janadhvani

Kannada Online News Paper

ಕರ್ನಾಟಕ ಕಲ್ಚರಲ್ ಪೌಂಡೇಶನ್ ಕುವೈಟ್: ರಾಷ್ಟ್ರೀಯ ಸಮಿತಿಯ ನವ ಸಾರಥಿಗಳು

ಕುವೈಟ್ ಸಿಟಿ: ಕರ್ನಾಟಕ ಕಲ್ಚರಲ್ ಪೌಂಡೇಶನ್(ಕೆಸಿಎಫ್) ಕುವೈಟ್ ರಾಷ್ಟ್ರೀಯ ಸಮಿತಿಗೆ 2022-2023 ರ ಸಾಲಿನ ನವ ಸಾರಥಿಗಳಾಗಿ ಅಧ್ಯಕ್ಷರಾಗಿ ಹುಸೈನ್ ಮುಸ್ಲಿಯಾರ್ ಎರ್ಮಾಡ್, ಪ್ರಧಾನ ಕಾರ್ಯದರ್ಶಿಯಾಗಿ ಯಾಕೂಬ್ ಕಾರ್ಕಳ ಕೋಶಾಧಿಕಾರಿಯಾಗಿ ಮೂಸಇಬ್ರಾಹಿಂ ಇವರನ್ನು ಆಯ್ಕೆ ಮಾಡಲಾಯಿತು.

ಜೂನ್ 17 ಶುಕ್ರವಾರದಂದು ಬದರ್ ಅಲ್ ಸಭಾಂಗಣದಲ್ಲಿ ಜರುಗಿದ ವಾರ್ಷಿಕ ಮಹಾಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಹಮಾನ್ ಸಖಾಫಿರವರ ಅಧ್ಯಕ್ಷತೆ ಯಲ್ಲಿ 2022-23 ನೆ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಉಮರ್ ಝುಹುರಿಯವರ ದುಆದೊಂದಿಗೆ ಕಲಂದರ್ ಶಾಫಿ ಯವರು ಕಿರಾಅತ್ ಪಠಿಸಿ ಪ್ರಾರಂಭಿಸಿದ ಸಭೆಯನ್ನು ಬಾಧುಶ ಸಖಾಫಿ ಉದ್ಘಾಟಿಸಿದರು.

ಅಧ್ಯಕ್ಷೀಯ ಬಾಷಣ ನಡೆಸಿದ ಅಬ್ದುಲ್ ರಹಮಾನ್ ಸಖಾಫಿ ಯವರು ಸ್ವಲಾತ್ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರುವುದರೊಂದಿಗೆ ನಾವು ಮಾಡುವ ಎಲ್ಲಾ ಕಾರ್ಯಗಳು ಪ್ರಾಮಾಣಿಕತೆಯಿಂದ ಕೂಡಿರಬೇಕು ಎಂದರು.ಕೆಸಿಎಫ್ ನ ಉನ್ನತಿಗಾಗಿ ಕೈಜೋಡಿಸಿದ ಎಲ್ಲರನ್ನೂ ಅಭಿನಂದಿಸಿದರು.

ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಉಮರ್ ಝುಹುರಿ, ಕಾರ್ಯದರ್ಶಿ ಸಮೀರ್ ಎಂಜಿನಿಯರ್ ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಬಾಧುಶ ಸಖಾಫಿ ಮಾದಾಪುರ ಕಾರ್ಯದರ್ಶಿ ಮುಸ್ತಫಾ ಉಳ್ಳಾಲ. ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಇಕ್ಬಾಲ್ ಕಂದಾವರ, ಕಾರ್ಯದರ್ಶಿ ಮಲಿಕ್ ಸೂರಿಂಜೆ .
ಅಡ್ಮಿನ್ ವಿಭಾಗದ ಅಧ್ಯಕ್ಷರಾಗಿ ಅಬ್ಬಾಸ್ ಬಳಂಜ, ಕಾರ್ಯದರ್ಶಿ ಉಸ್ಮಾನ್ ಕೋಡಿ .ಪ್ರಕಾಶನ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಸಅದಿ ಝುಹ್ರಿ, ಕಾರ್ಯದರ್ಶಿ ಇಬ್ರಾಹಿಂ ವೇಣೂರು. ಇಹ್ಸಾನ್ ವಿಭಾಗದ ಅಧ್ಯಕ್ಷರಾಗಿ ಫಾರೂಕ್ ಸಖಾಫಿ ಕಾರ್ಯದರ್ಶಿ ತೌಫೀಕ್ ಕಾರ್ಕಳ ನೇಮಕಗೊಂಡರು.

ಅದೇ ರೀತಿ ಕಾರ್ಯಕಾರಿ ಸಮಿತಿಗೆ 13ಸದಸ್ಯರನ್ನು ನೇಮಕ ಗೊಳಿಸಲಾಯಿತು
ಸಭೆಯ ನಿಯಂತ್ರಕ(ಆರ್ ಓ) INC ಸಾಂತ್ವನ ವಿಭಾಗ ಅಧ್ಯಕ್ಷರಾದ ಅಲಿ ಮುಸ್ಲಿಯಾರ್ ಬಹರೈನ್ ಅವರ ನೇತ್ರತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
INC ಕೌನ್ಸಿಲರ್ ಗಳಾಗಿ ಅಬ್ದುಲ್ ರಹ್ಮಾನ್ ಸಖಾಫಿ ಮತ್ತು ಝಕರಿಯಾ ಆನೇಕಲ್ ಅವರನ್ನು ನೇಮಿಸಲಾಯಿತು.

ಹುಸೈನ್ ಮುಸ್ಲಿಯಾರ್ ಕಾರ್ಯಕರ್ತರಿಗೆ ಸಂಘಟನೆ ತರಗತಿ ನಡೆಸಿ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಚರಿಸುವ ಪ್ರತಿ ಸಮಿತಿಗಳ ಉದ್ದೇಶ ಮತ್ತು ಅದರ ಕಾರ್ಯವೈಖರಿಗಳ ಕುರಿತು ಸವಿಸ್ತಾರವಾಗಿ ವಿವರಿಸಿ ಕೆಸಿಎಫ್ ಕಾರ್ಯಕರ್ತನ ಕಾರ್ಯಾಚರಣೆ ಹೇಗಿರಬೇಕೆಂಬುದನ್ನು ತಿಳಿಸಿದರು.

ಝಕರಿಯ್ಯಾ ಆನೇಕಲ್ ಮಾತನಾಡಿ ಸಾಂತ್ವನ ಸಮಿತಿಯ ಅಧೀನದಲ್ಲಿ ಕಳೆದ ಎರಡು ವರ್ಷಗಳಲ್ಲಿ ನಡೆಸಿದ ಸಾಂತ್ವನ ಕಾರ್ಯಗಳು ವಿಶೇಷವಾಗಿ ಕೋವಿಡ್ ಸಮಯದಲ್ಲಿ ನಡೆಸಿದ ಸಾಂತ್ವನ ಕೆಲಸಗಳು ಅನಿವಾಸಿ ಕನ್ನಡಿಗರ ಸಮಸ್ಯೆ ಗಳಿಗೆ ಸ್ಪಂದಿಸಿದ ಕಾರ್ಯವನ್ನು ವಿವರಿಸಿ ಹಾಲಿ ಸಮಿತಿಯು ನಡೆಸಿದ ಕಾರ್ಯ ವೈಖರಿಗಳನ್ನು ನೆನೆಸಿ ಭಾವುಕರಾದರು.

ಫಾರೂಕ್ ಸಖಾಫಿ,ಶಾಹುಲ್ ಹಮೀದ್ ಸಹದಿ, ಬಶೀರ್ ಸಖಾಫಿ ಸಾಂದರ್ಭಿಕವಾಗಿ ಮಾತನಾಡಿದರು. ಝಕಾರಿಯ ಆನೆಕಲ್ ಸ್ವಾಗತಿಸಿ ಮುಸ್ತಾಫ ಉಳ್ಳಾಲ ಧನ್ಯವಾದ ಸಲ್ಲಿಸಿದರು.