ಉಪ್ಪಿನಂಗಡಿ, ಆ13:ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಉಪ್ಪಿನಂಗಡಿ ಸೆಕ್ಟರ್ ಇದರ ವತಿಯಿಂದ ಇಲ್ಲಿನ ಸುನ್ನೀ ಸೆಂಟರ್ ನಲ್ಲಿ ಸೆಕ್ಟರ್ ತುರ್ತು ಸೇವಾ ಕ್ಯಾಂಪ್ ಸೆಕ್ಟರ್ ಉಪಾಧ್ಯಕ್ಷ ನಝೀರ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯನ್ನು ಎಸ್ಸೆಸ್ಸೆಫ್ಫ್ ರಾಜ್ಯ ಸದಸ್ಯ ರಝಾ ಅಮ್ಜದಿ ಉದ್ಘಾಟಿಸಿದರು.ಕೋವಿಡ್ ನಿಂದ ಮರಣ ಹೊಂದಿದರೆ ಇಸ್ಲಾಮಿಕ ವಿಧಿವಿಧಾನಗಳ ಮೂಲಕ ದಫನ ಮಾಡುವುದು ಹೇಗೆ?? ತುರ್ತು ಪರಿಸ್ಥಿತಿಗಳಲ್ಲಿ ಎಸ್ಸೆಸ್ಸೆಫ್ಫ್ ಕಾರ್ಯಕರ್ತರು ಕಾರ್ಯಾಚರಿಸುವುದು ಹೇಗೆ?? ಎಂಬಿತ್ಯಾದಿ ವಿಷಯಗಳಲ್ಲಿ ಜಿಲ್ಲಾ ನಾಯಕ ಫೈಝಲ್ ಝುಹ್ರಿ ಸುಳ್ಯ ವಸ್ತುನಿಷ್ಟವಾಗಿ ತರಗತಿ ನಡೆಸಿಕೊಟ್ಟರು.
ಜಿಲ್ಲಾ ಕೋಶಾಧಿಕಾರಿ ಅಲೀ ತುರ್ಕಳಿಕ್ಕೆ, ಡಿವಿಶನ್ ಬ್ಲಡ್ ಸೈಬೋ ಉಸ್ತುವಾರಿ ಇಸಾಕ್ ಮದನಿ, ಡಿವಿಷನ್ ಕಾರ್ಯದರ್ಶಿ ಎಂ.ಎಂ ಮಹ್ ರೂಫ್ ಆತೂರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಿವಿಷನ್ ಪ್ರಧಾನ ಕಾರ್ಯದರ್ಶಿ ಯು.ಪಿ ಮುಸ್ತಫಾ, ಡಿವಿಷನ್ ಬ್ಲಡ್ ಸೈಬೋ ಉಸ್ತುವಾರಿ ಅಮ್ಮೀ ಕರುವೇಲ್, ಸೆಕ್ಟರ್ ಬ್ಲಡ್ ಸೈಬೋ ನಾಯಕ ಹಾರಿಸ್ ಗಂಡಿಬಾಗಿಲು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಸಿರಾಜ್ ಆತೂರು ಸ್ವಾಗತಿಸಿ ವಂದಿಸಿದರು