ಕುವೈತ್ ಸಿಟಿ: ಸಿವಿಲ್ ಮತ್ತು ತೈಲ ಕ್ಷೇತ್ರಗಳಲ್ಲಿ ಕೆಲಸದ ಪರವಾನಗಿಯನ್ನು ಅನುಮತಿಸಲು ಮಾನವಸಂಪನ್ಮೂಲ ಸಾರ್ವಜನಿಕ ಪ್ರಾಧಿಕಾರವು 46 ಆರ್ಕಟಿಕ್ ಗಳ ಕಟ್ಟುನಿಟ್ಟಾದ ನಿಬಂಧನೆಗಳನ್ನು ಅನುಷ್ಠಾನಗೊಳಿಸಿದೆ.
- ಅಕ್ರಮ ವಲಸಿಗರಾದ ಬಿದೂನಿ ವಂಶಜರಿಗೆ ಒಂದು ವರ್ಷದ ಅವಧಿಯವರೆಗೆ ನವೀಕರಿಸಲ್ಪಡುವವರಿಗೆ ಪರವಾನಗಿ ಅನುಮತಿ ನೀಡಲಾಗುವುದು.
- ಯುವಕ ಯುವತಿಯರಿಗೆ ಕೆಲವು ನಿಬಂಧನೆಗಳೊಂದಿಗೆ ಕೆಲವು ವಲಯಗಳಲ್ಲಿ ಅನುಮತಿ ನೀಡಲಾಗುತ್ತದೆ.
- ಆದರೆ ಪೆಟ್ರೋ ಕೆಮಿಕಲ್ ಗಳಂತಹ ಪ್ರಮುಖ ವಲಯಗಳಲ್ಲಿ ಅನುಮತಿಸಲಾಗುವುದಿಲ್ಲ.
- ಹೋಟೆಲ್ ಗಳು, ವಕೀಲರ ಅಪೀಸ್‌ಗಳು, ಉದ್ಯಾನವನಗಳು, ಏರ್ಲೈನ್ಸ್, ಆರೋಗ್ಯ ಮತ್ತು ತೈಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ರಾತ್ರಿಯ ಸಮಯದಲ್ಲಿ ಕೆಲಸ ಮಾಡಲು ಅನುಮತಿಸಲಾಗುವುದು.
- ಬ್ಯಾಂಕುಗಳು, ರೆಸ್ಟೋರೆಂಟ್, ಸಾರ್ವಜನಿಕ ವಲಯ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು, ಬ್ಯೂಟಿ ಪಾರ್ಲರ್ಗಳು ಮತ್ತು ಪ್ರವಾಸೋದ್ಯಮ ಕಚೇರಿಗಳಲ್ಲಿ ರಾತ್ರಿ 12 ಗಂಟೆವರೆಗೆ ಕೆಲಸ ಮಾಡಲು ಅನುಮತಿಸಲಾಗುವುದು.
- ಮಹಿಳೆಯರು ತಮ್ಮ ಗಂಡಂದಿರು ಮರಣ ಹೊಂದಿದ್ದಲ್ಲಿ ನಾಲ್ಕು ತಿಂಗಳುಗಳ ವೇತನದೊಂದಿಗೆ ರಜೆಯನ್ನೂ ಪಡೆಯಬಹುದು.
- ಕೆಲಸದ ಸಮಯದಲ್ಲಿ ದಿನಕ್ಕೆ ಎರಡು ಗಂಟೆಗಳ ಕಾಲ ಮಕ್ಕಳಿಗೆ ಹಾಲು ಉಣಿಸಲು ಮಹಿಳೆಯರಿಗೆ ಅವಕಾಶ ನೀಡಲಾಗುತ್ತದೆ.
- ಮಹಿಳೆಯರಸಿದ್ದ ಉಡುಪುಗಳ ಅಂಗಡಿಗಳಲ್ಲಿ, ಬ್ಯೂಟಿ ಸಲೂನ್ ಮತ್ತು ಆರೋಗ್ಯ ಸಂಸ್ಥೆಗಳಲ್ಲಿ ಪುರುಷರನ್ನು ಕೆಲಸಕ್ಕೆ ನೇಮಕಗೊಳಿಸುವುದನ್ನು ಅನುಮತಿಸಲಾಗುವುದಿಲ್ಲ.
- ಕುವೈತ್ ಕಂಪನಿಗಳಲ್ಲಿ ವಿದೇಶಿ ಪಾಲುದಾರರಿಗೆ ಕೆಲಸದ ಪರವಾನಗಿಯನ್ನು ಅನುಮತಿಸಲಾಗುತ್ತದೆ.
- ಉದ್ಯೋಗದಾತನು ನಾಗರಿಕ ಮತ್ತು ತೈಲ ಕ್ಷೇತ್ರಗಳಲ್ಲಿನ ಕೆಲಸಗಾರನ ಪಾಸ್ ಪೋರ್ಟ್ ಅನ್ನು ಹಿಡಿದಿಡಲು ಅನುಮತಿಸುವುದಿಲ್ಲ.
- ಪರಾರಿಯಾ ಕಾರ್ಮಿಕನ ಮತ್ತು ಅಪರಾಧಗಳಲ್ಲಿ ಜೈಲಿನಲ್ಲಿರುವವರ ಕೆಲಸದ ಪರವಾನಗಿಯನ್ನು ರದ್ದುಗೊಳಿಸಲು ಮಾಲೀಕರಿಗೆ ಅನುಮತಿ ನೀಡಲಾಗಿದೆ ಮತ್ತು ಪರಾರಿಯಾದವ ತನ್ನ ಖರ್ಚಿನಲ್ಲೆ ಊರಿಗೆ ಹಿಂದಿರುಗಬೇಕು.
- ಕಾನೂನನ್ನು ಉಲ್ಲಂಘಿಸುವ ಕಾರ್ಮಿಕರ ಕಡತವನ್ನು ತಡೆಯಲಾಗುವುದು.
ಕೆಲಸದ ಅನುಮತಿಯ ವಾಯಿದೆ ಮೂರು ವರ್ಷಗಳಾಗಿವೆ. - ಉದ್ಯೋಗದಾತ ಬ್ಯಾಂಕ್ ಗ್ಯಾರಂಟಿಗಳನ್ನು ಮತ್ತು ಯೋಜನೆಯ ಬಗ್ಗೆ ವಿವರಗಳನ್ನು ಸಲ್ಲಿಸಬೇಕು.
- ಹೊಸ ಕೆಲಸದ ಅನುಮತಿಗಳು ಕಾರ್ಮಿಕರಿಗೆ ಮತ್ತು ಮಾಲೀಕರಿಗೆ ತಮ್ಮ ಹಕ್ಕುಗಳನ್ನು ಕಾಯ್ದಿರಿಸುವ ಮಾನದಂಡವನ್ನು ಹೊಂದಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ