janadhvani

Kannada Online News Paper

ಲುಲು ಮಾಲ್‌ನಲ್ಲಿನ ಪಾಕ್ ಧ್ವಜದ ಬಗ್ಗೆ ಸುಳ್ಳು ಪ್ರಚಾರ- ಮಾರ್ಕೆಟಿಂಗ್ ಮ್ಯಾನೇಜರ್ ಗೆ ಕೆಲಸ ನಷ್ಟ

ದ್ವೇಷವನ್ನು ಹರಡುವುದು ಮತ್ತು ವ್ಯಕ್ತಿಗಳ ಜೀವನ ಮತ್ತು ಕೆಲಸವನ್ನು ನಾಶಮಾಡುವ ಚಟುವಟಿಕೆಗಳಿಂದ ದೂರವಿರಲು ಎಲ್ಲರೊಂದಿಗೆ ಮನವಿಮಾಡುತ್ತೇನೆ

ಕೊಚ್ಚಿ: ಲುಲು ಮಾಲ್‌ನಲ್ಲಿ ಪ್ರದರ್ಶಿಸಿದ ಪಾಕಿಸ್ತಾನದ ಧ್ವಜವು ಭಾರತದ ಧ್ವಜಕ್ಕಿಂತ ದೊಡ್ಡದಾಗಿದೆ ಎಂಬ ಸುಳ್ಳು ಸುದ್ದಿಯಿಂದಾಗಿ ಲುಲು ಮಾರ್ಕೆಟಿಂಗ್ ಮ್ಯಾನೇಜರ್ ಕೆಲಸ ಕಳೆದುಕೊಂಡಿದ್ದಾರೆ. ಹತ್ತು ವರ್ಷಕ್ಕೂ ಹೆಚ್ಚು ಕಾಲ ಲುಲು ಬ್ರ್ಯಾಂಡ್ ಮಾನ್ಯತೆ ನೋಡಿಕೊಳ್ಳುತ್ತಿದ್ದ ಆತಿರಾ ನಂಬ್ಯಾದಿರಿ ಅವರು ನಕಲಿ ಸುದ್ದಿಯಿಂದಾಗಿ ಕೆಲಸ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಆತಿರಾ ತಮ್ಮ ಲಿಂಕ್ಡ್‌ಇನ್ ಖಾತೆ ಮೂಲಕ ಮಾಹಿತಿ ನೀಡಿದ್ದಾರೆ.

ಒಂದು ದಶಕದಿಂದ ಕಂಪನಿಯಲ್ಲಿ ಕೆಲಸ ಮಾಡಿದ ನಾನು ಸುಳ್ಳು ಪ್ರಚಾರದಿಂದ ಕೆಲಸ ಕಳೆದುಕೊಂಡೆ, ಭಾರತೀಯಳಾಗಿ ನಾನು ಹೆಮ್ಮೆ ಪಡುತ್ತೇನೆ ಮತ್ತು ಈ ದೇಶದ ಪ್ರಜೆಯಾಗಿ ತನ್ನ ದೇಶದ ಬಗ್ಗೆ ಆಳವಾದ ಪ್ರೀತಿಯನ್ನು ಹೊಂದಿದ್ದೇನೆ ಎಂದು ಆತಿರಾ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ದ್ವೇಷವನ್ನು ಹರಡುವುದು ಮತ್ತು ವ್ಯಕ್ತಿಗಳ ಜೀವನ ಮತ್ತು ಕೆಲಸವನ್ನು ನಾಶಮಾಡುವ ಚಟುವಟಿಕೆಗಳಿಂದ ದೂರವಿರಲು ಎಲ್ಲರೊಂದಿಗೆ ಮನವಿ ಮಾಡುತ್ತೇನೆ. ಇದರಿಂದ ತನಗೆ ನಷ್ಟ ಉಂಟಾಗಿದೆ, ಆದರೆ ಈ ದ್ವೇಷಕ್ಕೆ ಯಾರೂ ಒಳಗಾಗಬಾರದು ಎಂದು ಆತಿರಾ ತಮ್ಮ ಪೋಸ್ಟ್ ಅನ್ನು ಕೊನೆಗೊಳಿಸಿದ್ದಾರೆ.

ಲುಲು ಮಾಲ್‌ನಲ್ಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ವಿವಿಧ ತಂಡಗಳ ಧ್ವಜಗಳನ್ನು ಪ್ರದರ್ಶಿಸಲಾಗಿತ್ತು. ಕೆಲವು ಚಿತ್ರಗಳಲ್ಲಿ ಧ್ವಜವು ದೊಡ್ಡದು ಮತ್ತು ಚಿಕ್ಕದಾಗಿ ಕಾಣಿಸುತ್ತದೆ. ಏಕೆಂದರೆ ಅವುಗಳನ್ನು ವಿವಿಧ ಎತ್ತರಗಳಲ್ಲಿ ಇರಿಸಲಾಗಿದೆ. ಆದರೆ ವಾಸ್ತವವಾಗಿ ಅವೆಲ್ಲವೂ ಒಂದೇ ಗಾತ್ರದಲ್ಲಿದೆ. ಫೋಟೋದ ಕೋನವನ್ನು ಅವಲಂಬಿಸಿ ಗಾತ್ರದಲ್ಲಿ ಕಂಡುಬರುವ ವ್ಯತ್ಯಾಸವನ್ನು ಹಿಂದುತ್ವವಾದಿಗಳು ನಕಲಿ ಸುದ್ದಿಗಳನ್ನು ಹರಡಲು ದುರುಪಯೋಗಪಡಿಸಿಕೊಂಡರು. ಈ ಸುಳ್ಳು ಸುದ್ದಿಯನ್ನು ಏಷ್ಯಾನೆಟ್ ಕನ್ನಡ ಆವೃತ್ತಿ ಸುವರ್ಣ ನ್ಯೂಸ್ ಮತ್ತು ಹಿಂದುತ್ವವಾದಿ ಪ್ರತಿಶ್ ವಿಶ್ವನಾಥನ್ ಹಬ್ಬಿಸಿದ್ದಾರೆ.

ಸುವರ್ಣ ನ್ಯೂಸ್ ವಿರುದ್ಧವಾಗಿ ಸ್ವತಃ ಏಷ್ಯಾನೆಟ್ ಮಲಯಾಳಂ ವಾರ್ತೆಯಲ್ಲಿ ಫ್ಯಾಕ್ಟ್ ಚೆಕ್ ಮೂಲಕ ಇದು ಸುಳ್ಳು ಸುದ್ದಿಯೆಂದು ವರದಿಮಾಡಿದೆ.

error: Content is protected !! Not allowed copy content from janadhvani.com