janadhvani

Kannada Online News Paper

ಮತ್ತೆ ತೆರೆಯಲ್ಪಟ್ಟಿದೆ ದುಬೈ ವಿಮಾನ ನಿಲ್ದಾಣದ ಟರ್ಮಿನಲ್ ವನ್

ದುಬೈ ವಿಮಾನ ನಿಲ್ದಾಣದ ಟರ್ಮಿನಲ್ ವನ್ ಒಂದೂವರೆ ವರ್ಷಗಳ ಬಳಿಕ ಇದೀಗ ತೆರೆಯಲಾಗಿದೆ.

ಕೋವಿಡ್ ವಿಸ್ತರಣೆಯಿಂದಾಗಿ ಕಳೆದ ಮಾರ್ಚ್‌ನಲ್ಲಿ ಟರ್ಮಿನಲ್ ಮುಚ್ಚಲಾಗಿತ್ತು.ಮುಚ್ಚಿದ 15 ತಿಂಗಳ ನಂತರ, ವಿಶ್ವ ದರ್ಜೆಯ ಟರ್ಮಿನಲ್ ಮತ್ತೆ ಪ್ರಯಾಣಿಕರನ್ನು ಸ್ವಾಗತಿಸುತ್ತಿದೆ. ಮೊದಲ ವಿಮಾನ ರಿಯಾದ್‌ನ ಫ್ಲೈನಾಸ್ ಬಂದಿಳಿದಿದೆ.

ಈ ಟರ್ಮಿನಲ್ ನಿಂದ ಸೇವೆಯನ್ನು ನಿರ್ವಹಿಸುತ್ತಿದ್ದ 65 ವಿಮಾನಯಾನ ಸಂಸ್ಥೆಗಳು ಟರ್ಮಿನಲ್‌ಗೆ ಮರಳುವುದಾಗಿ ತಿಳಿಸಿವೆ. ಏರ್ ಇಂಡಿಯಾ ವಿಮಾನಗಳು ಈಗ ಟರ್ಮಿನಲ್ ಒನ್ ನಿಂದ ನಿರ್ಗಮಿಸಲಿವೆ.

ಟರ್ಮಿನಲ್ 2 ರಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿವೆ. ಸ್ಪೈಸ್‌ಜೆಟ್ ಮತ್ತು ಇಂಡಿಗೊ ಸೇರಿದಂತೆ ವಿಮಾನಗಳು ಟರ್ಮಿನಲ್ ಒನ್‌ನಿಂದ ನಿರ್ಗಮಿಸಲಿವೆ. ತಾತ್ಕಾಲಿಕವಾಗಿ ಟರ್ಮಿನಲ್ ಎರಡು ಮತ್ತು ಮೂರಕ್ಕೆ ಸ್ಥಳಾಂತರಗೊಂಡ ಅನೇಕ ವಿಮಾನಗಳು ಕ್ರಮೇಣ ಟರ್ಮಿನಲ್ ಒನ್‌ಗೆ ಮರಳಲಿದೆ.

ಟರ್ಮಿನಲ್ ಒನ್‌ನಲ್ಲಿ ಡ್ಯೂಟಿ ಫ್ರೀ ಶಾಪ್ ಗಳು ಕೂಡ ಸಕ್ರಿಯವಾಗಿದೆ. ವರ್ಷಕ್ಕೆ 180 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಹಾದು ಹೋಗುವ, ವಿಶ್ವದ ಪ್ರಮುಖ ವಿಮಾನ ನಿಲ್ದಾಣ ಟರ್ಮಿನಲ್ಗಳಲ್ಲಿ ಒಂದಾಗಿದೆ ದುಬೈನ ಟರ್ಮಿನಲ್ ಒನ್.

error: Content is protected !! Not allowed copy content from janadhvani.com