ಉಳ್ಳಾಲ: ತೊಕ್ಕೊಟ್ಟು ಪಂಡಿತ್ ಹೌಸ್ ರಸ್ತೆಗೆ ಹೊಂದಿಕೊಂಡಿರುವ ಬೃಹತ್ ಕಟ್ಟಡ ಒಸಿಯಾ ನಿಕ್ ಫ್ರೈಡ್ ಅಪಾರ್ಟ್ ಮೆಂಟಿ ನಿಂದ ಹೊರ ಬರುವ ಕೊಳಚೆ ನೀರು ರಸ್ತೆ ಬದಿ ನಿಲ್ಲುತ್ತಿದ್ದು, ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಗಬ್ಬೆದ್ದು ನಾರುವ ಮಲಿನ ಗಲೀಜು ವಾಸನೆಯು ಹತ್ತಿರದ ನಿವಾಸಿಗಳು ಹಾಗೂ ವರ್ತಕರ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಉಂಟಾಗಿದೆ.
ಅಪಾರ್ಟ್ಮೆಂಟ್ ನ ಜನರಿಗೆ ಈ ಬಗ್ಗೆ ಹೇಳಿದರೆ ಅವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಹಾಗೂ ಉಡಾಫೆಯಿಂದ ನಡೆದುಕೊಳ್ಳುತ್ತಿದ್ದು, ನೀವು ಏನು ಬೇಕಾದರೂ ಮಾಡಿಕೊಳ್ಳಿ, ನಮ್ಮಿಂದ ಅದನ್ನು ಸರಿ ಮಾಡಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಸಾರ್ವಜನಿಕ ಹಾಗೂ ವರ್ತಕರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ತಕ್ಷಣವೇ ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಅಪಾರ್ಟ್ ಮೆಂಟ್ ಮಾಲೀಕರಿಗೆ ಈ ಬಗ್ಗೆ ಸೂಕ್ತ ತಿಳುವಳಿಕೆ ನೀಡುವ ಜತೆಗೆ ಗಲೀಜು ನೀರು ರಸ್ತೆ ಬದಿ ನಿಲ್ಲದಂತೆ ಸೂಕ್ತ ಕ್ರಮ ಜರುಗಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ಜರುಗಿಸಲು ಪಂಡಿತ್ ಹೌಸ್ ರಸ್ತೆಯ ನಿವಾಸಿಗಳು ಮತ್ತು ವರ್ತಕರು ಉಳ್ಳಾಲ ಪುರಸಭೆ ಅಧಿಕಾರಿಗಳೊಂದಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.