ಕರ್ನಾಟಕದ ಪ್ರಮುಖ ಸುನ್ನೀ ನಾಯಕರು, ಹಲವಾರು ಸುನ್ನೀ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡಂತಹ , ಅಹ್ಲ್ ಸುನ್ನತ್ ವಲ್ ಜಮಾಅತ್ ನ ತತ್ವಾದರ್ಶದಲ್ಲಿ ಜೀವಿಸಿ,ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಸೇವೆ ಸಲ್ಲಿಸಿದ ಖ್ಯಾತ ಚಿಂತಕರು, ಲೇಖಕರು, ತರಬೇತುದಾರರಾದ ಪ್ರೊಫೆಸರ್ ಅಬ್ದುಲ್ ರಹಿಮಾನ್ ಇಂಜಿನಿಯರ್ ಅವರ ನಿಧನವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕರ್ನಾಟಕ ಕಲ್ಚರಲ್ ಫೌಂಡೇಷನ್ ಒಮಾನ್ ರಾಷ್ಟ್ರೀಯ ಸಮಿತಿಯು ಸಂತಾಪ ವ್ಯಕ್ತಪಡಿಸಿದೆ.
ಅವರ ಮಗ್ಫಿರತ್ ಗಾಗಿ ಎಲ್ಲಾ ಸದಸ್ಯರು ಪ್ರಾರ್ಥನೆ ಸಲ್ಲಿಸ ಬೇಕೆಂದು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿ ಮತ್ತು ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.