ಮಂಗಳೂರು: ಯಾವುದೇ ಬೆಲೆ ತೆತ್ತಾದರೂ ದೇಶದ ಸಂವಿಧಾನ, ಜಾತ್ಯಾತೀತತೆ ಮತ್ತು ಸಾಮರಸ್ಯತೆಯನ್ನು ಸಂರಕ್ಷಿಸುವ ಕಾರ್ಯ ನಮ್ಮಿಂದ ಆಗಬೇಕಿದೆ.ಅದಕ್ಕೆ ಅಲ್ಪ ಸಂಖ್ಯಾತ ವರ್ಗದ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಬೇಕಿದೆ ಎಂದು ಕರ್ನಾಟಕ ಸರಕಾರದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್ ಹೇಳಿದರು.
ನಗರದ ಬೋಲಾರ ಶಾದಿ ಮಹಲ್ ಹಾಲ್ ನಲ್ಲಿ ಸಾಮುದಾಯಿಕ ಸಂಘಟನೆಯಾದ ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೂಲತ ದ.ಕ.ಜಿಲ್ಲೆಯವರಾದ ಹರಿಪ್ರಸಾದ್ ರವರು ಮಾತನಾಡುತ್ತಾ, ಜಿಲ್ಲೆಯ ಅಲ್ಪ ಸಂಖ್ಯಾತರು ಸೇರಿದಂತೆ ಇತರ ಸಮುದಾಯದ ಜನರು ತನ್ನಲ್ಲಿ ಇಟ್ಟ ಸ್ನೇಹ ಪ್ರೀತಿ ಗಳನ್ನು ಮೆರೆಯಲು ಸಾಧ್ಯವಿಲ್ಲ, ಉಳ್ಳಾಲ ಮೂಲದ ಮಾತೃ ಸಂಭಂದವಿರುವ ತನಗೆ ಒಂದು ವೇಳೆ ಹೋರಾಟ ಮನೋ ಸ್ಥೈರ್ಯ ಸೃಷ್ಟಿಯಾಗಿದೆ ಅಂದರೆ,ಅದು ರಾಣಿ ಅಬ್ಬಕ್ಕನ ಹುಟ್ಟಿದ ಮಣ್ಣಿನ ಗುಣ ಮತ್ತು ಈ ನಾಡಿನ ಜನರೊಂದಿಗೆ ಇರುವ ಅನೋನ್ಯತೆಯ ಗುಣ ಎಂದು ಹೇಳಿದರು.
ಈ ದೇಶದಲ್ಲಿ ದ್ವೇಷ ಮತ್ತು ಭಯದ ಮೂಲಕ ಇಲ್ಲಿನ ಅಲ್ಪ ಸಂಖ್ಯಾತರನ್ನು, ಹಿಂದುಳಿದ , ದಲಿತ ,ಬುಡಕಟ್ಟು ಜನರನ್ನು ಗುಲಾಮರನ್ನಾಗಿ ಮಾಡಬಹುದು ಎಂದು ಸಂಘ ಪರಿವಾರ ಕನಸು ಕಾಣುತ್ತಾ ಇದೆ. ಆದರೆ ಈ ದೇಶದಲ್ಲಿ ಜಾತ್ಯಾತೀತ ರಕ್ತ ಹೊಂದಿದ ಅದೆಷ್ಟೋ ನಾಯಕರು ಮತ್ತು ಅವರ ಸಂತತಿ ಅಸ್ತಿತ್ವದಲ್ಲಿ ಇರುವವರೆಗೆ ಆರ್.ಎಸ್.ಎಸ್ ಅಜೆಂಡಾ ಜಾರಿಯಾಗಲು ಬಿಡುವುದಿಲ್ಲ ಎಂದು ಹೇಳಿದರು.
ಈ ದೇಶದಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷ, ತನ್ನ ಪಕ್ಷವನ್ನು ನಂಬಿದ ಜನರಿಗೆ, ಅದರ ವ್ಯತ್ಯಸ್ಥ ಹಲವು ನಾಯಕರ ಅವಧಿಯಲ್ಲಿ ಅನ್ಯಾಯವನ್ನು ಸಹಿಸಬೇಕಾಗಿ ಬಂದದ್ದನ್ನು ಒಪ್ಪಿಕೊಳ್ಳ ಬೇಕಾಗುತ್ತದೆ. ಆದರೂ ಪಕ್ಷದ ನಿಯಮ ಅಲ್ಪ ಸಂಖ್ಯಾತ ಜನರ ಪರವಾಗಿ ದುಡಿಯುವ ನಿಟ್ಟಿನಲ್ಲಿ ಸಾಗಬೇಕಾಗುತ್ತದೆ. ರಾಜಕೀಯದಲ್ಲಿ ಮತಗಳ ಗಳಿಕೆ ,ಅಧಿಕಾರ ಏರು ಪೇರು ಆದರೂ ಕೂಡ ತನ್ನ ಪಕ್ಷವನ್ನು ನಂಬಿದವರ ಪರ ನಿಲ್ಲುವ ಪ್ರತಿಜ್ಞೆಯನ್ನು ನಾನು ಖಂಡಿತ ತಳೆದಿದ್ದೇನೆ ಎಂದು ಹೇಳಿದರು.
ಇಂದು ಹಿಜಾಬ್, ಅಝಾನ್,ಲವ್ ಜಿಹಾದ್ ವಿಷಯದಲ್ಲಿ ಬೀದಿ ಪುಂಡರು ಗಲಭೆ ಸೃಷ್ಟಿಸುತ್ತಿದ್ದಾರೆ. ಇಂತವರ ಕೈಯಿಂದ ಪ್ರಜಾಪ್ರಭುತ್ವದ ದೃಢ ನಿಲುವುಗಳ ಮೂಲಕ ಅಧಿಕಾರವನ್ನು ನಾವು ಹಿಂಪಡೆಯಬೇಕು ಎಂದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮುತ್ಸದಿ ರಾಜಕಾರಣಿ, ಭಾರತದಲ್ಲಿ ಜಾತ್ಯತೀತ ನಿಲುವು, ಸಾಂವಿಧಾನಿಕ ಮೌಲ್ಯಗಳ ರಕ್ಷಣೆ, ಬಡವರ, ಶೋಷಿತರ ಮತ್ತು ಅಲ್ಪ ಸಂಖ್ಯಾತ ವರ್ಗದ ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆಯ ಬಗ್ಗೆ ನಿರಂತರ ಪ್ರಸ್ತಾಪನೆ, ಹಕ್ಕು ಉಲ್ಲಂಘನೆ ಬಗ್ಗೆ ಮುಕ್ತವಾಗಿ ದ್ವನಿ ಎತ್ತುವ ಓರ್ವ ಪಕ್ಷ ನಿಷ್ಠೆ ಕಾಂಗ್ರೆಸ್ಸಿಗರು ಆದ ಹರಿಪ್ರಸಾದ್ ರವರಿಗೆ ಇಂದು ಮಂಗಳೂರಿನಲ್ಲಿ ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಶ್ರೀ ಕೆ. ಎಸ್. ಮೊಹಮ್ಮದ್ ಮಸೂದ್ ನೇತೃತ್ವದಲ್ಲಿ,ಸಂಸ್ಥೆಯ ಇತರ ಪದಾಧಿಕಾರಿಗಳು, ಸದಸ್ಯರು ಮತ್ತು ಸಾರ್ವಜನಿಕರ ಸಮಕ್ಷಮ ಶಾಲು ಸಮರ್ಪಿಸಿ,ಫಲಕ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಕರ್ನಾಟಕ ಸರಕಾರ ವಿರೋಧ ಪಕ್ಷ ಉಪ ನಾಯಕರಾದ ಶ್ರೀ ಯು.ಟಿ. ಖಾದರ್ ರವರು ಮತ್ತು ಮಾಜಿ ಶಾಸಕರಾದ ಶ್ರೀ ಮೊಯಿದಿನ್ ಭಾವ ರವರು ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಸ್ಥೆಯ ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಪ್ರಧಾನ ಕಾರ್ಯದರ್ಶಿಯಾದ ಹಾಜಿ ಮೊಹಮ್ಮದ್ ಹನೀಫ್,ಉಪಾಧ್ಯಕ್ಷರಾದ ಪುತ್ತು ಬಾವ ಹಾಜಿ, ಕೆ.ಅಶ್ರಫ್, ಸಿ.ಎಂ.ಮುಸ್ತಾಫಾ, ಬೀ. ಎಚ್ ಖಾದರ್,ಸಹ ಕಾರ್ಯದರ್ಶಿಗಳಾದ ನೂರುದ್ದೀನ್ ಸಾಲ್ಮರ, ಸದಸ್ಯರಾದ ಮೊಯಿದಿನ್ ಮೋನು, ಅಹ್ಮದ್ ಬಜಾಲ್, ನಾಸಿರ್ ಲಕ್ಕಿ ಸ್ಟಾರ್, ಮನಪಾ ಮಾಜಿ ಸಚೇ ತಕರಾದ ಶಶಿಧರ ಹೆಗ್ಡೆ , ನಗರ ಪಾಲಿಕೆ ಕಾರ್ಪೊರೇಟರ್ ಅಬ್ದುಲ್ ರವೂಫ್ , ಕಾರ್ಪೊರೇಟರ್ ಅಶ್ರಫ್, ಸಂಶುದ್ದೀನ್ ಏಚ್.ಬೀ.ಟಿ , ಮೊಹಮದ್ ಕುಂಜತ್ ಬೈಲ್, ಸ್ಟೀಲ್ ಸೆಂಟರ್ ಮೂಸಾ ಮೊಯಿದಿನ್,ಅಬ್ದುಲ್ ಜಲೀಲ್ ಕೃಷ್ಣಾಪುರ, ಬಶೀರ್ ಬೈಕಂಪಾಡಿ,ಅಶ್ರಫ್ ಬದ್ರಿಯಾ,ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಅಧ್ಯಕ್ಷರಾದ ಸಾಹುಲ್ ಹಮೀದ್,ಮೊಹಮ್ಮದ್ ಬಪ್ಪಲಿಕೆ,ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಮೊಹಮ್ಮದ್ ಮೋನು,ಪ್ರತಿಭಾ ಕುಳಾಯಿ, ಸಿ.ಎಂ.ಹನೀಫ್, ಬೀ. ಎಸ್.ಇಮ್ತಿಯಾಜ್, ಷರೀಫ್ ದೇರಳಕಟ್ಟೆ, ಇಬ್ರಾಹಿಂ ಕೊಣಾಜೆ, ಸೋಷಿಯಲ್ ಫಾರೂಕ್, ಮಾಜಿ ಕಾರ್ಪೊರೇಟರ್ ಅಬೂಬಕ್ಕರ್ ಕುದ್ರೋಳಿ, ಸದಸ್ಯರಾದ ಡಿ.ಎಂ. ಅಸ್ಲಂ ಮುಂತಾದವರು ಉಪಸ್ಥಿತರಿದ್ದರು.
ಸಂಸ್ಥೆಯ ವತಿಯಿಂದ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಸಮವಸ್ತ್ರ ವಿತರಣೆ ಮಾಡಲಾಯಿತು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಎಸ್. ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಗೈದ ವಿಧ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಕೊನೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಕೆ.ಅಶ್ರಫ್ ರವರು ಅತಿಥಿಗಳಿಗೆ ಧನ್ಯವಾದ ಸಮರ್ಪಿಸಿದರು.
















ಇನ್ನಷ್ಟು ಸುದ್ದಿಗಳು
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?