ರಿಯಾದ್: ಸೌದಿ ಅರೇಬಿಯಾದಲ್ಲಿ ಘೋಷಿಸಲಾದ ಪ್ರಾಯೋಜಕತ್ವದ ಬದಲಾವಣೆಯ ಭಾಗವಾಗಿ ಯಾವುದೇ ವಿಶೇಷ ಶುಲ್ಕ ಇರುವುದಿಲ್ಲ ಎಂದು ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಸಚಿವಾಲಯ ಪ್ರಕಟಿಸಿದೆ. ಕೆಲಸಗಾರನ ಮರು ಪ್ರವೇಶ ಮತ್ತು ನಿರ್ಗಮನವನ್ನು ಪ್ರಾಯೋಜಕರು ರದ್ದುಗೊಳಿಸಲಾಗುವುದಿಲ್ಲ. ಉದ್ಯೋಗದಾತರಿಗೆ ಹೊಸ ವೀಸಾಗಳನ್ನು ನೀಡುವುದನ್ನು ಮುಂದುವರಿಸುವುದಾಗಿ ಸೌದಿ ಸಚಿವಾಲಯ ಹೇಳಿದೆ.
ಕೆಲಸಗಾರನ ಮರು ಪ್ರವೇಶ ಮತ್ತು ನಿರ್ಗಮನವನ್ನು ಇನ್ನು ಮುಂದೆ ಉದ್ಯೋಗದಾತ ರದ್ದುಗೊಳಿಸಲಾಗುವುದಿಲ್ಲ. ಕೆಲಸಗಾರನು ಉದ್ಯೋಗ ಒಪ್ಪಂದವನ್ನು ಉಲ್ಲಂಘಿಸಿದರೆ, ದೂರು ದಾಖಲಿಸುವ ಮೂಲಕ ಪ್ರವಾಸವನ್ನು ರದ್ದು ಪಡಿಸಬಹುದು. ಆದರೆ ಅನಗತ್ಯವಾಗಿ ಪ್ರಯಾಣವನ್ನು ನಿರ್ಬಂಧಿಸಲು ದೂರು ನೀಡಿದರೆ, ಕ್ರಮ ಕೈಗೊಳ್ಳಲಾಗುತ್ತದೆ.
ಪ್ರಸ್ತುತ ಚಾಲ್ತಿಯಲ್ಲಿರುವ ಶುಲ್ಕವನ್ನೇ ದೇಶದಲ್ಲಿ ವಿಧಿಸಲಾಗುವುದು. ಹೊಸ ಬದಲಾವಣೆಗಳಿಗೆ ಯಾವುದೇ ವಿಶೇಷ ಶುಲ್ಕಗಳು ಇರುವುದಿಲ್ಲ. ಉದ್ಯೋಗ ಬದಲಾವಣೆಯ ಸಮಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಶುಲ್ಕ ಮುಂದುವರಿಯಲಿದೆ.
ನಿರ್ಗಮನ ಮತ್ತು ಮರು ಪ್ರವೇಶದ ಅಧಿಕಾರವನ್ನು ಕೆಲಸಗಾರನು ಹೊಂದಿರುವುದರಿಂದ ಇದರ ಶುಲ್ಕವನ್ನು ಕೆಲಸಗಾರನೇ ಪಾವತಿಸಬೇಕಾಗುತ್ತದೆ. ಇದಕ್ಕೆ ಕಂಪನಿಗಳು ಅಥವಾ ಉದ್ಯೋಗದಾತರು ಹೊಣೆಗಾರರಲ್ಲ ಎಂದು ಸಚಿವಾಲಯ ತಿಳಿಸಿದೆ.
















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ನಕಲಿ ದಾಖಲೆ ದೃಢೀಕರಣ ಜಾಲ: ಭಾರತೀಯ ರಾಯಭಾರ ಕಚೇರಿಯಿಂದ ಎಚ್ಚರಿಕೆ
ವಿಮಾನಯಾನ ರದ್ದತಿಯಿಂದ ಅತಂತ್ರರಾದ ಉಮ್ರಾ ಯಾತ್ರಾರ್ಥಿಗಳು- DKSCಯಿಂದ ಮಾನವೀಯ ನೆರವು
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ
ರಿಯಾದ್ ವಿಮಾನ ನಿಲ್ದಾಣ ಬಂದ್: ಪರ್ಯಾಯ ಪ್ರಯಾಣ ಮಾರ್ಗದಲ್ಲೂ ಟಿಕೆಟ್ ದರ ಏರಿಕೆ
ಸೌದಿ: ಸಿಲುಕಿರುವ ಯಾತ್ರಿಕರ ವಾಪಸಾತಿಗೆ ರಾಯಭಾರ ಕಚೇರಿ ತೀವ್ರ ಕಾರ್ಯಾಚರಣೆ
ಯುಎಇ : ನಾಲ್ಕು ಪಾಸ್ಪೋರ್ಟ್ ಸೇವಾ ಕೇಂದ್ರಗಳು ಇಂದಿನಿಂದ ಸ್ಥಗಿತ- ರಾಯಭಾರ ಕಚೇರಿ
ಉಮ್ರಾ ಯಾತ್ರಿಕರ ವಾಪಸಾತಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಬೇಕು- ರಾಯಭಾರ ಕಚೇರಿ
ರಿಯಾದ್, ಜಿದ್ದಾ ವಿಮಾನ ಸೇವೆಗಳು ಅಕ್ಟೋಬರ್ 27ರವರೆಗೆ ಸ್ಥಗಿತ
ಧರ್ಮ ನಿಂದನೆ ದೂರು: ಯುವಕನ ಮರಣದಂಡನೆಯನ್ನು ರದ್ದುಗೊಳಿಸಿದ ಸೌದಿ ಸುಪ್ರೀಂ ಕೋರ್ಟ್
ಸೌದಿ ವಿಮಾನ ಸೇವೆ ಸ್ಥಗಿತ: ವೀಸಾ ಅವಧಿ ಮೀರಿದವರಿಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ- ಭಾರತೀಯ ರಾಯಭಾರ ಕಚೇರಿ