ಕುವೈಟ್ ಸಿಟಿ : ಕುವೈಟ್ ಗೆ ಭೇಟಿ ನೀಡುವ ಸಲುವಾಗಿ ನಡೆಸಲಾಗುವ ವೈದ್ಯಕೀಯ ಪರೀಕ್ಷೆಯ ಕಾರ್ಯವಿಧಾನದ ವ್ಯಾಪ್ತಿಯಿಂದ ಖದಾಮತ್ ಇಂಟರ್ಗ್ರೇಟೆಡ್ ಸೆಲ್ಯೂಷನ್ ಕಂಪನಿಯನ್ನು ಹೊರಗಿಡಲು ಭಾರತದ ಕುವೈಟ್ ರಾಯಭಾರ ಕಚೇರಿ ಆದೇಶ ನೀಡಿದೆ.
ಗಾಂಕ ಮೆಡಿಕಲ್ ಸೆಂಟರ್ ಬದಲಿಯಾಗಿ ಕಾರ್ಯನಿರ್ವಹಿಸಲಿದೆ. ಇದಲ್ಲದೆ, ವೀಸಾ ಸ್ಟ್ಯಾಂಪಿಂಗ್ಗೆ ಸಂಬಂಧಿಸಿದಂತೆ ಮೂರು ಏಜನ್ಸಿ ಗಳನ್ನು ಬದಿಗಿಟ್ಟು ನೇರವಾಗಿ ಅಪ್ಲಿಕೇಶನ್ ಗಳನ್ನು ಸ್ವೀಕರಿಸಲು ನಿರ್ಧರಿಸಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಗಾಂಕವನ್ನು ಬದಲಾಯಿಸಿ ಖದಾಮತ್‌ಗೆ ಜವಾಬ್ದಾರಿ ನೀಡಲಾಗಿತ್ತು.ಆದರೆ ಖದಾಮತ್ ಕಂಪನಿಯು ವೈದ್ಯಕೀಯ ಪರೀಕ್ಷೆಗೆ ಭರಿಸಲಾಗುತ್ತಿದ್ದ 3,600 ರೂ.ವನ್ನು 12,000 ಕ್ಕೆ ಹೆಚ್ಚಿಸಿತ್ತು. ಪ್ರತಿಭಟನೆಯ ಹೊರತಾಗಿಯೂ, ದರವನ್ನು ಕಡಿಮೆ ಮಾಡಲು ಕಂಪನಿಯು ಸಿದ್ಧವಾಗಿರಲಿಲ್ಲ. ಅದೂ ಅಲ್ಲದೆ ಕೇರಳದ ಕೊಚ್ಚಿಯಲ್ಲಿ ಏಕೈಕ ಕೇಂದ್ರವಾಗಿತ್ತು ಖದಾಮತ್ ಗೆ ಇರುವುದು.
ಗಾಂಕ ಕಂಪೆನಿಯು ಕೊಚ್ಚಿ, ತಿರುವನಂತಪುರಂ ಮತ್ತು ಕಲ್ಲಿಕೋಟೆಗಳಲ್ಲಿ ವೈದ್ಯಕೀಯ ಪರೀಕ್ಷಾ ಕೇಂದ್ರಗಳನ್ನು ಹೊಂದಿದೆ.
ವಿಸಾ ಸ್ಟಾಂಪಿಂಗ್, ಮಾವಾರಿದ್ ಸರ್ವೀಸ್, ಆಪರೇಟಿವ್ ಪ್ರಾಜೆಕ್ಟ್ ಯುನೈಟೆಡ್ ಲಿಮಿಟೆಡ್ ಮತ್ತು ಡಾನಾ ಎಂಟರ್ಪ್ರೈಸಸ್‌ಗಳಿಗೆ ಬದಲಾಗಿ ನೇರವಾಗಿ ಅರ್ಜಿಗಳನ್ನು ಪಡೆಯಲು ಕುವೈತ್ ರಾಯಭಾರಿ ಕಚೇರಿ ಹೊರಡಿಸಿದ ಸುತ್ತೋಲೆಯಲ್ಲಿ ಕೋರಿದ್ದಾರೆ. ಅಂದರೆ ಈ ಮೂಲಕ ಅರ್ಜಿ ಸಲ್ಲಿಸುವವರಿಗೆ 5000 ಕ್ಕಿಂತಲೂ ಕಡಿಮೆ ವೆಚ್ಚ ತಗುಲುತ್ತದೆ.