janadhvani

Kannada Online News Paper

ಸೌದಿ ಅರೇಬಿಯಾ: ಭಾರೀ ವಿಷ ಪೂರಿತ ಇರುವೆಗಳ ಬಗ್ಗೆ ಎಚ್ಚರ

ರಿಯಾದ್: ವಿಷದ ಪೂರಿತ ಇರುವೆ ಕಚ್ಚಿ ರಿಯಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದ್ದ ಕೇರಳೀಯ ಗೃಹಿಣಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆರೋಗ್ಯ ಪರಿಣಿತರು ಎಚ್ಚರಿಕೆ ನೀಡಿದ್ದಾರೆ.
ಸೌದಿಯಲ್ಲಿ ಕಂಡು ಬರುವ ಕಪ್ಪು ಇರುವೆಗಳು ಗಂಭೀರ ವಿಷಪೂರಿತವಾಗಿದೆ.ಇದು ಮನುಷ್ಯನ ಜೀವಕ್ಕೆ ಅಪಾಯವಾಗಿದೆ.

ಸೌದಿಯ ವಾತಾವರಣವು ಶೀತದಿಂದ ಉಷ್ಣತೆಗೆ ಬದಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ವಿಷಪೂರಿತ ಇರುವೆಗಳು ಕಚ್ಚಿದರೆ ಸಮಸ್ಯೆಯು ಇನ್ನಷ್ಟು ಉಲ್ಬಣಗೊಳ್ಳುತ್ತದೆ. ಇದಕ್ಕಾಗಿ, ರಕ್ಷಣಾ ಮಾರ್ಗವನ್ನು ಅಳವಡಿಸಿಕೊಳ್ಳಬೇಕಾಗಿದೆ.

ಚೇಳುಗಳು ಮತ್ತು ಇರುವೆಗಳು ಕಚ್ಚಿದರೆ ತಕ್ಷಣವೇ ಚಿಕಿತ್ಸೆ ಪಡೆಯಬೇಕು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಉದ್ಯಾನವನಗಳಲ್ಲಿ, ಮಕ್ಕಳ ಬಗ್ಗೆ ಗಮನ ಬೇಕು. ಈ ಇರುವೆಗಳ ಕಚ್ಚುವಿಕೆಯಿಂದ ಆಸ್ತಮಾ ಮತ್ತು ಅಲರ್ಜಿ ರೋಗಿಗಳ ಜೀವಕ್ಕೆ ಅಪಾಯವಿದೆ. ಇಂತಹ ರೋಗಿಗಳನ್ನು ಆಸ್ಪತ್ರೆಗೆ ಕರೆತಂದರೆ, ಸಿಪಿಆರ್ ಪ್ರಕ್ರಿಯೆ ಮೂಲಕ ಕೃತಕ ಉಸಿರಾಟವನ್ನು ನೀಡಲು ಕನಿಷ್ಠ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಮೆದುಳಿನ ಸಾವಿನ ನಂತರ, ಜೀವನಕ್ಕೆ ಹಿಂದಿರುಗುವುದು ಕಷ್ಟ ಎಂದು ತಜ್ಞರು ಹೇಳುತ್ತಾರೆ.

ವಿಷಕಾರೀ ಇರುವೆಯ ಕಡಿತಕ್ಕೊಳಗಾಗಿ ರಿಯಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳದ ಅಡೂರ್ ನಿವಾಸಿ ಸೂಸಮ್ಮ ಜೋಸಿ (33) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ವಾಸವಾಗಿದ್ದ ರಿಯಾದ್ ನ ಫ್ಲಾಟ್ ನಲ್ಲಿ ಕಡಿತಕ್ಕೊಳಗಾಗಿ ನೋವು ಮತ್ತು ಬಳಲುವಿಕೆ ಕಠಿಣ ಗೊಂಡಾಗ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
16 ದಿನಗಳು ಆಸ್ಪತ್ರೆಯ ತೀವ್ರ ನಿಘಾ  ತೀವ್ರ ನಿಗಾ ಘಟಕದಲ್ಲಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.