janadhvani

Kannada Online News Paper

ಡಿವಿಷನ್ ನಾಯಕರಿಗೆ ಎಸ್ಸೆಸ್ಸೆಫ್ ಜಿಲ್ಲಾ ಸಮಿತಿಯಿಂದ ಖೈಮಾ ಶಿಭಿರ

ಇತ್ತೀಚೆಗೆ ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ಡಿವಿಷನ್ ನೇತಾರರಿಗೆ ಏಕ ದಿನ ಖೈಮಾ ಶಿಭಿರ ಅರ್ಬನ್ ವ್ಯಾಲಿ ರೆಸೋರ್ಟ್ ನಲ್ಲಿ ನಡೆಯಿತು.ಸಂಪನ್ಮೂಲ ವ್ಯಕ್ತಿ ಗಳಾಗಿ ಆಗಮಿಸಿದ್ದ ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಮಜೀದ್ ಅರಿಯಲ್ಲೂರು ತರಗತಿಗಳಿಗೆ ನೇತೃತ್ವ ನೀಡಿದರು. ಉದ್ಘಾಟನೆ ಯನ್ನು ವಿಶಿಷ್ಟ ರೀತಿಯಲ್ಲಿ ಬುಖಾರ,ಕೊರ್ಡೋವಾ ಉಂದುಲುಸ್,ಸಮರ್ಕಂದ್ ಎಂಬ ನಾಲ್ಕು ತಂಡಗಳು ದ್ವಜರೋಹಣ ಮಾಡುವ ಮೂಲಕ ಶಿಭಿರಕ್ಕೆ ಚಾಲನೆ ನೀಡಲಾಯಿತು.

ಸಂಶುದ್ದೀನ್ ಅಝ್ಹರಿ, ಸ್ವಾದಿಕ್ ಸಖಾಫಿ,ನಿಕಟ ಪೂರ್ವ ಕಾರ್ಯದರ್ಶಿ ಶಿಹಾಬ್ ಮಡಿವಾಳ ಹಾಗೂ ರಾಜ್ಯ ನಾಯಕರಾದ ಶಾಫಿ ಸ‌ಅದಿ ಮೆಜೆಸ್ಟಿಕ್ ವಿವಿಧ ಸೆಸ್ಸನ್ ಗಳಿಗೆ ನೇತೃತ್ವ ನೀಡಿದರು. ಜಿಲ್ಲಾ ಅಧ್ಯಕ್ಷರಾದ ಹಬೀಬ್ ಉಸ್ತಾದರ ವಿದಾಯ ಭಾಷಣ ದೊಂದಿಗೆ ಶಿಭಿರವು ಕೊನೆಗೊಂಡಿತು.