ಸುಳ್ಯ,ಜನವರಿ 17: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ, ಅಲ್ ಅಮೀನ್ ಯೂತ್ ಸೆಂಟರ್(ರಿ) ಪೈಚಾರ್ ಇದರ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 17 ಜನವರಿ 2020 ನೇ ಆದಿತ್ಯವಾರದಂದು ಪೈಚಾರ್ ಕುವ್ವತಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಜನಾಬ್: ಕರೀಂ ಕೆ.ಎಂ (ಅಧ್ಯಕ್ಷರು ಅಲ್ ಅಮೀನ್ ಯೂತ್ ಸೆಂಟರ್ (ರಿ) ಅಧ್ಯಕ್ಷತೆ ವಹಿಸಿದ್ದ ಸಭಾ ಕಾರ್ಯಕ್ರಮವನ್ನು ಬಹು:ಅಲ್ ಹಾಜ್ ಇಬ್ರಾಹಿಂ ಫೈಝಿ (ಗೌರವ ಅಧ್ಯಕ್ಷರು ಅಲ್ ಅಮೀನ್ ಯೂತ್ ಸೆಂಟರ್) ಉಧ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಎಂ.ಬಿ ಸದಾಶಿವ,ಇಕ್ಬಾಲ್ ಕನಕಮಜಲು,ಸಲಾಮ್ ಮುಸ್ಲಿಯಾರ್,ಇಮ್ರಾನ್ ಬೈತಾರ್ ಹಾಗೂ ಬ್ಲಡ್ ಹೆಲ್ಪ್ ಕರ್ನಾಟಕ(ರಿ) ಇದರ ಕಾರ್ಯ ನಿರ್ವಾಹಕರು ಹಾಗೂ ಅಲ್ ಅಮೀನ್ ಯೂತ್ ಸೆಂಟರ್(ರಿ)ಪೈಚಾರ್ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜನಾಬ್:ಮುಜೀಬ್ ಪೈಚಾರ್ (ಕೋಶಾಧಿಕಾರಿ ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್(ರಿ) ಹಾಗು ಸದಸ್ಯರು ಜಾಲ್ಸೂರು ಗ್ರಾಮ ಪಂಚಾಯಿತ್ ) ಇವರನ್ನು ಸನ್ಮಾನಿಸಲಾಯಿತು
ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ಒಟ್ಟು 36 ಮಂದಿ ರಕ್ತದಾನ ಮಾಡಿ ಜೀವದಾನಿಯಾದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪೈಚಾರ್ ನ ಜನಸ್ನೇಹಿ ನಾಗರಿಕರಿಗೂ ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ದುಡಿದ ಎಲ್ಲಾ ಕಾರ್ಯಕರ್ತರಿಗೂ, ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದ್ದಾರೆ.
ಪ್ರಕಟಣೆ:
ಮಾಧ್ಯಮ ವಿಭಾಗ:
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)