janadhvani

Kannada Online News Paper

ಸೌದಿ: ಕೋವಿಡ್ ನಿರ್ಬಂಧಗಳಲ್ಲಿ ಸಡಿಲಿಕೆ- ಹೊರಾಂಗಣದಲ್ಲಿ ಮಾಸ್ಕ್ ಕಡ್ಡಾಯವಿಲ್ಲ

ಸಾರಿಗೆ, ರೆಸ್ಟೋರೆಂಟ್‌, ಚಿತ್ರ ಮಂದಿರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ.

ರಿಯಾದ್, ಅ.15: ಕರೋನವೈರಸ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಈ ಹಿಂದೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಿಸುವುದಾಗಿ ಸೌದಿ ಅರೇಬಿಯಾ ಶುಕ್ರವಾರ ಘೋಷಿಸಿದೆ.

ಅಕ್ಟೋಬರ್ 17 ರಿಂದ ಜನರು ತೆರೆದ ಸ್ಥಳಗಳಲ್ಲಿ ಮಾಸ್ಕ್ ಧರಿಸುವ ಅಗತ್ಯವಿಲ್ಲ ಆದರೆ ಒಳಾಂಗಣದಲ್ಲಿ ಮಾಸ್ಕ್ ಕಡ್ಡಾಯ ಎಂದು ಆಂತರಿಕ ಸಚಿವಾಲಯದ ಮೂಲವನ್ನು ಉಲ್ಲೇಖಿಸಿ ರಾಜ್ಯ ಸುದ್ದಿ ಸಂಸ್ಥೆ SPA ವರದಿ ಮಾಡಿದೆ.

ಮಸ್ಜಿದುಲ್ ಹರಂ ಮತ್ತು ಮಸ್ಜಿದುನ್ನಬವಿ ಎರಡು ಡೋಸ್ ಲಸಿಕೆ ಪಡೆದವರಿಗೆ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ.ಆದರೆ ಕೆಲಸಗಾರರು ಮತ್ತು ಸಂದರ್ಶಕರು ಸದಾ ಸಮಯ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಅಗತ್ಯವಿಲ್ಲ.

ಸಂಗಮಿಸಲು ಅನುಮತಿಸಲಾಗುವುದು. ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಸಾರಿಗೆ, ರೆಸ್ಟೋರೆಂಟ್‌ಗಳು ಮತ್ತು ಚಿತ್ರಮಂದಿರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ.

error: Content is protected !! Not allowed copy content from janadhvani.com