janadhvani

Kannada Online News Paper

ಕುವೈಟ್: ವಾಹನಗಳ ರಸ್ತೆ ಪರವಾನಗಿಗೆ ಹೊಸ ಮಾನದಂಡಗಳು

ಕುವೈತ್ ಸಿಟಿ – ವಾಹನಗಳಿಗೆ ರಸ್ತೆ ಪರವಾನಗಿಗಾಗಿ ಹೊಸ ಮಾನದಂಡಗಳನ್ನು ವಿಧಿಸಲು ಪರಿಸರ ಸಾರ್ವಜನಿಕ ಪ್ರಾಧಿಕಾರ ಮುಂದಾಗಿದೆ.ಯೋಜನೆಯನ್ನು ಮುಂದಿನ ವರ್ಷ ಆರಂಭದಲ್ಲಿ ಜಾರಿಗೆ ತರಲಾಗುವುದು ಎಂದು ಅಥಾರಿಟಿ ಮಹಾ ನಿರ್ದೇಶಕ- ಶೈಖ್ ಅಬ್ದುಲ್ಲಾಹ್ ಅಲ್ ಅಹ್ಮದ್ ಅಲ್ ಸಬಾಹ್ ತಿಳಿಸಿದ್ದಾರೆ.

ವಾಹನದ ಹೊಗೆಯು ನಿಸರ್ಗಕ್ಕೆ ಹಾನಿಕಾರಕವಲ್ಲ ಎಂಬುದನ್ನು ಖಚಿತಪಡಿಸುವ ಪರಿಸರ ಸಾರ್ವಜನಿಕ ಪ್ರಾಧಿಕಾರದ ಪ್ರಮಾಣಪತ್ರವನ್ನು ಪಡೆಯಬೇಕು.ಈ ಪ್ರಮಾಣಪತ್ರವನ್ನು ಆಧರಿಸಿ, ಸಂಚಾರ ಇಲಾಖೆಯ ಮೂಲಕ ರಸ್ತೆ ಪರವಾನಗಿ ನವೀಕರಣ ವ್ಯವಸ್ಥೆಯನ್ನು ಏರ್ಪಡಿಸಲಾಗುವುದು.ಪರಿಸರ ಸಾರ್ವಜನಿಕ ಪ್ರಾಧಿಕಾರದ ಪ್ರಮಾಣಪತ್ರವಿಲ್ಲದೆ ಪರವಾನಗಿ ನವೀಕರಿಸಲಾಗುವುದಿಲ್ಲ.ಇದು ದೇಶದ ಎಲ್ಲಾ ವಾಹನಗಳಿಗೆ ಅನ್ವಯಿಸುತ್ತದೆ.

ಶಬ್ದ ಮಾಲಿನ್ಯ ಮತ್ತು ನೈಸರ್ಗಿಕ ಮಲಿನೀಕರಣವನ್ನು ಹೊಂದಿರುವ ವಾಹನಗಳನ್ನು ತೊಡೆದುಹಾಕುವುದು ಗುರಿಯಾಗಿದೆ.

ಮನೆಗಳ ಹೊರಭಾಗದಲ್ಲಿ ಕಣ್ಣಿಗೆ ಹಾನಿಕಾರಕ ಬಣ್ಣವನ್ನು ಬಳಿಯುವುದು, ಮತ್ತು ಮನೆಯ ಬಾಲ್ಕನಿಯಲ್ಲಿ ಬಟ್ಟೆಗಳನ್ನು ಒಣಗಿಸುವುದನ್ನು ಪರಿಸರ ಪ್ರಾಧಿಕಾರವು ನಿಷೇಧಿಸಿದೆ.ಇಂತಹ ಅಪರಾಧಗಳಿಗೆ 150-500 ದಿನಾರ್ ವರೆಗೆ ದಂಡ ವಿಧಿಸಲಾಗುತ್ತದೆ. ಅಧಿಕಾರಿಗಳಿಗೆ ಬಂಧಿಸಲು ಕೂಡ ಅಧಿಕಾರವಿದೆ ಎಂದು ತಿಳಿಸಲಾಗಿದೆ.

error: Content is protected !! Not allowed copy content from janadhvani.com