ವಿಶ್ವದ ಜನಪ್ರಿಯ ಮೆಸೆಜಿಂಗ್ ಆಪ್ ವಾಟ್ಸಾಪ್. ಈಗಾಗಲೇ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇತ್ತೀಚಗಷ್ಟೇ ಪೇಸ್‌ಬಯಕ್ ಒಡೆತನದ ವಾಟ್ಸಾಪ್‌ನಲ್ಲಿ ಫೇಸ್‌ಬುಕ್ ಮೆಸೆಂಜರ್ ರೂಮ್ಸ್ ಶಾರ್ಟ್‌ಕಟ್ ಅನ್ನು ಪರಿಚಯಿಸಿದೆ. ಗ್ರೂಪ್ ವಿಡಿಯೋ ಕಾಲಿಂಗ್, ಮೆಸೇಜ್ ಗಳನ್ನು ಪರ್ಮ್ ನೆಂಟ್ ಆಗಿ ಡಿಲೀಟ್ ಮಾಡುವುದು ಸೇರಿ ಸಾಕಷ್ಟು ಆಯ್ಕೆಗಳನ್ನು ವಾಟ್ಸ್ಆ್ಯಪ್ ಪರಿಚಯಿಸಿದೆ.
ಶೀಘ್ರವೇ ವಾಟ್ಸ್ಆ್ಯಪ್ ಹೊಸ ಆಯ್ಕೆಯೊಂದನ್ನು ಪರಿಚಯಿಸುತ್ತಿದ್ದು, ಇದು ಬಳಕೆದಾರರಿಗೆ ಸಾಕಷ್ಟು ಸಹಕಾರಿಯಾಗಲಿದೆ ಎನ್ನಲಾಗಿದೆ.ಹೌದು, ವಾಟ್ಸ್ಆ್ಯಪ್ ವೆಬ್ ನಲ್ಲಿ ಇಷ್ಟು ದಿನ ಆಡಿಯೋ ಹಾಗೂ ವಿಡಿಯೋ ಕಾಲ್ ಆಯ್ಕೆ ಇರಲಿಲ್ಲ. ಹೀಗಾಗಿ, ಕಂಪ್ಯೂಟರ್ನಲ್ಲಿ ವಾಟ್ಸ್ಆ್ಯಪ್ ಲಾಗಿನ್ ಆದಾಗ ವಿಡಿಯೋ ಕಾಲ್ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಶೀಘ್ರವೇ ವಾಟ್ಸ್ಆ್ಯಪ್ ವೆಬ್ ನಲ್ಲಿ ಆಡಿಯೋ ಹಾಗೂ ವಿಡಿಯೋ ಕಾಲ್ ಆಯ್ಕೆಯನ್ನು ಜಾರಿಗೆ ತರಲು ಸಂಸ್ಥೆ ಮುಂದಾಗಿದೆ.ವಾಟ್ಸ್ಆ್ಯಪ್ ವೆಬ್ಗಾಗಿ ವಿಶೇಷ ಐಕಾನ್ ಕೂಡ ಸಿದ್ಧಪಡಿಸಲು ಸಂಸ್ಥೆ ಮುಂದಾಗಿದೆ ಎನ್ನಲಾಗಿದೆ.