ಪರರಿಗಾಗಿ ಮಿಡಿಯುವ ಹೃದಯವಂತಿಕೆ,ಮಾನವೀಯತೆ,ಪರಿಸರ ಸ್ನೇಹ ಇದೆಲ್ಲಾ ಮಾನವನಲ್ಲಿ ಬೇಕೇ ಬೇಕು. ಅಪರೂಪವಾದ ಇತ್ಯಾದಿ ಸಂಗತಿಗಳಿಗೆ ಜೀವ ತುಂಬಿದ ಅಪರೂಪದ ಯುವಕರ ಬಳಗವಾಗಿದೆ ಯುವ ಸೇವಕ್.
ಭವಿಷ್ಯದ ನಾಗರೀಕರಾಗುವ, ಯುವಸಮೂಹದ ಮನೋವಿಕಾಸಕ್ಕೆ ಹಾಗೂ ನಾಗರಿಕತೆಯ ಓಟದಲ್ಲಿ ಮೆಲ್ಲನೆ ಮರೆಯಾಗುತ್ತಿರುವ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಎತ್ತಿ ತೋರ್ಪಡಿಸುವ,ಯುವ ಸಮಾಜವನ್ನು ಒಟ್ಟುಗೂಡಿಸುವ, ಬೇರೆ ಬೇರೆ ಮನಸ್ಥಿತಿಯ ಯುವ ಮನಸ್ಸುಗಳನ್ನು ಸಮಾಜದ ದೀನರ ಸೇವೆಗಾಗಿ ಪರಿವರ್ತನೆಗೊಳಿಸುವ ನಿಟ್ಚಿನಲ್ಲಿ ಸಂಘ ರೂಪುಗೊಳಿಸಲಾಗಿದೆ.
ಕೆಲವೇ ಕೆಲವು ಸಮಾನ ಮನಸ್ಕ ಯುವಕರ ಕಲ್ಪನೆಗೆ ಮೂಡಿದ ಒಂದು ಶಕ್ತಿ, ಇದೀಗ ನೂರಾರು ನಿಸ್ವಾರ್ಥ ಸೇವಾ ಕಾರ್ಯಕರ್ತರ ಸಂಗಮದೊಂದಿಗೆ ಸಾಗುತ್ತಿದೆ. ಇದರ ಪ್ರಥಮ ಸೇವಾ ಯೋಜನೆಯ ಭಾಗವಾಗಿ
ಪುತ್ತೂರು ತಾಲೂಕು ಪಡ್ನೂರು ಗ್ರಾಮ ಗಿರಿನಗರ ನಿವಾಸಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ *ಕುಶಾಲಪ್ಪ* ಎಂಬವರು ತನ್ನ ಎರಡು ಕಿಡ್ನಿ ವೈಫಲ್ಯತೆಯಿಂದ ಬಲಳುತ್ತಿದ್ದು, ಡಯಾಲಿಸಿಸ್ ಮಾಡಿಸಿಕೊಳ್ಳಲು ವಾರಕ್ಕೆ ಆರು ಸಾವಿರಕ್ಕೂ ಮಿಗಿಲಾಗಿ ಖರ್ಚಾಗುತ್ತಿದ್ದು ಹದಗೆಟ್ಟ ಇವರ ಕುಟುಂಬದ ಪರಿಸ್ಥಿತಿಯನ್ನು ಅರ್ಥೈಸಿ , ಇವರ ಚಿಕಿತ್ಸೆಗಾಗಿ ಹಾಗೂ ಇವರ ಕಷ್ಟಕರ ಪರಿಸ್ಥಿತಿಗಾಗಿ ಯುವ ಸೇವಕ್ ಸಮಾಜದ ನಿಸ್ವಾರ್ಥ ಸೇವಕರಿಂದ ಒಟ್ಟುಗೂಡಿಸಿದ *10,001₹* ಧನಸಹಾಯವನ್ನು ನೀಡಿ ಸಾಂತ್ವನಿಸಲಾಗಿದೆ..
ತಾನು ಕಷ್ಟದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದರೂ ಕೂಡ ತನ್ನ ದಿನ ಖರ್ಚಿಗಾಗಿ ಕೊಟ್ಟ ಹಣದಿಂದ ಸಮಾಜದ ಅಶಕ್ತರ ಕಷ್ಟಕ್ಕೆ ಸಹಾಯ ಮಾಡುವ ತುಂಬು ಹೃದಯದ ಯುವ ಮನಸ್ಸುಗಳೂ ಇಲ್ಲಿವೆ ಎಂಬುವುದು ನಿಜಕ್ಕೂ ಗ್ರೇಟ್. ಕಾಲೇಜ್ ಜೀವನದೊಂದಿಗೆ ಮೋಜು ಮಸ್ತಿಯಲ್ಲಿ ದಿನ ಕಳೆಯುವ ಯುವಪೀಳಿಗೆಗೆ ಈ ತಂಡ ಮಾದರಿಯಾಗಿದೆ.
ಶ್ರೀ ರಾಮಕುಂಜೇಶ್ವರ ದೇವರ ಅನುಗ್ರಹದೊಂದಿಗೆ,
*ಯುವ ಸೇವಕ್* ತನ್ನ ಸೇವಾಪಯಣದ *ಪ್ರಥಮ ಯೋಜನೆಯನ್ನು* ಯಶಸ್ವಿಯಾಗಿ ಮುಗಿಸಿದೆ ಎನ್ನುತ್ತಾರೆ ಸಂಘಟಕರು.