ತ್ವಾಯಿಫ್ ಫೈಟರ್ಸ್ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ನಡೆದ “Taif Champions League Season – 3 (TCL – 3) ಪಂದ್ಯದಲ್ಲಿ D.K Warrior’s, Kiladi Guys Kasaragod, Arab Boys Gurupura ಹಾಗೂ KA-19 Riders Mangalore ಎಂಬ ನಾಲ್ಕು ತಂಡಗಳು ಭಾಗವಹಿಸಿದೆ.
ಕಳೆದ ನಾಲ್ಕು ವಾರಗಳಲ್ಲಾಗಿ ತ್ವಾಯಿಫ್ ನ ಜೂರಿ ಮಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಫೈನಲ್ ಪಂದ್ಯವನ್ನು ಗೆದ್ದು KA 19 Rider’s Mangalore ತಂಡವು ಚಾಂಪಿಯನ್ ಆಗಿ ಹೊರಬಂದಿದೆ.
ಲೀಗ್ ಪಂದ್ಯದಲ್ಲಿ ನಾಲ್ಕು ತಂಡಗಳ ನಡುವೆ ನಡೆದ ಪೈಪೋಟಿಯಲ್ಲಿ ಸಲೀಮ್ ಸೂರಿಂಜೆ ನಾಯಕತ್ವದ KA 19 Riders Mangalore ಹಾಗೂ ಫವಾಝ್ ಬಾಯಾರ್ ನೇತ್ರದ Killadi Guys Kasaragod ತಂಡಗಳು ಫೈನಲ್ ಹಂತ ತಲುಪಿತ್ತು.
ಉತ್ತಮ ಪ್ರದರ್ಶನ ನೀಡಿದ ಇರ್ಶಾದ್ ಸುಳ್ಯ ಉತ್ತಮ ದಾಂಡಿಗ ಪ್ರಶಸ್ತಿ ಪಡೆದುಕೊಂಡರು, ಅಚ್ಚು ಬಂದಿಯೋಡ್ ಉತ್ತಮ ದಾಳಿಗಾರ, ಸಾಬಿತ್ ಮನಾಲ್ ಉತ್ತಮ ವಿಕೇಟ್ ಕೀಪಿಂಗ್, ಶಫೀಕ್ ಮಂಜೇಶ್ವರ ಉತ್ತಮ ಕ್ಷೇತ್ರ ರಕ್ಷಕ ಹಾಗೂ ಸಲೀಮ್ ಸೂರಿಂಜೆ ಯವರು ಸವ್ಯಸಾಚಿ ಆಟಗಾರನೆಂಬ ಗೌರವ ಸ್ವೀಕರಿಸಿದರು.
ವರದಿ: ಅಬ್ದುರ್ರಝಾಕ್ MK ತ್ವಾಯಿಫ್