SSLC, ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಕುಟುಂಬದ ವಿದ್ಯಾರ್ಥಿಗಳಿಗೆ ” ಔರ್ ಫ್ಯಾಮಿಲಿ ಚಾರಿಟಿ” ಗ್ರೂಪ್ ನಿಂದ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
Covid19 ನ ಪರಿಣಾಮವಾಗಿ ಸರಳ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಟುಂಬದ ಹಿರಿಯರೂ, ಮಾರ್ಗದರ್ಶಕರೂ ಹಾಗೂ ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾದ ಯಾಕುಬ್ ಕೆ. ಎ ವಹಿಸಿದ್ದರು. SSLC ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಅಸಾಮಾನ್ಯ ಸಾಧನೆ ಮಾಡಿದ ಶುಹೇಬ್ ಬಜೆಗುಂಡಿ(S/0.SULAIMAN)ರವರಿಗೆ ಯಾಕುಬ್ ಹಾಗೂ ಯು, ಪಿ ಅಬ್ಬಾಸ್ ಹಾಜಿ ಶನಿವಾರಸಂತೆ ರವರ ಮೂಲಕ ಸನ್ಮಾನಿಸಲಾಯಿತು.
ಹಾಗೂ SSLC ಹೆಚ್ಚು ಅಂಕ ಗಳಿಸಿದ ಆಯ್ಶತುಲ್ ಮುಫ್ಶೀನ(D/o.Khadar ಶಾರ್ಜಾ) ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಅಸಾಮಾನ್ಯ ಸಾಧನೆ ಮಾಡಿದ ಆಯ್ಶತುಲ್ ರಝಾನ(D/o.Abdul azeez Abudhabi) ರವರಿಗೆ ಅವರ ಅನುಪಸ್ತಿತಿಯಲ್ಲಿ ಅವರ ಕುಟುಂಬಸ್ತರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ಹಸ್ತಾಂತರಿಸಲಾಯಿತು. ಹಾಗೂ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿ ಮೂಡಿಬರಲಿ ಎಂದು ಹಾರೈಸಲಾಯಿತು.
ಚಾರಿಟಿ ಗ್ರೂಪ್ ಸಂಸ್ಥಾಪಕರಾದ ಅಬ್ದುಲ್ ಮಜೀದ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಇಬ್ರಾಹಿಂ ಮುಸ್ಲಿಯಾರ್ ಆನ್ಲೈನ್ ಮೂಲಕ ಪ್ರಾಸ್ತಾವಿಕ ಭಾಷಣ ಮಾಡಿದರು ಹಾಗೂ ಹಾರಿಸ್ ಗೋಪಾಲಪುರ ಸ್ವಾಗತಿಸಿದರು. ಹಾಗೂ ಚಾರಿಟಿ ಗ್ರೂಪ್ ಸಹ ಸಂಸ್ಥಾಪಕರಾದ ಯೂಸುಫ್ ದುಬೈ, ಹುಸೇನ್ ಫೈಜಿ ಬಜೆಗುಂಡಿ,ಅಬ್ದುಲ್ ರಜಾಕ್ ಬಜೆಗುಂಡಿ,ರಿಯಾಜ್ ಕುಶಾಲನಗರ, ಇರ್ಶಾದ್ ಕೂಡಿಗೆ, ನೌಶಾದ್ ಯಾಕುಬ್,ಸಿದ್ದಿಕ್ ಪೆರಿಯಡ್ಕ ಹಾಗೂ ಸದಸ್ಯರು ದುಬೈ ನಿಂದ ಸಾಧಕರಿಗೆ ಶುಭ ಹಾರೈಸಿದರು. ಹಾಗೂ ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.