ಸಾಮಾನ್ಯವಾಗಿ ಪ್ರಾರ್ಥನೆ ರಾತ್ರಿ 10 ಗಂಟೆಯವರೆಗೆ ನಡೆಯಲಿದ್ದು, ಪ್ರಾರ್ಥನೆ ಮುಗಿದ ನಂತರ ಸಾರ್ವಜನಿಕರು ಮನೆಗೆ ಹಿಂದಿರುಗಬೇಕಾಗಿದೆ. ಆದರೆ, ರಾತ್ರಿ 10 ಗಂಟೆಗೇ ಕಫ್ಯೂ ೯ ಆರಂಭವಾಗುವುದರಿಂದ ಪ್ರಾರ್ಥನೆ ನಂತರ ಸಾರ್ವಜನಿಕರು ಮನೆಗೆ ತೆರಳುವಾಗ ತೊಂದರೆಗಳುಂಟಾಗುವ ಸಾಧ್ಯತೆಗಳಿವೆ.
ಪ್ರಸಕ್ತ ನಗರದ ಎಲ್ಲಾ ಮಸೀದಿಗಳಲ್ಲಿ ಕೋವಿಡ್ ಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಪ್ರಾರ್ಥನೆ ಸಂದರ್ಭದಲ್ಲಿ ಸಾಮಾಜಿಕ ಅಂತರ, ಮಸೀದಿ ಪ್ರವೇಶಿಸುವಾಗ ಮಾಸ್ಕ್ ಕಡ್ಡಾಯ ಹಾಗೂ ರೋಗಲಕ್ಷಣವಿದ್ದವರಿಗೆ ಪ್ರವೇಶ ನಿರಾಕರಣೆ ಸೇರಿದಂತೆ ಸರಕಾರದ ಎಲ್ಲಾ ನಿರ್ದೇಶನಗಳನ್ನು ಪಾಲಿಸಲಾಗುತ್ತಿದೆ.
ಆದುದರಿಂದ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ರಾತ್ರಿ ಕಫ್ಯೂ ೯ ಅವಧಿಯನ್ನು ರಾತ್ರಿ 10 ಗಂಟೆಯ ಬದಲು ರಾತ್ರಿ 10.30 ಗಂಟೆಯ ನಂತರ ಜಾರಿಗೆ ತರಬೇಕಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ತಾಲೂಕು ಸಮಿತಿ ನಾಯಕರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ ಯವರನ್ನು ಬೇಟಿಯಾಗಿ ವಿನಂತಿಸಿಲಾಯಿತು.
ತಾಲೂಕು ಅಧ್ಯಕ್ಷರಾದ ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ತಾಲೂಕು ನಾಯಕರುಗಳಾದ ಮುಖ್ತಾರ್ ಅಹ್ಮದ್ ಬೈಕಂಪಾಡಿ, ಸೈದುದ್ದೀನ್ ಬೈಕಂಪಾಡಿ,ಎಂ ಹನೀಪ್ ಮಂಗಳೂರು, ಹರ್ಷದ್ ಕಂದಕ್,ರಾಜ್ಯ ಕೋ ಆರ್ಡಿನೇಟರ್ ಅಶ್ರಫ್ ಕಿನಾರ ಮಂಗಳೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.