ಬರಹ : ಮುಹಮ್ಮದ್ ಉಳ್ಳಾಲ್.
ಮೊಬೈಲ್ : 7022822983.
ಕರ್ನಾಟಕ ಮತ್ತು ಕೇರಳದ ಗಡಿ ಭಾಗವಾದ ತಲಪಾಡಿಯಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂದ್ ಮಾಡಿರುವ ಗಡಿಯನ್ನು ತೆರವು ಗೊಳಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿ ಕೊಡುವಂತೆ ಮನವಿ ಸಲ್ಲಿಸಿದರೂ ಯಾವುದೇ ತೀರ್ಮಾನಕ್ಕೆ ಬಾರದೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಗಡಿಯನ್ನು ತೆರವುಗೊಳಿಸಿ ಮುಕ್ತ ಸಂಚಾರದ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದರೂ ಯಾವುದೇ ತೀರ್ಮಾನ ಹೊರ ಬೀಳದೆ ಮತ್ತಷ್ಟು ವಿಳಂಬವಾಗುತ್ತಿದೆ. ಈ ಹಿಂದೆ ಇದ್ದ ದೈನಂದಿನ ಪಾಸ್ ನಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದು ಗಡಿಯನ್ನು ತೆರವು ಗೊಳಿಸಿ ಮುಕ್ತ ಸಂಚಾರ ಮಾಡಿ ಏಳು ದಿನಕೊಮ್ಮೆ ಕೋವಿಡ್ ತಪಾಸಣೆಗೆ ಒಳಗಾಗ ಬೇಕೆಂದು ಮಾತುಕತೆ ನಡೆದರೂ ಇನ್ನೂ ಇತ್ಯರ್ಥಗೊಂಡಿಲ್ಲ.
ಲಾಕ್ ಡೌನ್ ಸಡಿಲಗೊಂಡರೂ ಮುಕ್ತ ಸಂಚಾರಕ್ಕೆ ಗಡಿಯನ್ನು ತೆರವು ಗೊಳಿಸದೇ ಇರುವುದರಿಂದ ನಿತ್ಯ ಸಂಚಾರಿಗಳು ತುಂಬಾ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅನೇಕ ಜನರು, ಉದ್ಯೋಗಿಗಳು ಮಂಗಳೂರು, ಕಾಸರಗೋಡನ್ನು ಅವಲಂಬಿಸುತ್ತಿದ್ದು, ಕೆಲವು ಉದ್ಯೋಗಿಗಳು ತಮ್ಮ ನೌಕರಿಯನ್ನೇ ಕಳಕೊಂಡು ನಿರೋದ್ಯೋಗಿಗಳಾಗಿದ್ದಾರೆ.
ಅಂತಾರಾಜ್ಯ ಗಡಿಯನ್ನು ತೆರವು ಗೊಳಿಸುವಂತೆ ಕೇಂದ್ರ ಸರಕಾರ ಹೊರಡಿಸಿರುವ ಮಾರ್ಗ ಸೂಚಿಗೂ ಯಾವುದೇ ಬೆಲೆಯನ್ನು ಕಲ್ಪಿಸದೆ ಅನಗತ್ಯವಾದ ನಿರ್ಣಯಗಳನ್ನು ಹೊರಡಿಸಿ ಗೊಂದಲ ಸ್ರಷ್ಟಿಸುತ್ತಿದೆ. ತಲಪಾಡಿ ಗಡಿಯನ್ನು ತೆರವು ಗೊಳಿಸದೇ ಹೋದರೆ ಅನೇಕ ಜನರು ಉದ್ಯೋಗವನ್ನು ಕಳಕೊಂಡು ಇನ್ನಷ್ಟು ಕಷ್ಟ ಅನುಭವಿಸುವರು. ಆದಷ್ಟು ಬೇಗ ತಲಪಾಡಿ ಗಡಿಯ ಸಮಸ್ಯೆ ಇತ್ಯರ್ಥವಾಗಬೇಕಿದೆ.