ರಿಯಾದ್: ಸೌದಿ ಅರೇಬಿಯಾದಲ್ಲಿ ಇಖಾಮಾ ಮತ್ತು ಮರು-ಪ್ರವೇಶದ ಉಚಿತ ನವೀಕರಣೆ ಗಡುವನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ. ಸೌದಿ ದೊರೆ ಈ ಹಿಂದೆ ಹಲವು ಬಾರಿ ಗಡುವನ್ನು ವಿಸ್ತರಿಸಿದ್ದರು. ಕೊನೆಯದಾಗಿ ಜನವರಿ 31ರವರೆಗೆ ಗಡುವು ವಿಸ್ತರಿಸಲಾಗಿತ್ತು. ನಿನ್ನೆ ಮತ್ತೆ ದೊರೆ ಸಲ್ಮಾನ್ ರಾಜಾ ಆದೇಶ ಹೊರಡಿಸಿದ್ದು, ಇನ್ನೂ ದೇಶಕ್ಕೆ ಮರಳಲು ಸಾಧ್ಯವಾಗದವರಿಗೆ ಈ ಅಧಿಸೂಚನೆಯು ಸಮಾಧಾನ ತಂದಿದೆ.
ಭಾರತೀಯರು ಸೇರಿದಂತೆ 17 ದೇಶಗಳ ಜನರಿಗೆ ಈ ಪ್ರಯೋಜನ ಲಭ್ಯವಾಗಲಿದೆ. ಸೌದಿ ಪಾಸ್‌ಪೋರ್ಟ್ ಪ್ರಾಧಿಕಾರವು ಸಂಬಂಧಪಟ್ಟ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತ ಸೇರಿದಂತೆ, ಪಾಕಿಸ್ತಾನ, ಈಜಿಪ್ಟ್, ಇಂಡೋನೇಷ್ಯಾ, ಟರ್ಕಿ, ಅಫ್ಘಾನಿಸ್ತಾನ ಮತ್ತು ಬ್ರೆಜಿಲ್‌ನ ಜನರು ಸಹ ಪ್ರಯೋಜನ ಪಡೆಯಲಿದ್ದಾರೆ.
ಕೋವಿಡ್ ನಿರ್ಬಂಧಗಳಿಂದಾಗಿ ಸೌದಿ ಅರೇಬಿಯಾಕ್ಕೆ ಮರಳಲು ಸಾಧ್ಯವಾಗದವರಿಗೆ ಮತ್ತೆ ವಿನಾಯಿತಿ ಘೋಷಿಸಲಾಗಿದೆ. ನಿವಾಸ ದಾಖಲೆ, ಮರು-ಪ್ರವೇಶ ವೀಸಾ ಮತ್ತು ಬಳಕೆಯಾಗದ ಸಂದರ್ಶಕರ ವೀಸಾದ ಸಿಂಧುತ್ವವನ್ನು ವಿಸ್ತರಿಸಲಾಗುವುದು. ಜವಾಝಾತ್ ಇಲಾಖೆಯು ಮುಂದಿನ ದಿನಗಳಲ್ಲಿ ಅಂತಹ ವೀಸಾಗಳ ಮಾನ್ಯತೆಯನ್ನು ಸ್ವಯಂಚಾಲಿತವಾಗಿ ನವೀಕರಿಸಲಿದೆ.
















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ