janadhvani

Kannada Online News Paper

ವಿವಿಧ ಬೇಡಿಕೆಗಳನ್ನು ಈಡೇರಿಸಲು ಪಂಚಾಯತ್ ಕಚೇರಿ ಎದುರು ಭಿತ್ತಿಪತ್ರ ಪ್ರದರ್ಶನ

ಪಾವೂರು: ಸರಕಾರಿ ಆಸ್ಪತ್ರೆ ಬಲಪಡಿಸಲು, ಖಾಸಗೀ ಆಸ್ಪತ್ರೆ ‌ನಿಯಂತ್ರಿಸಲು, ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಹಾಗು ಕೊರೋನಾ ಹೆಸರಲ್ಲಿ ಆಸ್ಪತ್ರೆಗಳ ಲೂಟಿಕೋರ ನೀತಿಯನ್ನು ಖಂಡಿಸಿ, ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ವಿರೋಧಿಸಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬಲಪಡಿಸುವಂತೆ ಒತ್ತಾಯಿಸಿ, ಎಲ್ಲರಿಗೂ ಸಮಾನ ಗುಣಮಟ್ಟದ ಉಚಿತ ಚಿಕಿತ್ಸೆಗಾಗಿ ಒತ್ತಾಯಿಸಿ ಇಂದು ಡಿವೈಎಫ್ಐ ಪಾವೂರು ಘಟಕದ ನೇತೃತ್ವದಲ್ಲಿ ಪಾವೂರು ಗ್ರಾಮ ಪಂಚಾಯತ್ ಕಚೇರಿ ಎದುರು ಭಿತ್ತಿಪತ್ರ ಪ್ರದರ್ಶನ ನಡೆಸಿ ಮನವಿ ಸಲ್ಲಿಸಲಾಯಿತು.

ಸಭೆಯನ್ನುದ್ದೇಶಿಸಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ , ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ ಮಾತನಾಡಿದರು. ಸಭೆಯಲ್ಲಿ ಡಿವೈಎಫ್ಐ ಪಾವೂರು ಘಟಕದ ಮುಖಂಡರಾದ ಆಸಿಫ್ ಪಾವೂರು, ರಝಾಕ್ , ಖಾಲಿದ್, ಇಕ್ಬಾಲ್, ಮಜೀದ್, ಮುಬಾರಕ್, ಅಮೀರ್, ಹಫೀಜ್ ಪಾಲ್ಗೊಂಡರು. ಕೊನೆಯಲ್ಲಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯತ್ ಅಧಿಕಾರಿಗಳ ಮುಖಾಂತರ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

error: Content is protected !! Not allowed copy content from janadhvani.com