✍️ ಸಿದ್ದೀಕ್ ಸಖಾಫಿ ಬೊಳ್ಮಾರ್
ಬುಖಾರಿ ಸಾದಾತುಗಳಲ್ಲಿ ಪ್ರಮುಖರೂ, ಸಂಘಟನಾ ಚತುರರೂ, ಕಾಸರಗೋಡು ಜಿಲ್ಲೆಯ ಹೃದಯ ಭಾಗವಾದ ಮಂಜೇಶ್ವರದ ಪೊಸೋಟಿನಲ್ಲಿ ಅಭಿಮಾನವಾಗಿ ತಲೆಯೆತ್ತಿ ನಿಂತಿರುವ ಮಳ್ ಹರ್ ಸಂಸ್ಥೆಯ ರೂವಾರಿಯೂ, ಹಲವಾರು ಮೊಹಲ್ಲಾಗಳ ಖಾಝಿಯೂ,ಸಮಸ್ತ ಕೇಂದ್ರ ಮುಶಾವರ ಸದಸ್ಯರೂ ಆಗಿದ್ದ
ಖಾಝಿ ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಕ್ ಅಲ್ ಬುಖಾರಿಯವರ ವಿದಾಯಕ್ಕೆ ಏಳು ವರ್ಷ ತುಂಬುತ್ತಿದೆ.
ಪೊಸೋಟ್ ತಂಙಳ್ ! ಈ ಹೆಸರು ಕೇಳದವರು ಬಹಳ ವಿರಳ.ಕೇರಳ – ಕರ್ನಾಟಕದ ಜನರಿಗೆ ಚಿರಪರಿಚಿತ ನಾಮ.ಸುನ್ನತ್ತ್ ಜಮಾಅತಿನ ಉಳಿವಿಕೆಗೆ ಆಹೋರಾತ್ರಿ ದುಡಿದ ಮಹಾಪುರುಷ.ತನ್ನ ಜೀವನವನ್ನು ಸಂಪೂರ್ಣ ವಾಗಿ ದೀನಿಗಾಗಿ ಸಮರ್ಪಿಸಿದ ತಂಙಳರು ಕರ್ಮಶಾಸ್ತ್ರ, ವಾಸ್ತು ಶಾಸ್ತ್ರ, ,ವಿಜ್ಞಾನ ಶಾಸ್ತ್ರ..ಮುಂತಾದ ಮಜಲುಗಳಲ್ಲಿ ಅಗಾಧ ಪಾಂಡಿತ್ಯ ವನ್ನು ಹೂಂದಿದ್ದರು.
1961 ಸೆಪ್ಟೆಂಬರ್ 21 (ಮುಹರಂ 24) ರಂದು ಬುಧವಾರ ಕೋಝಿಕ್ಕೋಡ್ ಜಿಲ್ಲೆಯ ಫರೂಖ್ ಸಮೀಪದ ಕಡಲುಂಡಿ ಎಂಬಲ್ಲಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸಂತಾನ ಪರಂಪರೆಯ ಸಯ್ಯಿದ್ ಅಹ್ಮದುಲ್ ಬುಖಾರಿ ಮತ್ತು ತೃಕರಿಪ್ಪುರ್ ಸಯ್ಯಿದತ್ ಫಾತಿಮಾ ಇಂಬಿಚ್ಚಿ ಬೀವಿಯ ಹಿರಿಯ ಪುತ್ರನಾಗಿ ಜನಿಸಿದ ಸಯ್ಯದ್ ಮುಹಮ್ಮದ್ ಉಮರುಲ್ ಫಾರೂಕ್ ಅಲ್ ಬುಖಾರಿ ಬಾಲ್ಯದಲ್ಲೇ ಉತ್ತಮ ಸ್ವಭಾವವನ್ನು ಮೈಗೂಡಿಸಿಕೊಂಡಿದ್ದರು.
ತಕ್ವ,ಇಲ್ಮ್,ವಿನಯ ಮುಂತಾದ ಎಲ್ಲಾ ಸತ್ಕರ್ಮ ದಲ್ಲಿ ಮುಂಚೂಣಿಯಲ್ಲಿದ್ದರು.ಚಿಕ್ಕ ವಯಸ್ಸಿನಲ್ಲಿ ಕಲಿಕೆಗೆ ಅತ್ಯಂತ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು.ಧಾರ್ಮಿಕ ವಿದ್ಯೆ ಕಲಿಯುದರಲ್ಲಿ ಎಲ್ಲಿಲ್ಲದ ಅತೀವ ಆಸಕ್ತಿ.ಯಾರನ್ನು ಆಕರ್ಷಿಸಬಲ್ಲ ಸ್ವಭಾವ, ಆದರ್ಶಧೀರತೆ , ನಿರಾಶ್ರಿತರಿಗೆ ಆಶ್ರಯ , ಹಲವಾರು ನಾಯಕರ ಗುರುವರ್ಯ ಹೀಗೆ ಸಾಗುತ್ತಿದೆ ತಂಙಳರ ಗುಣ ವಿಶೇಷತೆಗಳು.
ಮೂರನೇ ವಯಸ್ಸಿನಿಂದ ತಂದೆಯ ನಿಯಂತ್ರಣದಲ್ಲೇ ಬೆಳೆದರು.ಕರುವಾನ್ ತರುತ್ತಿ ಮದ್ರಸದಲ್ಲಿ ಧಾರ್ಮಿಕ ವಿದ್ಯೆ ಕಲಿಯಲು ಆರಂಭಿಸಿದರು.ತಂದೆಯೇ ದರ್ಸಿನ ಮೂದಲ ಗುರು.ಸ್ಕೂಲ್ ಸಂಬದಿತ ವಿಷಯದಲ್ಲಿ ಕ್ಲಾಸ್ ತೆಗೆಯಲು ಅಧ್ಯಾಪಕರು ಮನೆಗೆ ಬರುತ್ತಿದ್ದರು.ಬಾಲ್ಯ ಪ್ರಾಯದಿಂದಲೇ ಕೆಡುಕಿನಿಂದ ಮುಕ್ತವಾಗಬೇಕೆಂಬ ದೃಢನಿರ್ಧಾರ ದೂಂದಿಗೆ ಪ್ರಾಥಮಿಕ ಶಿಕ್ಷಣವನ್ನು ತಂದೆಯೇ ನೀಡಿದ್ದರು.ಅಲ್ಫಿಯ ಮತ್ತು ಫತುಹುಲ್ ಮುಈನ್ ಗ್ರಂಥವನ್ನು ತಂದೆಯ ಬಳಿ ಯಿಂದಲೇ ಕಲಿತುಕೊಂಡರು.ನಂತರ ತಂದೆಯ ಆಪ್ತ ಮಿತ್ರರೂ,ಸೂಪಿವರ್ಯರೂ ಆದ ಕೋಡುಂಬಝ ಬೀರಾನ್ ಮುಸ್ಲಿಯಾರ್ ರವರ ದರ್ಸ್ ಗೆ ಸೇರಿ ಅವರ ಶಿಷ್ಯತ್ವವನ್ನು ಸ್ವೀಕರಿಸಿದರು.ಸುಮಾರು ಎಂಟು ವರ್ಷಗಳ ಕಾಲ ಬೀರಾನ್ ಉಸ್ತಾದರಿಂದ ವಿದ್ಯಾರ್ಜನೆ.
1963 ರಲ್ಲಿ ತಮಿಳುನಾಡಿನ ಪ್ರತಿಷ್ಠಿತ ವಿದ್ಯಾಕೇಂದ್ರ ವೆಲ್ಲೂರ್ ಬಾಖಿಯಾತ್ ನಿಂದ ಬಾಖವಿ ಪದವೀದರಾಗಿ ಹೂರಬಂದರು. 19ನೇ ವಯಸ್ಸಿನಲ್ಲಿ ತಾಜುಲ್ ಉಲಮಾರ ಸುಪುತ್ರಿ ಹಲೀಮ ಮುತ್ತುಬೀವಿಯವರ ಮಗಳು ಉಮ್ಮುಹಾನಿಯವರೂಂದಿಗೆ ದಾಂಪತ್ಯ ಜೀವನ ಆರಂಭ.ತಂಙಳರು ಸಯ್ಯದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ ಎಂಬ ಒರ್ವ ಪುತ್ರ ಹಾಗೂ ರಫೀದಾ ಬೀವಿ ,ಶಮೀಮ ಬೀವಿ,ನಶೀಫಾ ಬೀವಿ ಎಂಬ ಮೂರು ಪುತ್ರಿಯರನ್ನು ಹೂಂದಿದ್ದಾರೆ.
ಇವರೆಲ್ಲರೂ ಬುಖಾರಿ ವಂಶಕ್ಕೆ ಒಳಪಟ್ಟವರು.ಸುಮಾರು ಆರು ಶತಮಾನಗಳ ಹಿಂದೆ ಹಿಜಿರ 800 ರಲ್ಲಿ ರಷ್ಯದ ಬುಖಾರಾದಿಂದ ಭಾರತದ ಕೇರಳದ ಕಣ್ಣೂರ್ ಜಿಲ್ಲೆಯ ವಳಪಟ್ಟಣಂ ಎಂಬಲ್ಲಿಗೆ ಬಂದ ಸಯ್ಯದ್ ಜಲಾಲುದ್ದೀನ್ ಅಲ್ ಬುಖಾರಿ ಎಂಬವರ ಮೂಲಕ ದಕ್ಷಿಣ ಭಾರತದಲ್ಲಿ ಬುಖಾರಿ ಕುಟುಂಬವು ಪರಂಪರೆಯಾಯಿತು.
ತಂದೆಯ ಆಶಿರ್ವಾದ ಭರಿತ ಮಾತು ಹಲವಾರು ಬದಲಾವಣೆಗೆ ನಾಂದಿಯಾಯಿತು.ಬಾಖಿಯಾತ್ ನಿಂದ ಪದವೀದರಾಗಿ ಬಂದನಂತರ ಮಲಪ್ಪುರಂ ಜಿಲ್ಲೆಯ ಪಡಿಕೋಟಪಡಿ ಎಂಬಲ್ಲಿ ಒಂದು ವರ್ಷ ಮತ್ತು ಆಕೋಡ್ ನಲ್ಲಿ ಒಂದು ವರ್ಷ ದರ್ಸ್ ಸೇವೆ ಸಲ್ಲಿಸಿದರು.ನಂತರ ತಾಜುಲ್ ಉಲಮಾ ಉಳ್ಳಾಲ್ ತಂಙಳ್ ಖಾಝಿಯಾಗಿದ್ದ ಪೊಸೋಟ್ ಜುಮಾ ಮಸೀದಿಯಲ್ಲಿ ಸುಧೀರ್ಘ ಕಾಲ ದರ್ಸ್ ನಡೆಸುವ ಮೂಲಕ ಕಡಲುಂಡಿ ಪ್ರದೇಶದವರಾದ ಉಸ್ತಾದರು “ಪೊಸೋಟ್ ತಂಙಳ್ “ಎಂಬ ನವನಾಮದಲ್ಲಿ ಪ್ರಖ್ಯಾತಿ ಹೂಂದಿದರು.
ತಾಜುಲ್ ಉಲಮಾರ ಆಶಿರ್ವಾದ ಮತ್ತು ಜಮಾಅತರ ಸಹಕಾರದೂಂದಿಗೆ ದರ್ಸ್ ಅಭಿವೃದ್ಧಿ ಹೂಂದಿತು.ಕೇರಳ ಮತ್ತು ಕರ್ನಾಟಕದ ಹಲವಾರು ವಿದ್ಯಾರ್ಥಿಗಳು ದರ್ಸ್ ನಲ್ಲಿದ್ದರು.ಪ್ರಸ್ತುತ ದರ್ಸ್ ಮುಂದೆ ಸಾಗುತ್ತಿದ್ದರೂ, ಸ್ವಂತ ವಾದ ಸಂಸ್ಥೆ ಸ್ಥಾಪಿಸಲು ಮುಂದಾದರು. ಉಸ್ತಾದುಲ್ ಅಸಾತೀದ್ ಓ.ಕೆ ಉಸ್ತಾದರ ಆಶಿರ್ವಾದದಿಂದ 2000 ಇಸವಿಯಲ್ಲಿ 25 ವಿದ್ಯಾರ್ಥಿಗಳಿಂದ ಆರಂಭಿಸಿದ ಸಂಸ್ಥೆಯು ಇಂದು ವಿವಿಧ ಕ್ಯಾಂಪಸ್ ಗಳಲ್ಲಾಗಿ ಸಾವಿರಾರು ವಿದ್ಯಾರ್ಥಿಗಳು ಧಾರ್ಮಿಕ -ಲೌಖಿಕ ಶಿಕ್ಷಣ ಪಡೆಯುತ್ತಿದ್ದಾರೆ.
ಸರ್ವಶಕ್ತನು ಇನ್ನಷ್ಟು ಸಂಸ್ಥೆ ಯನ್ನು ಉನ್ನತಿಗೇರಿಸಲಿ.
ಶೈಖುನಾ ತಂಙಳುಸ್ತಾದರು 2015 ಸೆಪ್ಟೆಂಬರ್ 26 ರಂದು (ದುಲ್ ಹಜ್ಜ್ 12) ನಮ್ಮಿಂದಗಳಿದರು.ಇದೇ ಬರುವ ಜುಲೈ 21ರಿಂದ 24ರ ವರೆಗೆ ಅವರ 7ನೇ ಉರೂಸ್ ಮುಬಾರಕ್ ಮತ್ತು ಮಳ್’ಹರ್ ಪ್ರಥಮ ಸನದುದಾನ ಸಮ್ಮೇಳನ ಬಹಳ ವಿಜೃಂಭಣೆಯಿಂದ ಮಳ್’ ಹರ್ ಕ್ಯಾಂಪಸ್ ನಲ್ಲಿ ನಡೆಯುತ್ತಿದೆ..ಆ ಕಾರ್ಯಕ್ರಮ ಯಶಸ್ವಿಗೆ ನಿಮ್ಮ ಪಾಲು ಇರಲಿ.