ಎಸ್.ಡಿ.ಪಿ.ಐ. ಬೋಳಿಯಾರ್ ಗ್ರಾಮ ಸಮಿತಿ ವತಿಯಿಂದ ಮಾಹಿತಿ ಮತ್ತು ಸೇವಾ ಕೇಂದ್ರ ಬೋಳಿಯಾರ್ ಅಲ್ ಅಮೀನ್ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಂಡಿತು.ಎಸ್.ಡಿ.ಪಿ.ಐ.ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ ಮಾಹಿತಿ ಮತ್ತು ಸೇವಾ ಕೇಂದ್ರವನ್ನು ಉದ್ಘಾಟಿಸಿದರು.
ಬೋಳಿಯಾರ್ ಜುಮಾ ಮುಹಿಯುದ್ದೀನ್ ಜುಮಾ ಮಸೀದಿ ಖತೀಬರಾದ ಎಮ್.ಎಚ್.ಹಂಝ ಮದನಿ ದುವಾ ನೆರವೇರಿಸಿದರು. ಬೋಳಿಯಾರ್ ಗ್ರಾಮ ಸಮಿತಿ ಅಧ್ಯಕ್ಷರಾದ ಶರೀಫ್ ರಂತಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಈ ಸಂದರ್ಭದಲ್ಲಿ ನೂತನ ಸಮಿತಿಯ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಎಸ್.ಡಿ.ಪಿ.ಐ.ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ,ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ಕೆ.ಸಿ.ರೋಡ್,ಝಾಕಿರ್ ಉಳ್ಳಾಲ್,ನಾಸಿರ್ ಸಜೀಪ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಕ್ಷೇತ್ರ ಸಮಿತಿ ಅಧ್ಯಕ್ಷರಾದ
ಇರ್ಷಾದ್ ಅಜ್ಜಿನಡ್ಕ,ಉಪಾಧ್ಯಕ್ಷ ರವಿ ಕುಟಿನ್ಹಾ,ಸದಸ್ಯರಾದ ಅಬ್ಬಾಸ್ ಕಿನ್ಯ,ಅಬ್ದುಲ್ ಲತೀಪ್ ಕೋಡಿಜಾಲ್, ಸಜೀಪ ನಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್.ಎನ್.ಇಕ್ಬಾಲ್, ಪಾವೂರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನ್ಸಾರ್ ಇನೋಳಿ,ಬೋಳಿಯಾರ್ ಗ್ರಾಮ ಪಂಚಾಯತ್ ಸದಸ್ಯ ಹನೀಪ್ ರಂತಡ್ಕ, ಪಜೀರ್ ಗ್ರಾಮ ಪಂಚಾಯತ್ ಸದಸ್ಯರಾದ ಸಿರಾಜ್ ಅರ್ಕಾನ,ಶಫೀಕ್ ಅರ್ಕಾನ,ರಂತಡ್ಕ ಜುಮಾ ಮಸೀದಿಯ ಗೌರವಾಧ್ಯಕ್ಷ ಹಸನ್ ಹಾಜಿ,ಹಿರಿಯ ನಾಗರೀಕರಾದ ಸತ್ತಾರ್ ಮದಕ,ಎಸ್.ಡಿ.ಪಿ.ಐ.ಕೊಣಾಜೆ ಬ್ಲಾಕ್ ಕಾರ್ಯದರ್ಶಿ ಜಾಫರ್ ಪಾನೇಲ,ಎಸ್.ಡಿ.ಪಿ.ಐ.ಉಳ್ಳಾಲ ನಗರ ಸಮಿತಿ ಅಧ್ಯಕ್ಷ ಸುಹೈಲ್ ಉಳ್ಳಾಲ್, ಎಸ್.ಡಿ.ಪಿ.ಐ ಗ್ರಾಮ ಸಮಿತಿ ಮುಖಂಡರಾದ ಅಝೀಝ್ ಬೋಳಿಯಾರ್,ಅರೀಪ್ ಕಾಪಿಕಾಡ್, ಇಮ್ರಾನ್ ರಂತಡ್ಕ,ಸರ್ವಾನ್ ಕಾಪಿಕಾಡ್, ಉದ್ಯಮಿ ಅನ್ವರ್ ರಂತಡ್ಕ.
ಎಸ್.ಡಿ.ಪಿ.ಐ.ಕೊಣಾಜೆ ಬ್ಲಾಕ್ ಅಧ್ಯಕ್ಷರಾದ ಅಶ್ರಫ್ ಮೋನು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಎಸ್.ಡಿ.ಪಿ.ಐ. ಮಂಗಳೂರು ವಿಧಾನ ಸಭಾ ಕ್ಷೇತ್ರ ಜೊತೆ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ಸ್ವಾಗತಿಸಿದರು, ಎಸ್.ಡಿ.ಪಿ.ಐ.ಮುಖಂಡರಾದ ರಹಿಮಾನ್ ಮಠ ವಂದಿಸಿದರು.