janadhvani

Kannada Online News Paper

ಬಜ್ಪೆ: ರಸ್ತೆ ಅಗಲೀಕರಣ ಕಾಮಗಾರಿ ವಿಳಂಬ- ನಾಗರಿಕ ಹೋರಾಟ ಸಮಿತಿಯಿಂದ ಪ್ರತಿಭಟನೆ

ಮಂಗಳೂರು: ಇಲ್ಲಿನ ಹೊರವಲಯದ ಬಜ್ಪೆ ಪಟ್ಟಣ ಪಂಚಾಯ್ತಿನಲ್ಲಿ ರಸ್ತೆ ಅಗಲೀಕರಣದ ಕಾಮಗಾರಿಗಾಗಿ ಸುಮಾರು ತಿಂಗಳಿಂದ ರಸ್ತೆಯನ್ನು ಅಗದು, ಓಡಾಟ ಯೋಗ್ಯವಲ್ಲದ ಸ್ಥಿತಿಯಲ್ಲಿಡಲಾಗಿದೆ.

ಅಗಲೀಕರಣ ಕಾಮಗಾರಿಯನ್ನು ಆರಂಭಿಸದೆ, ವಿಳಂಬ ಧೋರಣೆಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯುಂಟಾಗಿದೆ. ಇದರ ವಿರುದ್ಧ ಆಕ್ರೋಶ ಗೊಂಡಿರುವ ನಾಗರಿಕರು ಇಂದು “ನಾಗರಿಕ ಹೋರಾಟ ಸಮಿತಿ” ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿದ PWD ಇಲಾಖೆಯ ಅಧಿಕಾರಿಗಳು, ಹೋರಾಟ ಸಮಿತಿಯ ಬೇಡಿಕೆಗೆ ಸ್ಪಂದಿಸಿ, ಮುಂದಿನ ಸೋಮವಾರದಿಂದಲೇ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ.

error: Content is protected !! Not allowed copy content from janadhvani.com