ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (SYS) ಹೀರೆಬಂಡಾಡಿ ಬ್ರಾಂಚ್ ಇದರ 2022-23ನೇ ಸಾಲಿನ ಮಹಾಸಭೆಯು ದಿನಾಂಕ 07/02/2023 ರಂದು ಮಂಗಳವಾರ ಇಶಾ ನಮಾಝಿನ ನಂತರ ಎಸ್.ವೈ.ಎಸ್ ಉಪ್ಪಿನಂಗಡಿ ಬ್ರಾಂಚ್ ಇದರ ವೀಕ್ಷಣಾಧಿಕಾರಿಗಳಾಗಿ ಆಗಮಿಸಿದ ಬಹು.ಹಾರಿಸ್ ಸಖಾಫಿ ಕೆಮ್ಮಾರ ಇವರ ಉಪಸ್ಥಿತಿಯಲ್ಲಿ ಎಸ್ ವೈ ಎಸ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಬಿ.ಟಿ.ಯವರ ಘನ ಅಧ್ಯಕ್ಷತೆಯಲ್ಲಿ ಹೀರೆಬಂಡಾಡಿ ಸುನ್ನಿ ಸೆಂಟರ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದುವಾ ಮಜ್ಲಿಸ್ ನೊಂದಿಗೆ ಬಹು ಇಲ್ಯಾಸ್ ಮದನಿ ನೆರವೇರಿಸಿದರು.
ಬಹು. ಅಬ್ಬಾಸ್ ಮದನಿ ಪ್ರಾಸ್ತಾವಿಕವಾಗಿ ಎಸ್.ವೈ.ಎಸ್ ಹೀರೆಬಂಡಾಡಿ ಬ್ರಾಂಚ್ ಬೆಳೆದು ಬಂದ ರೀತಿಯನ್ನು ಮಹಾಸಭೆಯಲ್ಲಿ ವಿವರಿಸಿದರು . ಎಸ್.ವೈ.ಎಸ್ ಪ್ರಧಾನ ಕಾರ್ಯದರ್ಶಿಗಳಾದ
ಎ.ಎಚ್.ನಾಸಿರ್ ಮಾಸ್ತರ್ ರವರು ಎಸ್ ವೈ ಎಸ್ ಕಾರ್ಯ ಚಟುವಟಿಕೆಗಳನ್ನೊಳಗೊಂಡ ರೀತಿಯನ್ನು ಒಳಗೊಂಡಂತೆ ವಾರ್ಷಿಕ ವರದಿ ಮತ್ತು ಸವಿಸ್ತಾರವಾದ ಲೆಕ್ಕಪತ್ರಗಳನ್ನು ಮಹಾಸಭೆಯಲ್ಲಿ ಮಂಡಿಸಿದರು.
ಎಸ್.ವೈ.ಎಸ್ 2023-24ನೇ ಸಾಲಿನ ಸಾರಥಿಗಳು
ಅಧ್ಯಕ್ಷರು-ಹನೀಫ್.ಕೆ
ಉಪಾಧ್ಯಕ್ಷರು-ಸಲೀಂ ಮುರ
ಪ್ರಧಾನ ಕಾರ್ಯದರ್ಶಿ-ಎ.ಎಚ್. ನಾಸಿರ್ ಮಾಸ್ಟರ್
ಸಾಂತ್ವನ ಕಾರ್ಯದರ್ಶಿ-ಉಮ್ಮರ್ ಕೋಟ್ರಾಸ್
ದಅ್ ವಾ ಕಾರ್ಯದರ್ಶಿ -ಅಬ್ದುಲ್ ರಹ್ಮಾನ್ ಬಿ.ಟಿ.ಎಂ
ಕೋಶಾಧಿಕಾರಿ-ಬಿ.ಟಿ.ಎಂ ಬಶೀರ್ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ
1.ನಝೀರ್ ಪುತ್ತಿಲ,2.ಅದ್ದು ಬೆಲ್ಲುಕಲ್ಲು, 3.ಸುಲೈಮನ್.ಎನ್, 4.ಅಬ್ದುಲ್ ರಝಾಕ್ ಪಾಂಡಿಯಲ್ ಮತ್ತು 5.ಸುಲೈಮಾನ್ ಅಲ್ ಸಫಾ ಹಾಗೂ ಸಲಹೆಗಾರರಾಗಿ ಹಾಜಿ ಬಿ.ಟಿ.ಎಮ್ ಮೊಹಮ್ಮದ್ ಹಾಜಿ ಮತ್ತು ಹಾಜಿ ಅಬುಲ್ ವಫಾ ಖಾಸಿಂ ಮುಸ್ಲಿಯರ್ ಅವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು
ಎ.ಎಚ್.ನಾಸಿರ್ ಮಾಸ್ತರ್ ಸ್ವಾಗತಿಸಿ, ಅಬ್ಬಾಸ್ ಮದನಿಯವರು ಧನ್ಯವಾದಗೈದರು.


