janadhvani

Kannada Online News Paper

ಕೊಣಾಜೆ: ಆಯುಷ್ಮಾನ್ ಆರೋಗ್ಯ ಕಾರ್ಡ್-ಉಚಿತ ನೋಂದಣಿ ಕಾರ್ಯಕ್ರಮ

ಕೊಣಾಜೆ: ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಉಚಿತ ನೋಂದಾವಣೆ ಕಾರ್ಯಕ್ರಮವು ಕೊಣಾಜೆಯ ಮಂಗಳ ಗ್ರಾಮೀಣ ಯುವಕ ಸಂಘದ ಕಛೇರಿಯಲ್ಲಿ ನಡೆಯಲಿದೆ.

ಮಂಗಳ ಗ್ರಾಮೀಣ ಯುವಕ ಸಂಘ(ರಿ) ಕೊಣಾಜೆ, ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಕೋಡಿಜಾಲ್ ಹಾಗೂ YFC ಕೊಣಾಜೆ ಇದರ ಜಂಟಿ ಸಹಭಾಗಿತ್ವದಲ್ಲಿ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಕಾರ್ಡ್ ಉಚಿತ ನೋಂದಣಿ ಕಾರ್ಯಕ್ರಮವು ದಿನಾಂಕ 23/8/2020 ರ ಆದಿತ್ಯವಾರ ಬೆಳಗ್ಗೆ 8:00 ರಿಂದ ಸಂಜೆ 5 ರ ತನಕ ನಡೆ ನಡೆಯಲಿರುವುದು.

ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಕೋವಿಡ್-19 ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿಕೊಂಡು ಬರಬೇಕು.
ಕೊಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ 1 ಮತ್ತು 2 ನೇ ವಾರ್ಡ್ ನ 5 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಆಧಾರ್ ಕಾರ್ಡ್ ಮತ್ತು
ರೇಷನ್ ಕಾರ್ಡ್ (ಪಡಿತರ ಚೀಟಿ) ದಾಖಲೆಗಳೊಂದಿಗೆ ಹಾಜರಾಗಿ ಉಚಿತ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ನ ಸೌಲಭ್ಯವನ್ನು ಪಡೆಯಬಹುದು ಎಂದು ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಕೋಡಿಜಾಲ್ ಇದರ ಪ್ರಧಾನ ಕಾರ್ಯದರ್ಶಿ ಶರೀಫ್ ಕೋಡಿಜಾಲ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊ. ಸಂಖ್ಯೆಗೆ ಸಂಪರ್ಕಿಸಿ:

9845174265
9743144601
9036971844
9964071504.

error: Content is protected !! Not allowed copy content from janadhvani.com