janadhvani

Kannada Online News Paper

ಪ್ರವಾದಿ ನಿಂದನೆ: ಕುವೈಟ್ ಮತ್ತು ಇರಾನ್ ನಿಂದಲೂ ಭಾರತೀಯ ರಾಯಭಾರಿಗಳಿಗೆ ಸಮನ್ಸ್

ಒಮಾನ್‌ನ ಗ್ರ್ಯಾಂಡ್ ಮುಪ್ತಿ ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರು ಮಧ್ಯಪ್ರಾಚ್ಯ (ಗಲ್ಫ್) ಮಾರುಕಟ್ಟೆಗಳಲ್ಲಿ ಭಾರತೀಯ ಉತ್ಪನ್ನಗಳ ಸಾಮೂಹಿಕ ಬಹಿಷ್ಕಾರಕ್ಕೆ ಕರೆ ನೀಡಿದ್ದರು.

ಹೊಸದಿಲ್ಲಿ,ಜೂ.5: ಪ್ರವಾದಿ ಮುಹಮ್ಮದ್ ಅವರ ಕುರಿತು ಬಿಜೆಪಿ ನಾಯಕಿ ನೂಪುರ ಶರ್ಮಾ ವಿರುದ್ಧ ಅರಬ್ ದೇಶಗಳು ತೀವ್ರ ಆಕ್ರೋಶಗೊಂಡಿವೆ. ಈಗಾಗಲೇ ಖತರ್ ಸರ್ಕಾರ ಭಾರತೀಯ ರಾಯಭಾರಿಗೆ ಸಮನ್ಸ್ ಹೊರಡಿಸಿದ್ದು,”ಇದಕ್ಕೂ ಭಾರತೀಯ ಸರಕಾರದ ದೃಷ್ಟಿಕೋನಕ್ಕೂ ಯಾವುದೇ ಸಂಬಂಧವಿಲ್ಲ, ಇದೆಲ್ಲ ಒಂದು ಗುಂಪಿನ ದೃಷ್ಟಿಕೋನಗಳು” ಎಂದು ರಾಯಭಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಕತರ್ ಬಳಿಕ ಕುವೈತ್ ಸರಕಾರವು ರವಿವಾರ ಭಾರತದ ರಾಯಭಾರಿಯನ್ನು ಕರೆಸಿಕೊಂಡು ಶರ್ಮಾ ವಿರುದ್ಧ ಸಂಪೂರ್ಣ ತಿರಸ್ಕಾರವನ್ನು ವ್ಯಕ್ತಪಡಿಸಿತಲ್ಲದೆ,ಅಧಿಕೃತ ದೂರು ಪತ್ರವನ್ನೂ ನೀಡಿತು.

ಕುವೈತ್ ಸರಕಾರವು ಭಾರತೀಯ ರಾಯಭಾರಿಯನ್ನು ಕರೆಸಿಕೊಂಡು ತನ್ನ ಅನುಚಿತ ಹೇಳಿಕೆಯಿಂದ ಮುಸ್ಲಿಮ್ ಜಗತ್ತಿನಲ್ಲಿ ಆಕ್ರೋಶವನ್ನು ಸೃಷ್ಟಿಸಿರುವ ಶರ್ಮಾ ವಿರುದ್ಧಅಧಿಕೃತ ದೂರನ್ನು ಸಲ್ಲಿಸಿದೆ.

ಶರ್ಮಾರ ಹೇಳಿಕೆಗಾಗಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವ ಬಿಜೆಪಿಯ ನಿರ್ಧಾರವನ್ನು ಕುವೈತ್ ಸರಕಾರವು ಪ್ರಶಂಸಿಸಿದೆ ಎಂದು ವಿದೇಶಾಂಗ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಇರಾನ್ ಆಕ್ರೋಶ

ಇಸ್ಲಾಂ ಧರ್ಮದ ಪ್ರವಾದಿ ವಿರುದ್ಧ ಬಿಜೆಪಿಯ ನಾಯಕರು ನೀಡಿದ ಅವಹೇಳನಕಾರಿ ಹೇಳಿಕೆಗಳ ಕುರಿತು ಇರಾನ್, ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದೆ.

ಮುಂದಿನ ವಾರ ಇರಾನ್ ವಿದೇಶಾಂಗ ಸಚಿವರು ಹೊಸದಿಲ್ಲಿಗೆ ಮೊದಲ ಬಾರಿಗೆ ಪ್ರವಾಸಕ್ಕೆ ಆಗಮಿಸುವ ಮುಂಚಿತವಾಗಿ ಇರಾನ್ ವಿದೇಶಾಂಗ ಸಚಿವಾಲಯವು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರಿಗೆ ಸಮನ್ಸ್ ಹೊರಡಿಸಿದ್ದು, “ಭಾರತೀಯ ಟಿವಿ ಕಾರ್ಯಕ್ರಮದಲ್ಲಿ ಇಸ್ಲಾಂನ ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ”ಯನ್ನು ಉಲ್ಲೇಖಿಸಿದೆ.

ಒಮಾನ್‌ನ ಗ್ರ್ಯಾಂಡ್ ಮುಪ್ತಿ ಸೇರಿದಂತೆ ಮಧ್ಯಪ್ರಾಚ್ಯದ ಹೆಚ್ಚಿನ ಸಂಖ್ಯೆಯ ಜನರು ಮಧ್ಯಪ್ರಾಚ್ಯ (ಗಲ್ಫ್) ಮಾರುಕಟ್ಟೆಗಳಲ್ಲಿ ಭಾರತೀಯ ಉತ್ಪನ್ನಗಳ ಸಾಮೂಹಿಕ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ನಂತರ ಹಲವಾರು ಮಾರುಕಟ್ಟೆಗಳಿಂದ ಭಾರತೀಯ ಉತ್ಪನ್ನಗಳನ್ನು ತೆಗೆದುಹಾಕಲಾಗಿತ್ತು.

ಪ್ರವಾದಿ ನಿಂದನೆ: ಭಾರತೀಯ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದ ಖತರ್

error: Content is protected !! Not allowed copy content from janadhvani.com