ತಲಕ್ಕಿ: ಕೆಎಂಜೆ, ಎಸ್.ವೈ.ಎಸ್, ಹಾಗೂ ಎಸ್.ಎಸ್.ಎಫ್ ಬೊಳ್ಮಾರ್ ಯುನಿಟ್ ವತಿಯಿಂದ ತಾಜುಲ್ ಉಲಮಾ ಸೌಧ ಉದ್ಘಾಟನೆ ಹಾಗೂ ಸುನ್ನಿ ಸಮ್ಮೇಳನ ಫೆ.7 ಮಂಗಳವಾರ ನಡೆಯಿತು.ದ.ಕ.ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್ ನೂತನ ತಾಜುಲ್‌ಉಲಮಾ ಸೌಧವನ್ನು ಉದ್ಘಾಟಿಸಿದರು.


ಸಯ್ಯಿದ್ ಪಾತೂರು ತಂಙಳ್ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾರೋಪ ಸಮಾರಂಭದ ಅಂಗವಾಗಿ ಅಂತರಾಷ್ಟ್ರೀಯ ವಾಗ್ಮಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಉಸ್ತಾದರು ಧಾರ್ಮಿಕ ಪ್ರವಚನ ನಡೆಸಿದರು.
ಬೊಳ್ಮಾರ್ ಉಸ್ತಾದ್ ಅವರನ್ನು ಸಯ್ಯಿದ್ ಕೂರತ್ ತಂಙಳ್ ಹಾಗೂ ತಲಕ್ಕಿ ತಂಙಳ್ ಅವರು ಶಾಲು ಹೊದಿಸಿ ಸನ್ಮಾನಿಸಿದರು.


ಮುಹಮ್ಮದ್ ಮಿಸ್ಬಾಹಿ ಬೊಳ್ಮಾರ್, ಹಾಗೂ ಇಕ್ಬಾಲ್ ಫಾಳಿಲಿ ಹೆಚ್ಕಲ್ ಪ್ರವಚನ ನಡೆಸಿದರು.
ಸಯ್ಯದ್ ತಲಕ್ಕಿ ತಂಙಳ್ ಅವರು
ಮೂರು ದಿನಗಳ ಕಾಲದ ಸಮ್ಮೇಳನದ ನೇತೃತ್ವ ವಹಿಸಿದ್ದರು. ಸಯ್ಯದ್ ಶಹೀರ್ ತಂಙಳ್ ಪೋಸೋಟ್ ಅವರು ಧ್ವಜಾರೋಹಣ ನಡೆಸಿದ್ದರು.



ಸಯ್ಯಿದ್ ಮದಕ ತಂಙಳ್, ವಾಲೆ ಮುಂಡೊವ್ ಉಸ್ತಾದ್ , ಅಲ್ ಮದೀನಾ ಮಂಜನಾಡಿ ಜನರಲ್ ಮೆನೇಜರ್ ಖಾದರ್ ಸಖಾಫಿ, ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಮುಹಮ್ಮದ್ ಅಲಿ ಸಖಾಫಿ ದಾರುಲ್ ಅಶ್ಹರಿಯ, ಮೂಸಲ್ ಮದನಿ ತಲಕ್ಕಿ, ಬಾಳೆಪುಣೆ ಉಸ್ತಾದ್, ಮತ್ತಿತರರು ಉಪಸ್ಥಿತರಿದ್ದರು.







