ಮೂಡಡ್ಕ ಅಲ್ ಮದೀನತುಲ್ ಮುನವ್ವರ ಎಜುಕೇಶನಲ್ ಸೆಂಟರ್ ಮಸ್ನಾ ಸಮಿತಿಯ ಮಾಸಿಕ ಸ್ವಲಾತ್ ಮಜ್ಲಿಸ್
ಹಾಗೂ ನಮ್ಮನ್ನಗಲಿದ ಸ್ಥಾಪನೆ ಸಂಘಟನೆಗಳ ಹಾಗೂ ಕುಟುಂಬದಿಂದ ಮರಣಹೊಂದಿದ ಸದಸ್ಯರ ಮೇಲೆ ತಹ್ಲೀಲ್ ಸಮರ್ಪಣೆ ಹಾಗೂ ದುಆ ಮಜ್ಲಿಸ್ ಕಾರ್ಯಕ್ರಮವು ಬಹು. ಅಬ್ದುಲ್ ಕರೀಂ ಲತ್ವೀಫಿ ಸೋಕಿಲರವರ ನೆತೃತ್ವದಲ್ಲಿ ನಡೆಯಿತು.
ನಂತರ ನಡೆದ ಮೂಡಡ್ಕ ಮಸ್ನಾ ಸಮಿತಿಯ ವಾರ್ಷಿಕ ಮಹಾಸಭೆಯು ಸಮಿತಿಯ ಅಧ್ಯಕ್ಷರಾದ ದಾವೂದ್ ಹಾಜಿ ಕಜಮಾರ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಮೂಡಡ್ಕ ಸೌದಿ ನ್ಯಾಶನಲ್ ಸಮಿತಿಯ ಕೋಶಾಧಿಕಾರಿ KP ಅಬ್ದುಲ್ ರಶೀದ್ ಕಳಂಜಿಬೈಲ್ ಉಪಸ್ಥಿತರಿದ್ದರು. ಕೆ.ಸಿ.ಎಫ್. ಸೌದಿ ನ್ಯಾಶನಲ್ ಸಮಿತಿಯ ಎಜುಕೇಶನಲ್ ಅಧ್ಯಕ್ಷರು ಬಹು. ಸಿದ್ದೀಕ್ ಸಖಾಫಿ ಪೆರುವಾಯಿ ಸಬಿಕರಿಗೆ ಹಿತವಚನ ನೀಡಿದರು.
ಇಲ್ಯಾಸ್ ಝುಹ್ರಿ ಕನ್ಯಾನ ಕಿರಾಅತ್ ಪಠಿಸಿದರು ಹಾಜಿ ಅಬ್ದುರ್ರಝಾಕ್ ಮುಸ್ಲಿಯಾರ್ ಮಾಚಾರ್ ರವರು ಸಬೆಯನ್ನು ಉದ್ಘಾಟಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿಯವರು ಸಭೆಯಲ್ಲಿ ಮಂಡಿಸಿದ ಗತವರ್ಷದ ವರದಿ ಮತ್ತು ಲೆಕ್ಕಪತ್ರವನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿಲಾಯಿತು. ಮಸ್ನಾ ಸಮಿತಿಯ ಸ್ಥಾಪಕ ಸದಸ್ಯರೂ, ಸಮಿತಿಯ ಪ್ರಥಮ ಅದ್ಯಕ್ಷರೂ ಆಗಿದ್ದ ಹೈದರ್ ಹಾಜಿ ಸರಳಿಕಟ್ಟೆಯವರನ್ನು ಸೆಂಟ್ರಲ್ ಸಮಿತಿಯ ವತಿಯಿಂದ ಮತ್ತು ಮಸ್ನಾ ಸಮಿತಿಯ ವತಿಯಿಂದ ಮೊಮೆಂಟೊ ನೀಡಿ ಗೌರವಿಸಲಾಯಿತು.
ಸಭಾಧ್ಯಕ್ಷರು ತಮ್ಮ ಅದ್ಯಕ್ಷ ಭಾಷಣದಲ್ಲಿ ಸಂಘಟನೆಯ ಬಗ್ಗೆ ಹಾಗೂ ಕಾರ್ಯಚರಣೆಯ ಬಗ್ಗೆ ವಿವರಿಸಿದರು. ಮೂಡಡ್ಕ ಸೌದಿ ನ್ಯಾಶನಲ್ ಸಮಿತಿ ಸದಸ್ಯರಾದ ಅಬ್ದುಲ್ ಅಝೀಝ್ ಬಜ್ಪೆಯವರು ನೂತನ ಕಾರ್ಯಕಾರಿ ಸಮಿತಿಗೆ ಪ್ಯಾನಲ್ ಮಂಡಿಸಿ ಅದಕ್ಕೆ ಕೆಲವೊಂದು ಸದಸ್ಯರನ್ನು ಸೇರಿಸಿ 2021-2022ರ ಸಾಲಿಗೆ ಈ ಕೆಳಗಿನ ನೂತನ ಸಮಿತಿಯನ್ನು ರಚಿಸಿದರು.
ಅದ್ಯಕ್ಷರಾಗಿ ಕಾಸಿಂ ಹಾಜಿ ಕನರಾಜೆ, ಪ್ರ. ಕಾರ್ಯದರ್ಶಿಯಾಗಿ ಇಬ್ರಾಹಿಂ ಬೇಂಗಿಲ, ಕೋಶಾಧಿಕಾರಿಯಾಗಿ ಇಬ್ರಾಹಿಂ ಮಾಣಿ,
ಉಪಾದ್ಯಕ್ಷರುಗಳಾಗಿ ಅಬ್ದುರ್ರಝಾಕ್ ಮುಸ್ಲಿಯಾರ್ ಮಾಚಾರ್ ಹಾಗೂ ಹಸನ್ ಸಾಗರ್, ಜೊತೆ ಕಾರ್ಯದರ್ಶಿಗಳಾಗಿ ದಾವೂದ್ ಕೊಡ್ಲಿಪೇಟೆ ಹಾಗೂ ಸಿದ್ದೀಕ್ ಕಳಂಜಿಬೈಲ್, ಸಂಚಾಲಕರಾಗಿ ಅಬ್ದುಲ್ ಕರೀಂ ಕೊಡ್ಲಿಪೆಟೆ ಹಾಗೂ KP ಮುಹಮ್ಮದ್ ಶರೀಫ್ ಆಯ್ಕೆಗೊಂಡರು.
ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಅಬ್ದುಲ್ ಹಮೀದ್ ಕನರಾಜೆ, ಅಮ್ಜದ್ ಶಿವಮೊಗ್ಗ, KP ಅಬ್ದುಲ್ ರಶೀದ್ ಹಾಜಿ ಕಳಂಜಿಬೈಲ್, ದಾವೂದ್ ಹಾಜಿ ಕಜಮಾರ್, ಮುಹಮ್ಮದ್ ಶರೀಫ್ ಗುಂಪಕಲ್ಲು, ಅಬ್ದುಲ್ ಅಝೀಝ್ ನೆಕ್ಕಿಲ್, ಹೈದರ್ ಹಾಜಿ ಸರಳಿಕಟ್ಟೆ, ಅಬ್ದುಲ್ ಹಮೀದ್ ಮೊಡಂತಿಲ ಇವರನ್ನು ಆರಿಸಲಾಯಿತು. T.H ಹಬೀಬುಲ್ಲಾಹ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಇಬ್ರಾಹಿಂ ಬೇಂಗಿಲ ಧನ್ಯವಾದಗೈದರು.