janadhvani

Kannada Online News Paper

ಉತ್ತರ ಪ್ರದೇಶದಲ್ಲಿ ಮತ್ತೆ ಯೋಗಿ ಕಮಾಲ್- ಬಹುಮತದ ಗೆರೆ ದಾಟಿದ ಬಿಜೆಪಿ

ಗೋರಖ್‌ಪುರದಿಂದ ಯೋಗಿ ಆದಿತ್ಯನಾಥ್ ಮತ್ತು ಕರ್ಹಾಲ್‌ನಿಂದ ಅಖಿಲೇಶ್ ಯಾದವ್ ಮುನ್ನಡೆ ಸಾಧಿಸಿದ್ದಾರೆ.

ಲಕ್ನೋ: ಉತ್ತರ ಪ್ರದೇಶದ ಕುರುಕ್ಷೇತ್ರದಲ್ಲಿ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್  ಜೋಡಿ ಕಮಾಲ್ ಮಾಡಿದೆ. ಗುರುವಾರ ಮತ ಎಣಿಕೆ ಆರಂಭವಾಗಿ ಎರಡು ಗಂಟೆ ಕಳೆಯುವಷ್ಟರಲ್ಲಿ ಆಡಳಿತಾರೂಢ ಬಿಜೆಪಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಬಹುಮತದ 202 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 300ರ ಗಡಿ ದಾಟುವತ್ತ ಮುನ್ನಡೆಯುತ್ತಿರುವ ಬಿಜೆಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಭರವಸೆಗೆ ತಣ್ಣೀರೆರಚಿದೆ.

ಬೆಳಗ್ಗೆ 9:30ಕ್ಕಿಂತ ಸ್ವಲ್ಪ ಮೊದಲು ಬಿಜೆಪಿ 250 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಅದು 300ರ ಗಡಿ ದಾಟುವ ನಿರೀಕ್ಷೆ ಮೂಡಿಸಿದೆ. ಸಮಾಜವಾದಿ ಪಕ್ಷವು ಎರಡನೇ ಸ್ಥಾನದಲ್ಲಿದ್ದು ಕಳೆದ ಚುನಾವಣೆಗಿಂತ ಸ್ವಲ್ಪ ಲಾಭ ಪಡೆದಿದೆ. ಆದರೆ ಪಕ್ಷದ ನಿರೀಕ್ಷೆಗಿಂತ ಬಹಳ ಹಿಂದೆ ಬಿದ್ದಿದೆ.

ಮೂರನೇ ಸ್ಥಾನದಲ್ಲಿರುವ ಬಿಎಸ್‌ಪಿ ಎರಡಂಕಿ ದಾಟಲು ಸಾಧ್ಯವಾಗಿಲ್ಲ. ಗೋರಖ್‌ಪುರದಿಂದ ಯೋಗಿ ಆದಿತ್ಯನಾಥ್ ಮತ್ತು ಕರ್ಹಾಲ್‌ನಿಂದ ಅಖಿಲೇಶ್ ಯಾದವ್ ಮುನ್ನಡೆ ಸಾಧಿಸಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿ ನೀಲಕಂಠ ತಿವಾರಿ ಕಾಶಿ ವಿಶ್ವನಾಥ್ ಕ್ಷೇತ್ರದಿಂದ ಹಿನ್ನಡೆಯಲ್ಲಿದ್ದಾರೆ. 

ಬಿಜೆಪಿ     ಎಸ್ಪಿ     ಬಿಎಸ್ಪಿ     ಕಾಂಗ್ರೆಸ್ ಇತರೆ
251        112       08          08        04

error: Content is protected !! Not allowed copy content from janadhvani.com