ್ವದಲ್ಲೇ ಅತ್ಯಂತ ಎತ್ತರದ ಕಂಟ್ರೋಲ್ ಟವರ್, ಇನ್ನೂರ ಇಪ್ಪತ್ತು ಕೌಂಟರ್‌ಗಳು, ಎಂಬತ್ತು ಸ್ವಯಂ ಸೇವಾ ಯಂತ್ರ, ಟ್ರಾನ್ಸಿಟ್ ಪ್ರಯಾಣಿಕರಿಗಾಗಿ ನೂರ ಇಪ್ಪತ್ತು ಕೊಠಡಿ ಗಳ ಫಾರ್ ಸ್ಟಾರ್ ಹೊಟೇಲ್, ಮೊದಲ ವರ್ಗ ಮತ್ತು ಬಿಸಿನೆಸ್ ಕ್ಲಾಸ್ ಪ್ರಯಾಣಿಕರಿಗೆ ಐದು ಲಾಂಚ್‌ಗಳು, ನಲ್ವತ್ತಾರು ಗೇಟ್‌ಗಳು ನಾಲ್ಕು ಮಹಡಿಗಳಲ್ಲಿ 8,200 ವಾಹನಗಳಿಗೆ ನಿಲುಗಡೆ ಸೌಲಭ್ಯ, ಲಗೇಜ್ ಪರಿಶೋಧನೆಗಾಗಿ ಇಪ್ಪತ್ತೆರಡು ಮಿಷನ್ ಗಳು,ಲಗೇಜ್ ಗಳ ವರ್ಗಾವಣೆಗೆ 33 ಕಿಮೀ ಉದ್ದದ ಕನ್ವೇಯರ್ ಪಟ್ಟಿಗಳು ಮತ್ತು 132 ಲಿಫ್ಟ್ ಗಳನ್ನು ನೂತನ ಟರ್ಮಿನಲ್ ನಲ್ಲಿ ಅಳವಡಿಸಲಾಗಿದೆ.
ಹೊಸ ಟರ್ಮಿನಲ್ ಆರಂಭದಿಂದ ಪ್ರತಿ ವರ್ಷ 50 ಮಿಲಿಯನ್ ಪ್ರಯಾಣಿಕರಿಗೆ ಪ್ರಯಾಣಕ್ಕೆ ಸಾಧ್ಯವಾಗಲಿದೆ.