ರಿಯಾದ್: ಸೌದಿ ರಸ್ತೆಗಳಲ್ಲಿ ಸಿಗ್ನಲ್ ನೀಡದೆ ಹಳಿಗಳನ್ನು ಬದಲಾಯಿಸುವವರಿಗೆ ದಂಡ ವಿಧಿಸುವ ವ್ಯವಸ್ಥೆಯು ಇನ್ನಷ್ಟು ನಗರಗಳಿಗೆ ವಿಸ್ತರಿಸಲಾಗಿದೆ. ಮೂರನೇ ಹಂತದ ಭಾಗವಾಗಿ ಮಕ್ಕಾ, ಮದೀನಾ, ಅಸೀರ್, ಖುರಯ್ಯಾತ್ ಮತ್ತು ಉತ್ತರ ಗಡಿ ಪ್ರದೇಶಗಳಲ್ಲಿ ಈ ವ್ಯವಸ್ಥೆಯನ್ನು ಇಂದಿನಿಂದ ಜಾರಿಗೆ ತರಲಾಗಿದೆ.
ಈ ಹಿಂದೆ ಪ್ರಮುಖ ನಗರಗಳಲ್ಲಿ ಜಾರಿಗೆ ತರಲಾದ ಸಂಚಾರ ಸುಧಾರಣೆಗಳ ಮುಂದುವರಿಕೆಯಾಗಿ ಈ ಯೋಜನೆಯನ್ನು ಹೆಚ್ಚಿನ ನಗರಗಳಲ್ಲಿ ಜಾರಿಗೊಳಿಸಲಾಗುತ್ತಿದೆ.ಇದು ಸಂಚಾರ ಮಾರ್ಗಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವ ಯೋಜನೆಯಾಗಿದೆ.
ವ್ಯವಸ್ಥೆಯು ಜಾರಿಗೆ ಬಂದ ನಗರಗಳಲ್ಲಿ ಈಗಾಗಲೇ ಅನೇಕರಿಗೆ ದಂಡ ವಿಧಿಸಲಾಗಿದೆ. ದಂಡವು 300 ರಿಂದ 500 ರಿಯಾಲ್ಗಳವರೆಗೆ ಇರುತ್ತದೆ.
ನಗರದ ವಿವಿಧ ಭಾಗಗಳಲ್ಲಿ ಅಳವಡಿಸಲಾದ ಕ್ಯಾಮೆರಾಗಳು ಮತ್ತು ಸಾಧನಗಳ ಮೂಲಕ ಕಣ್ಗಾವಲು ನಡೆಸಿ,ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲಾಗುವುದು.
ರಸ್ತೆಯಲ್ಲಿ ಸಿಗ್ನಲ್ ನೀಡದೆ ಲೇನ್ಗಳನ್ನು ಬದಲಾಯಿಸುವುದು, ವಾಹನವನ್ನು ಅಕ್ರಮವಾಗಿ ಹಿಂದಿಕ್ಕುವುದು, ನಿರ್ಗಮನ ಮತ್ತು ಪ್ರವೇಶವನ್ನು ನಿಷೇಧಿಸಲ್ಪಟ್ಟ ಕಡೆಗಳಲ್ಲಿ ಅತಿಕ್ರಮಣ ಮಾಡುವುದು ಮುಂತಾದ ಉಲ್ಲಂಘನೆ ಗಳಿಗೆ ದಂಡ ವಿಧಿಸುವುದಾಗಿದೆ ಹೊಸ ವಿಧಾನ.
ಈ ಉದ್ದೇಶಕ್ಕಾಗಿ ಸ್ಥಾಪಿಸಲಾದ ವಿಶೇಷ ಸಾಧನಗಳಿಂದ ಉಲ್ಲಂಘನೆಗಳನ್ನು ಪತ್ತೆ ಹಚ್ಚಲಾಗುತ್ತದೆ. ಜನವರಿ 1 ರ ಮುಂಚಿತವಾಗಿ ದೇಶಾದ್ಯಂತ ವ್ಯವಸ್ಥೆಯನ್ನು ಸ್ಥಾಪಿಸುವುದಾಗಿದೆ ಸಂಚಾರ ಇಲಾಖೆಯ ಉದ್ದೇಶ.