janadhvani

Kannada Online News Paper

ವಾರ ಕಳೆದರೂ ಸಿಗದ ಕೋವಿಡ್ ಟೆಸ್ಟ್ ರಿಪೋರ್ಟ್- ಸಮರ್ಪಕವಾಗಿ ಉತ್ತರಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ

ಎಸ್‌ಡಿಪಿಐ ಆತೂರು ನಿಯೋಗವು ಅಧಿಕಾರಿಗಳ ಬೇಟಿಯ ನಂತರ ದೊರಕಿತು ಟೆಸ್ಟ್ ರಿಪೋರ್ಟ್

ಕಡಬ: ಮೆ 18; ಕಡಬ ತಾಲೂಕಿನ ರಾಮಕುಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕೋವಿಡ್ ಬಾಧಿತರಾಗಿ ಮೃತಪಟ್ಟ ವ್ಯಕ್ತಿಯ ಸುಮಾರು ಮೂವತ್ತೈದರಷ್ಟು ಮನೆಮಂದಿಗಳ ಕೋವಿಡ್ ಟೆಸ್ಟ್‌ ಮಾಡಿಸಿದ್ದು, ಇದರಲ್ಲಿ ಕೇವಲ ಹತ್ತು ಮಂದಿಯ ರಿಪೋರ್ಟ್ ಬಿಟ್ಟರೆ ಉಳಿದವರ ರಿಪೋರ್ಟ್ ವಾರ ಕಳೆದರೂ ಬಂದಿರುವುದಿಲ್ಲ, ಇದರಿಂದಾಗಿ ಮನೆಮಂದಿಗಳು ಆತಂಕದಿಂದಲೇ ದಿನದೂಡಬೇಕಾಗಿದೆ. ಈ ಬಗ್ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆತೂರು ವಲಯವು ಸಂಬಂಧಪಟ್ಟ ಅಧಿಕಾರಿಗಳನ್ನು ಬೇಟಿ ನೀಡಿ ಕೇಳಿದಾಗ ಸಮರ್ಪಕವಾದ ಉತ್ತರ ಯಾರಿಂದಲೂ ಬರದ ಕಾರಣ ಆರೋಗ್ಯ ಇಲಾಖೆಯ ಧೋರಣೆಯ ವಿರುದ್ಧ ಖಂಡನೆ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಈ ಬಗ್ಗೆ ಮಾತನಾಡಿದ ಸ್ಥಳೀಯ ಎಸ್‌ಡಿಪಿಐ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಹಸನ್ ಸಜ್ಜಾದ್ ಹಾಗೂ ಶ್ರೀಮತಿ ಶರೀಫರವರು ಮಾತನಾಡಿ ಕೇವಲ ಅರೋಗ್ಯ ಇಲಾಖೆ ಮಾತ್ರವಲ್ಲ ಇಡೀ ವ್ಯವಸ್ಥೆಯೇ ಉದಾಸೀನತೆ ಪ್ರದರ್ಶಿಸುತಿದೆ. ತಾಲೂಕು ವೈದ್ಯಾಧಿಕಾರಿಗೆ ಕೇಳಿದರೆ ಡಾಕ್ಟರ್ ಗೆ ಕೇಳಿ ಅಂತಾರೆ, ಡಾಕ್ಟರ್ ಗೆ ಕೇಳಿದ್ರೆ ಲ್ಯಾಬ್ ಗೆ ಕೇಳಿ ಅಂತಾರೆ ಲ್ಯಾಬ್ ಗೆ ಕೇಳಿದರೆ ಮಂಗಳೂರಿಗೆ ಕೇಳಿ ಅಂತಾರೆ. ಪಿಡಿಒ ಗೆ ಕೇಳಿದ್ರೆ ನಮಗೆ ಬರಲ್ಲ ಅರೋಗ್ಯ ಇಲಾಖೆಗೆ ಕೇಳಿ ಅಂತಾರೆ. ಇಲ್ಲಿನ ಕೋವಿಡ್ ನೋಡಲ್ ಅಧಿಕಾರಿಗೆ ಕೇಳಿದರೆ ನಮಗೆ ಸಂಬಂಧವೇ ಇಲ್ಲದ ರೀತಿಯಲ್ಲಿ ಬೇಜವಾಬ್ದಾರಿ ಉತ್ತರ ಕೊಡುತ್ತಾರೆ.
ಕೋವಿಡ್ ಟೆಸ್ಟ್ ಮಾಡಿ 9 ದಿನಗಳಾದರೂ ರಿಸಲ್ಟ್ ಬಂದಿರುವುದಿಲ್ಲ. ಈ ಬಗ್ಗೆ ಎಸ್‌ಡಿಪಿಐ ಆತೂರು ವಲಯವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಂತರ ಇದೀಗ ಉಳಿದ ಎಲ್ಲಾ ರಿಪೋರ್ಟ್‌ಗಳನ್ನು ಕೊಟ್ಟಿರುತ್ತಾರೆ.

error: Content is protected !! Not allowed copy content from janadhvani.com