74 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹೆಚ್.ಟಿ.ಎಫ್.ಸಿ ಟಿಪ್ಪುನಗರ ಇದರ ವತಿಯಿಂದ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಕೆ.ಎಸ್.ಸುಲೈಮಾನ್, ಮಹಮ್ಮದ್ ಮುಸ್ಲಿಯಾರ್ ಮತ್ತಿತರರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆ.ಎಂ.ಎ ಫಾಝಿಲ್ ಹನೀಫಿ ಕೊಡಂಗಾಯಿ ಅವರು ಮಾತನಾಡಿ, ಹಲವು ಧರ್ಮಗಳ ಸಂಗಮ ಭೂಮಿಯಾದ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮಭವ್ಯ ಭಾರತವು ಇಂದು 74 ನೆಯ ಸ್ವಾತಂತ್ರ್ಯೋತ್ತವನ್ನು ಆಚರಿಸುತ್ತಿದ್ದು, ಜಾತಿ,ಧರ್ಮದ ಭೇದವಿಲ್ಲದ ಪರಸ್ಪರ ಒಗ್ಗಟ್ಟಿನಿಂದ ನಮ್ಮ ಪೂರ್ವಿಕರ ಹೋರಾಟ ನಡೆಸಿ ಗಳಿಸಿ ಕೊಟ್ಟ ಸ್ವಾತಂತ್ರ್ಯದ ಸವಿಯನ್ನು ನಾವಿಂದು ಹೆಮ್ಮೆಯಿಂದ ಅನುಭವಿಸುತ್ತಾ ಇದ್ದೇವೆ.ಈ ಸಂದರ್ಭದಲ್ಲಿ ಅವರ ತ್ಯಾಗ,ಬಲಿದಾನವನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಅದೇ ರೀತಿ ಮುಸ್ಲಿಮರಿಗೆ ಈ ದೇಶದಲ್ಲಿ ಎಲ್ಲಾ ಕಾಲದಲ್ಲೂ ರಾಷ್ಟ್ರದ ರಕ್ಷಣೆಗಾಗಿ ನೆಲೆನಿಂತ ಮಹೊನ್ನತ ಅಧ್ಯಾಯವಿದೆ.ಮುಸ್ಲಿಮರಿಗೆ ಸ್ವರಾಜ್ಯ ಕ್ಕಾಗಿ ಹೋರಾಡಲು ಪ್ರೇರಣೆ ನೀಡಿದ್ದು ಪವಿತ್ರ ಇಸ್ಲಾಮಿನ ಸಂದೇಶವೇ ಆಗಿತ್ತು,1525 ರಲ್ಲೇ ಸ್ವಾತಂತ್ರ್ಯ ದ ಮೊದಲ ಕಹಳೆ ಮೊಳಗಿಸಿದ್ದ ಕೇರಳದ ಪಂದಲಾಯಿನಿಯ ಸಮರ ಭೂಮಿಯ ವೀರ ಕಲಿಗಳಾದ ಕುಂಙಾಲಿ ಮರಕ್ಕಾರ್ ಕುಟುಂಬ, ಹೋರಾಟದಲ್ಲಿ ವರ್ಣರಂಜಿತ ಅಧ್ಯಾಯ ಬರೆದ ಹೈದರಲಿ ಟಪ್ಪು ಸುಲ್ತಾನ್ ಹೋರಾಟಗಳನ್ನ ನೆನಪಿಸಿದರು.
ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀಯವರೊಂದಿಗೆ ನಮ್ಮ ಪೂರ್ವಿಕರು ಜಾತಿ ಧರ್ಮದ ಭೇದ ಮರೆತು ಪರಸ್ಪರ ಪ್ರೀತಿಯಿಂದ ಒಗ್ಗಟ್ಟಿನಿಂದ ಹೋರಾಟ ನಡೆಸಿದ ಫಲವಾಗಿ ನಮ್ಮ ದೇಶ ಸ್ವಾತಂತ್ರ್ಯ ಪಡೆಯಿತು ಎಂಬುದು ಸತ್ಯ, ಆದ್ದರಿಂದ ನಾವು ದೇಶದ ಪ್ರಬುದ್ಧ ಜನತೆ ಜಾತ್ಯಾತೀತ ಸಾಮರಸ್ಯದ ಭಾರತವನ್ನು ಇನ್ನಷ್ಟು ಶಕ್ತಿಯುತವಾಗಿ ಕಟ್ಟಲು ಜಾತಿ,ಧರ್ಮ,ಪಕ್ಷ, ಪಂಗಡಗಳ ಭೇದವಿಲ್ಲದೆ ಒಗ್ಗಟ್ಟಿನಿಂದ ಒಗ್ಗೂಡಿ ಶ್ರಮಿಸಬೇಕು ಅದಕ್ಕಾಗಿ ಈ ಸ್ವಾತಂತ್ರ್ಯ ದಿನ ಪಣತೊಡಬೇಕು, ದೇಶಪ್ರೇಮ ವನ್ನು ಬೆಳೆಸಿಕೊಳ್ಳಬೇಕು ಎಂಬ ಉತ್ತಮವಾದ ಸಂದೇಶವನ್ನು ನೀಡುವುದರೊಂದಿಗೆ ಹೆಚ್.ಟಿ.ಎಫ್.ಸಿ ಕಮಿಟಿಯ ಸಮಾಜಮುಖಿ ಕೆಲಸ ಕಾರ್ಯಗಳನ್ನು ಕೂಡಾ ಈ ಸಂದರ್ಭದಲ್ಲಿ ಶ್ಲಾಘಿಸಿದರು.
ನಂತರ ಉಮ್ಮರ್ ಮುಸ್ಲಿಯಾರ್ ಟಿಪ್ಪುನಗರ ಇವರು ದುವಾ ನಡೆಸಿದರು.