ಬಗ್ದಾದ್,ಆಗಸ್ಟ್.30: ಇರಾಕ್‌ನಲ್ಲಿನ ಅಶಾಂತಿಯು ಗೊಂದಲವನ್ನುಂಟುಮಾಡುತ್ತಿದೆ, ಶಾಂತಿ ಪುನಃ ಸ್ಥಾಪಿಸಲು ಮತ್ತು ಹಿಂಸಾಚಾರಕ್ಕೆ ಕಾರಣವಾಗುವ ಕೃತ್ಯಗಳಿಂದ ದೂರವಿರಲು ಇರಾಕ್‌ನ ಯುಎಸ್ ರಾಯಭಾರಿ ಅಲೀನಾ ರೊಮಾನೋವ್ಸ್ಕಿ ಅವರು ಎಲ್ಲಾ ಪಕ್ಷಗಳನ್ನು ಒತ್ತಾಯಿಸಿದ್ದಾರೆ.
“ಇರಾಕ್‌ನ ಭದ್ರತೆ, ಸ್ಥಿರತೆ ಮತ್ತು ಸಾರ್ವಭೌಮತ್ವವನ್ನು ಅಪಾಯಕ್ಕೆ ಸಿಲುಕಿಸಬಾರದು” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. “ರಾಜಕೀಯ ಭಿನ್ನಾಭಿಪ್ರಾಯಗಳನ್ನು ಸಂಭಾಷಣೆಯ ಮೂಲಕ ಪರಿಹರಿಸಬೇಕೇ, ಹೊರತು ಮುಖಾಮುಖಿಯ ಮೂಲಕ ಅಲ್ಲ” ಎಂದಿದ್ದಾರೆ.
ಇರಾಕಿ ಜನರಿಗೆ ಸೇರಿರುವ, ಇರಾಕಿ ಸರ್ಕಾರದ ಸಂಸ್ಥೆಗಳು ಮತ್ತು ಆಸ್ತಿಯನ್ನು ಗೌರವಿಸಬೇಕು, ಮತ್ತು ಇರಾಕಿ ಜನರಿಗೆ ಸೇವೆ ಸಲ್ಲಿಸಲು ಹಾಗೂ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂದು ಪ್ರತಿಭಟನಾಕಾರರಿಗೆ ಕರೆ ನೀಡಿದರು.
— Ambassador Alina L. Romanowski (@USAmbIraq) August 29, 2022
ಹಿರಿಯ ಕುರ್ದಿಶ್ ರಾಜಕಾರಣಿ, ಮಸೂದ್ ಬರ್ಝಾನಿ ಅವರು ಸಂಯಮದಿಂದ ಇರಬೇಕೆಂದು ಕರೆ ನೀಡಿದ್ದಾರೆ, “ಘರ್ಷಣೆಗಳನ್ನು ಪರಿಹರಿಸುವಲ್ಲಿ ಶಸ್ತ್ರಾಸ್ತ್ರಗಳು ಮತ್ತು ಹಿಂಸಾಚಾರದ ಭಾಷೆಯನ್ನು ಆಶ್ರಯಿಸಬೇಡಿ” ಎಂದು ಎಲ್ಲಾ ಪಕ್ಷಗಳನ್ನು ಒತ್ತಾಯಿಸಿದ್ದಾರೆ.
ಉತ್ತರ ಇರಾಕ್‌ನ ಅರೆ-ಸ್ವಾಯತ್ತ ಕುರ್ದಿಶ್ ಪ್ರದೇಶದ ಮಾಜಿ ಅಧ್ಯಕ್ಷ ಮತ್ತು ಆಡಳಿತ ಕುರ್ದಿಸ್ತಾನ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥ ಬರ್ಝಾನಿ, “ಇರಾಕಿನ ಜನರಿಗೆ ಒಳ್ಳೆಯದನ್ನು ತರುವ ಪರಿಹಾರಗಳ ಬಗ್ಗೆ ಯೋಚಿಸಲು ಮತ್ತು ಜನರ ಸಾಮಾನ್ಯ ಹಿತಾಸಕ್ತಿಗಳನ್ನು ಪರಿಗಣಿಸಲು” ಎಲ್ಲಾ ಪಕ್ಷಗಳಿಗೆ ಕರೆ ನೀಡಿದರು.
ಯುರೋಪಿಯನ್ ಯೂನಿಯನ್ ಕಳವಳ
ಬಗ್ದಾದ್‌ನಲ್ಲಿನ ಘರ್ಷಣೆಗಳ ಬಗ್ಗೆ ಯುರೋಪಿಯನ್ ಯೂನಿಯನ್ ಕಳವಳ ವ್ಯಕ್ತಪಡಿಸಿದೆ ಮತ್ತು ಎಲ್ಲಾ ಪಕ್ಷಗಳು ಅತ್ಯಂತ ಸಂಯಮದಿಂದ ವರ್ತಿಸಲು ಮತ್ತು ಶಾಂತಯನ್ನು ಕಾಪಾಡಲು ಕರೆ ನೀಡಿದೆ.
“ಹೆಚ್ಚಿನ ಹಿಂಸಾಚಾರಕ್ಕೆ ಕಾರಣವಾಗುವ ಯಾವುದೇ ಕ್ರಮಗಳನ್ನು ತಪ್ಪಿಸುವುದು ಎಲ್ಲಾ ಮುಖಂಡರಿಗೆ ನಿರ್ಣಾಯಕವಾಗಿದೆ” ಎಂದು EU ಹೇಳಿಕೆಯಲ್ಲಿ ತಿಳಿಸಿದೆ.
“ಎಲ್ಲಾ ಕಾನೂನುಗಳನ್ನು ಗೌರವಿಸಬೇಕು ಮತ್ತು ಸಂಸ್ಥೆಗಳ ಸಮಗ್ರತೆಯನ್ನು ರಕ್ಷಿಸಬೇಕು ಎಂದು ನಾವು ಪುನರುಚ್ಚರಿಸುತ್ತೇವೆ. ಎಲ್ಲಾ ಪಕ್ಷಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಕೆಲಸ ಮಾಡಬೇಕು ಮತ್ತು ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಏಕೈಕ ಮಾರ್ಗವಾಗಿ ಸಾಂವಿಧಾನಿಕ ಚೌಕಟ್ಟಿನೊಳಗೆ ರಾಜಕೀಯ ಸಂವಾದದಲ್ಲಿ ತೊಡಗಬೇಕು, ”ಎಂದು ಅದು ಹೇಳಿದೆ.