janadhvani

Kannada Online News Paper

ಸೌದಿ: ಒಂದು ವಾರದಲ್ಲಿ ಒಟ್ಟು 15 ಸಾವಿರ ನಿಯಮ ಉಲ್ಲಂಘಕರ ಬಂಧನ

ಅಕ್ಟೋಬರ್ 14 ರಿಂದ 20 ರವರೆಗೆ ವಿವಿಧ ಭದ್ರತಾ ಏಜೆನ್ಸಿಗಳು ಮತ್ತು ಜವಾಝಾತ್ ನಡೆಸಿದ ದಾಳಿಗಳಲ್ಲಿ ಇವರನ್ನು ಬಂಧಿಸಲಾಗಿದೆ

ರಿಯಾದ್: ಸೌದಿ ಅರೇಬಿಯಾದಲ್ಲಿ ಒಂದು ವಾರದಲ್ಲಿ ಒಟ್ಟು 15,688 ಅಪರಾಧಿಗಳನ್ನು ಬಂಧಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಕಾರ್ಮಿಕರು, ವಸತಿ ಮತ್ತು ಗಡಿ ಉಲ್ಲಂಘಿಸುವವರನ್ನು ಸೆರೆಹಿಡಿಯಲಾಗಿದೆ.

ಅಕ್ಟೋಬರ್ 14 ರಿಂದ 20 ರವರೆಗೆ ವಿವಿಧ ಭದ್ರತಾ ಏಜೆನ್ಸಿಗಳು ಮತ್ತು ಜವಾಝಾತ್ ನಡೆಸಿದ ದಾಳಿಗಳಲ್ಲಿ ಇವರನ್ನು ಬಂಧಿಸಲಾಗಿದೆ.ಬಂಧಿತರಲ್ಲಿ 7,088 ಮಂದಿ ನಿವಾಸ ಉಲ್ಲಂಘನೆ ಮಾಡಿದ ವಲಸಿಗರು.ಗಡಿ ಉಲ್ಲಂಘನೆಗಾಗಿ 6,985 ಮತ್ತು ಕಾರ್ಮಿಕ ಕಾನೂನು ಉಲ್ಲಂಘನೆಗಾಗಿ 1,615 ಬಂಧಿಸಲಾಗಿದೆ.

ಈ ಅವಧಿಯಲ್ಲಿ, ಭದ್ರತಾ ಪಡೆಗಳು ಗಡಿ ಕಾನೂನುಗಳನ್ನು ಉಲ್ಲಂಘಿಸಿ ನೆರೆಯ ದೇಶಗಳಿಂದ ಸೌದಿ ಅರೇಬಿಯಾಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿರುವ 406 ಜನರನ್ನು ಬಂಧಿಸಿವೆ. ಇದರಲ್ಲಿ ಶೇ.57 ಯೆಮೆನ್ ಮತ್ತು ಶೇ. 41 ಇಥಿಯೋಪಿಯನ್, ಶೇ 2 ಇತರ ವಿದೇಶಿಗರು.

ಅಕ್ರಮವಾಗಿ ಸೌದಿ ಅರೇಬಿಯಾಕ್ಕೆ ಗಡಿ ದಾಟಲು ಯತ್ನಿಸುತ್ತಿದ್ದ ಹತ್ತು ಮಂದಿಯನ್ನು ಬಂಧಿಸಲಾಗಿದೆ.ಅಪರಾಧಿಗಳಿಗೆ ವಸತಿ ಮತ್ತು ಪ್ರಯಾಣದ ಸೌಕರ್ಯಗಳನ್ನು ಒದಗಿಸಿದ 20 ಜನರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಪ್ರಸ್ತುತ, ಬಂಧಿತರು ಸೇರಿದಂತೆ 86,628 ಜನರು ವಿಚಾರಣೆಗೆ ಕಾಯುತ್ತಿದ್ದಾರೆ. ಇವರಲ್ಲಿ 77,314 ಪುರುಷರು ಮತ್ತು 9,314 ಮಹಿಳೆಯರು. ಗಡೀಪಾರು ಮಾಡುವ ಮೊದಲು,ದಾಖಲೆಗಳನ್ನು ಸರಿಪಡಿಸಲು 71,819 ಮಂದಿಯ ವಿವರಗಳನ್ನು ಆಯಾ ದೇಶಗಳ ರಾಯಭಾರ ಕಚೇರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.