ದುಬೈ: ಸುಳ್ಳು ವಾರ್ತೆಗಳ ಜಾಡು ಹಿಡಿದು ನಿರ್ನಾಮ ಗೊಳಿಸುವ ಸಲುವಾಗಿ ಫೇಸ್ಬುಕ್ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ(ಮೆನ) ತನ್ನ ಹೊಸ ಸೇವೆಯನ್ನು ಪ್ರಾರಂಭಿಸುವುದಾಗಿ ಕಂಪನಿಯ ಸಾರ್ವಜನಿಕ ನೀತಿ ಮುಖ್ಯಸ್ಥ ನಶ್ವಾ ಅಲಿ ಹೇಳಿದ್ದಾರೆ. ಅವರು ಅರಬ್ ಮಾಧ್ಯಮ ವೇದಿಕೆಯಲ್ಲಿ ಮಾತನಾಡುತ್ತಿದ್ದರು.
ಫೇಸ್ ಬುಕ್ ನಲ್ಲಿ ಲಭ್ಯವಿರುವ ಸುದ್ದಿಗಳ ಪ್ರಾಮಾಣಿಕತೆಯನ್ನು ಖಚಿತಪಡಿಸಿಕೊಳ್ಳಲು ಬಳಕೆದಾರರು ಸಹಕಾರ ನೀಡ ಬೇಕಾಗಿ ಅವರು ವಿನಂತಿಸಿದರು. ಸುಳ್ಳು ವಾರ್ತೆಗಳ ಹರಡುವಿಕೆಯನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಸುಳ್ಳು ಪ್ರಚಾರಗಳು ಫೇಸ್ ಬುಕ್ ಗೆ ಸವಾಲಿದ್ದರೂ ಸಹ ಅದನ್ನು ಹದ್ದುಬಸ್ತಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ.
ಸುಳ್ಳು ಸುದ್ದಿ ಮತ್ತು ಮಾಹಿತಿಯಿಂದ ಬಳಕೆದಾರರನ್ನು ರಕ್ಷಿಸಲು ಈ ಕ್ರಮಗಳನ್ನು ಕಂಪನಿಯು ಸ್ವೀಕರಿಸುತ್ತಿದೆ. ಜಾಹೀರಾತುಗಳು ಅಥವಾ ಮಾಹಿತಿಯಿಂದ ಬಳಕೆದಾರರಿಗೆ ಉಪಟಳ ಉಂಟಾಗದಿರಲು ಶ್ರಮಪಡಲಾಗಿದೆ. ಫೇಸ್ ಬುಕ್ ಪ್ಲಾಟ್ಫಾರ್ಮ್ ಅನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಅದಕ್ಕಾಗಿ ಭದ್ರತಾ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಪತ್ರಕರ್ತರೊಂದಿಗೆ ಸಹಕಾರ: ಅರಬ್ ಜಗತ್ತಿನಲ್ಲಿ ನಕಲಿ ಸುದ್ದಿ ನಿಲ್ಲಿಸಲು ಪತ್ರಕರ್ತರೊಂದಿಗೆ ಸಹಕರಿಸಿ ಕೆಲಸ ಮಾಡುತ್ತಿದೆ. ಹೆಚ್ಚುವರಿಯಾಗಿ, ಮಾಧ್ಯಮ ಸಂಸ್ಥೆಗಳ ಸಹಕಾರದಲ್ಲಿ ಪತ್ರಕರ್ತರಿಗೆ ತರಬೇತಿಯನ್ನು ನೀಡಲಾಗುತ್ತದೆ. ಫೇಸ್ ಬುಕ್ ನಲ್ಲಿ ಸುದ್ದಿಗಳನ್ನು ನಿರ್ವಹಿಸುವುದು ಮತ್ತು ದುರುಪಯೋಗವನ್ನು ತಡೆಗಟ್ಟುವುದಕ್ಕಾಗಿ ತರಬೇತಿ ನೀಡಲಾಗುತ್ತಿದೆ.ಮೋಸದ ಸುದ್ದಿ ಪತ್ತೆಹಚ್ಚಲು ಮತ್ತು ಬಳಕೆದಾರರಿಗೆ ತಲುಪದ ರೀತಿಯಲ್ಲಿ ಇದನ್ನು ನಿರ್ಬಂಧಿಸಲು ಕಂಪನಿಯು ಈ ವ್ಯವಸ್ಥೆಯನ್ನು ಪರಿಷ್ಕರಿಸಿದೆ.
ನಕಲಿ ವಾದಗಳ ಮೂಲಕ ಕಾರ್ಯಾಚರಿಸುವ ವೆಬ್ಸೈಟ್ ಗಳು ಮುಂತಾದವುಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳಲಾಗಿದೆ. ಸೋಷಿಯಲ್ ನೆಟ್ ವರ್ಕಿಂಗ್ ಸೈಟ್ ಗಳಿಗೆ ಯಂತ್ರ ಕಲಿಕೆಯ ಮೂಲಕ ತಪ್ಪು ಪ್ರಚಾರವನ್ನು ಹರಡುವುದರಿಂದ ತಪ್ಪು ಖಾತೆಗಳನ್ನು ತಡೆಯಲು ಸಾಧ್ಯವಿದೆ.
ಸುಳ್ಳುಗಳನ್ನು ಗುರುತಿಸಲು ಮತ್ತು ಅವುಗಳ ಬಗ್ಗೆ ಜನರಿಗೆ ತಿಳಿಸಲು ಸಾಮಾಜಿಕ ಮಾಧ್ಯಮಗಳು ಸಿದ್ಧವಾಗಿರಬೇಕು ಮತ್ತು ಅವುಗಳನ್ನು ತಿಳಿಸಿ, ಸಾಮಾಜಿಕ ಮಾಧ್ಯಮಗಳು ನೀಡುವ ಅನುಕೂಲಗಳ ದುರುಪಯೋಗವನ್ನು ತಡೆಯಲು ಕ್ರಮ ತೆಗೆದುಕೊಳ್ಳ ಬೇಕೆಂದು ಅವರು ಒತ್ತಾಯಿಸಿದರು.