janadhvani

Kannada Online News Paper

ಎಸ್.ಜೆ.ಯು ಸುಳ್ಯ ಝೋನ್ ಗೆ ನವ ಸಾರಥ್ಯ: ಅಧ್ಯಕ್ಷರಾಗಿ ಕುಂಞಿಕೋಯ ತಂಙಳ್

ಸುನ್ನಿ ಜಂಇಯ್ಯತುಲ್ ಉಲಮಾ ಸುಳ್ಯ ಝೋನ್ ಇದರ ಮಹಾಸಭೆಯು ಎ.ಬಿ.ಹಸನುಲ್ ಫೈಝಿ ಅಜ್ಜಾವರ ರವರ ಅಧ್ಯಕ್ಷತೆಯಲ್ಲಿ ಬಿಳಿಯಾರು ಮನ್‌ಹಜ್ ಸಂಸ್ಥೆಯಲ್ಲಿ ನಡೆಯಿತು. ಸಯ್ಯಿದ್ ಕುಂಞಿಕೋಯ ತಂಙಳ್ ಸ‌ಅದಿ ಸಭೆಯನ್ನು ಉದ್ಘಾಟಿಸಿದರು. ಅಬೂಬಕರ್ ಫೈಝಿ ಕುಂಬಡಾಜೆ ತರಗತಿ ನಡೆಸಿದರು.

ಜಂಇಯ್ಯತುಲ್ ಉಲಮಾ ರಾಜ್ಯ ಕಾರ್ಯದರ್ಶಿ ಮುಹ್ಯಿದ್ದೀನ್ ಸಖಾಫಿ ತೋಕೆ ನವ ಸಾರಥಿಗಳನ್ನು ಘೋಷಿಸಿದರು. ಅಧ್ಯಕ್ಷರಾಗಿ ಸಯ್ಯಿದ್ ಕುಂಞಿಕೋಯ ತಂಙಳ್ ಸ‌ಅದಿ ಸುಳ್ಯ, ಪ್ರಧಾನ ಕಾರ್ಯದರ್ಶಿ- ತೌಸೀಫ್ ಸ‌ಅದಿ ಹರೇಕಳ (ಎಲಿಮಲೆ) ಕೋಶಾಧಿಕಾರಿ-ಅಬ್ಬಾಸ್ ಫೈಝಿ ಜಾಲ್ಸೂರ್, ಉಪಾಧ್ಯಕ್ಷರಾಗಿ ಅಬೂಬಕರ್ ಫೈಝಿ ಕುಂಬಡಾಜೆ, ಹನೀಫ್ ಸ‌ಅದಿ ಪಂಜಿಕಲ್, ಕಾರ್ಯದರ್ಶಿಗಳಾಗಿ ಹಾಫಿಳ್ ಅಬ್ದುಸ್ಸಲಾಂ ನಿಝಾಮಿ ಚೆನ್ನಾರ್,ಅಶ್ರಫ್ ಸಖಾಫಿ ಕುಂಭಕೋಡ್ ಹಾಗೂ 16 ಮಂದಿ ಸದಸ್ಯರನ್ನು ಆರಿಸಲಾಯಿತು.

ಸಭೆಯಲ್ಲಿ ಉಮರ್ ಸಖಾಫಿ ಕಾಜೂರ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಇಬ್ರಾಹಿಂ ಫೈಝಿ ಪೈಚಾರ್, ಇಬ್ರಾಹಿಂ ಸಖಾಫಿ ಪುಂಡೂರ್, ಸಯ್ಯಿದ್ ತ್ವಾಹಿರ್ ತಂಙಳ್, ನಿಝಾರ್ ಸಖಾಫಿ ಮುಡೂರು ಮುಂತಾದ ನಾಯಕರು ಉಪಸ್ಥಿತರಿದ್ದರು.