janadhvani

Kannada Online News Paper

ಆರೋಗ್ಯ ಕೇಂದ್ರವನ್ನು ಶೀಘ್ರ ಕಾರ್ಯಾರಂಭ ಗೊಳಿಸುವಂತೆ SDPI ಬೆಳ್ಳಾರೆ ವಲಯ ಮನವಿ

ಸುಳ್ಯ: ತಾಲೂಕಿನ ಬೆಳ್ಳಾರೆ ಪ್ರಾರ್ಥಮಿಕ ಆರೋಗ್ಯ ಕೇಂದ್ರವು ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಸಮುದಾಯ ಆರೋಗ್ಯ ಕೇಂದ್ರವಾಗಿ ಮಾರ್ಪಾಡುಗೊಂಡು ಮೂರು ವರ್ಷ ಕಳೆದರೂ ಇನ್ನೂ ಕೂಡ ಕಾರ್ಯಾರಂಭ ಗೊಂಡಿರುವುದಿಲ್ಲ.

ಬೆಳ್ಳಾರೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಜನರು ತುರ್ತು ಸಂದರ್ಭದಲ್ಲಿ ಇದೇ ಕೇಂದ್ರವನ್ನು ಅವಲಂಬಿಸಿರುತ್ತಾರೆ. ಆದರೆ ಇಲ್ಲಿ ಖಾಯಂ ವೈದ್ಯರು ಇಲ್ಲದೇ ಇರುವುದರಿಂದ ಆಸುಪಾಸಿನ ಜನರು ಸಂಕಷ್ಟ ಎದುರಿಸಬೇಕಾದಂತಹ ಪರಿಸ್ಥಿತಿ ಬಂದೊದಗಿದೆ.ಇಪ್ಪತ್ತ ನಾಲ್ಕು ಗಂಟೆಯು ಸೇವೆ ನೀಡಬೇಕಾದ ಆಸ್ಪತ್ರೆಯು ಇಲ್ಲಿ ಮೂಲ ಸೌಕರ್ಯವಿದ್ದರು ಖಾಯಂ ವೈದ್ಯರಿಲ್ಲದ ಕಾರಣ ರಾತ್ರಿ ವೇಳೆಯಲ್ಲಿ ತುರ್ತು ಚಿಕಿತ್ಸೆಗೆ ಸುಳ್ಯ ಅಥವಾ ಪುತ್ತೂರು ಆಸ್ಪತ್ರೆಯನ್ನು ಅವಲಂಭಿಸಬೇಕಾದಂತಹ ದುಸ್ಥಿತಿ ಬಂದೊದಗಿದೆ.

ಅದೇ ರೀತಿ ಬೆಳ್ಳಾರೆ ಗ್ರಾಮದಲ್ಲಿ ಸರಿಯಾದ ಖಾಸಗಿ ಆಸ್ಪತ್ರೆಗಳು ಇಲ್ಲದಿರುವುದರಿಂದ ಜನ ಸಾಮಾನ್ಯರು ಬಹಳ ಸಂಕಷ್ಟದಲ್ಲಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರವು ಸಮುದಾಯ ಕೇಂದ್ರವಾಗಿ ಶಿಫಾರಸ್ಸುಗೊಂಡು ಈಗಾಗಲೇ ಮೂರು ವರ್ಷ ಕಳೆದಿದ್ದರು ಈಗಲೂ ಪ್ರಾಥಮಿಕ ಕೇಂದ್ರವಾಗಿಯೇ ಕಾರ್ಯಚರಿಸುತ್ತಿದೆ. ಸಮುದಾಯ ಕೇಂದ್ರ ವಾಗಿ ಕಾರ್ಯಚರಿಸಿದರೆ ಎಲ್ಲಾ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಆದುದರಿಂದ ತಾವುಗಳು ಇದರ ಬಗ್ಗೆ ಗಮನಹರಿಸಿ ಶೀಘ್ರವಾಗಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಬೆಳ್ಳಾರೆ ಎಸ್‌ಡಿಪಿಐ ವಲಯ ಸಮಿತಿ ವತಿಯಿಂದ ತಾಲೂಕು ಆರೋಗ್ಯಧಿಕಾರಿಗಳ ಮೂಲಕ ಆರೋಗ್ಯ ಸಚಿವರಾದ ಶ್ರೀರಾಮುಲುರವರಿಗೆ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ(DHO) ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಬೆಳ್ಳಾರೆ ವಲಯಾದ್ಯಕ್ಷ ಸಿದ್ದೀಕ್ ಬೆಳ್ಳಾರೆ,ಉಪಾಧ್ಯಕ್ಷರಾದ ಆಸಿರ್ ಬೆಳ್ಳಾರೆ ಮತ್ತು ಸಮಿತಿ ಸದಸ್ಯರಾದ ಝೈನುದ್ದೀನ್ ಯು.ಎಚ್ ಹಾಗೂ ಜಾಬಿರ್ ಸಿ.ಎಂ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com