ಜೂನ್ 30 ಸುರತ್ಕಲ್ : ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಇದರ ವತಿಯಿಂದ ಜೂನ್ 26 ರಿಂದ ಜೂನ್ 30 ರ ತನಕ ಸತತ ಐದು ದಿನಗಳ ” ಗೈಡ್ – 2021″ ಎರಡನೇ ಹಂತದ ಆನ್ಲೈನ್ ತರಗತಿಯು ಗೂಗಲ್ ಮೀಟ್ ಮೂಲಕ ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಅಧ್ಯಕ್ಷರಾದ ಹನೀಫ್ ಅಹ್ಸನಿ ಕಾಮಿಲ್ ಸಖಾಫಿ ಶೇಡಿಗುರಿಯವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ S.P ಹಂಝ ಸಖಾಫಿ ಬಂಟ್ವಾಳ, ಜಾಮಿಯಾ ಮರ್ಕಝ್ ಮುದರ್ರಿಸ್ ಸಯ್ಯಿದ್ ಜಝೀಲ್ ಶಾಮಿಲ್ ಇರ್ಫಾನಿ ಕಾಮಿಲ್ ಸಖಾಫಿ ಮಲಪ್ಪುರಂ, ಎಸ್.ವೈ.ಎಸ್ ಮಲಪ್ಪುರಂ ವೆಸ್ಟ್ ಜಿಲ್ಲೆ ಕಾರ್ಯದರ್ಶಿ ಹಾಫಿಲ್ ಅಬ್ದುಲ್ ಮಜೀದ್ ಅಹ್ಸನಿ, ಎಸ್.ವೈ.ಎಸ್ ಕರ್ನಾಟಕ ರಾಜ್ಯ ಇಸ್ವಾಬಾ ಕಾರ್ಯದರ್ಶಿ ಉಮರ್ ಸಖಾಫಿ ಎಡಪ್ಪಾಲ, ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಟಿ.ಎಮ್ ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ವಿವಿಧ ವಿಷಯಗಳಲ್ಲಿ ತರಗತಿ ನಡೆಸಿದರು.
ಮುಖ್ಯ ಅತಿಥಿಗಳಾಗಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್, ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಮಾಜಿ ನಾಯಕರಾದ ಅಬ್ದುನ್ನಾಸಿರ್ ಮದನಿ ಸೂರಿಂಜೆ, ಹೈದರ್ ಮದನಿ ಸೂರಿಂಜೆ , ಎಸ್ಸೆಸ್ಸೆಫ್ ದ.ಕ ಜಿಲ್ಲೆ ಮಾಜಿ ಕ್ಯಾಂಪಸ್ ಕಾರ್ಯದರ್ಶಿ ಆಸೀಫ್ ಹಾಜಿ ಕೃಷ್ಣಾಪುರ, ಎಸ್.ವೈ.ಎಸ್ ಸುರತ್ಕಲ್ ಸೆಂಟರ್ ಅಧ್ಯಕ್ಷರಾದ ಅಬ್ದುಲ್ಲತೀಫ್ ಸಖಾಫಿ ಕಿನ್ನಿಗೋಳಿ, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಮಾಜಿ ಕಾರ್ಯದರ್ಶಿ ಅಶ್ರಫ್ ಅಂಜದಿ ಪಕ್ಷಿಕೆರೆ, ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಹೈದರ್ 4ನೇ ಬ್ಲಾಕ್ ಕಾಟಿಪಳ್ಳ, ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲೆ ದಅವಾ ಕಾರ್ಯದರ್ಶಿ ಆರೀಫ್ ಝುಹುರಿ ಮುಕ್ಕ, ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲೆ ದಅವಾ ಕನ್ವೀನರ್ ಉಮರ್ ಫಾರೂಕ್ ಸಖಾಫಿ ಕಾಟಿಪಳ್ಳ, ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲಾ ಸದಸ್ಯರಾದ ರಫೀಕ್ 3ನೇ ಬ್ಲಾಕ್ ಕಾಟಿಪಳ್ಳ ಭಾಗವಹಿಸಿದ್ದರು.