janadhvani

Kannada Online News Paper

ವಿದೇಶೀಯರ ಸಂಖ್ಯೆ ಕಡಿತಗೊಳಿಸಲು ನಿರ್ಧಾರ- ಲಕ್ಷಾಂತರ ಭಾರತೀಯರಿಗೆ ಕೆಲಸ ನಷ್ಟ

ಕುವೈತ್ : ಇಲ್ಲಿನ ಶಾಸಕಾಂಗವು ಭಾರತೀಯ ವಲಸಿಗರ ಸಂಖ್ಯೆಯನ್ನು ಕಡಿತಗೊಳಿಸುವ ಮಸೂದೆಗೆ ಅಂಗೀಕಾರ ನೀಡಿದ್ದು ಇದರಿಂದ ಲಕ್ಷಾಂತರ ಭಾರತೀಯರು ಉದ್ಯೋಗ ನಷ್ಟ ಅನುಭವಿಸಿ ತಾಯ್ನಾಡಿಗೆ ಮರಳಬೇಕಾದ ಅನಿವಾರ್ಯತೆ ಎದುರಾಗುವ ಸಂಭವವಿದೆ.

ದೇಶದ ಒಟ್ಟು ಜನಸಂಖ್ಯೆಯ 15% ಕ್ಕಿಂತ ಮಿಗಿಲಾಗಿ ಭಾರತೀಯರು ಕುವೈತ್ ದೇಶದಲ್ಲಿ ನೆಲೆಸಲು ಅವಕಾಶವಿರುವುದಿಲ್ಲ, ಇದರಿಂದ ಸುಮಾರು 8 ಲಕ್ಷದಷ್ಟು ಭಾರತೀಯರು ತಾಯ್ನಾಡಿಗೆ ವಾಪಸಾಗುವ ಅನಿವಾರ್ಯತೆ ಎದುರಾಗಿದೆ ಎಂದು ಸ್ಥಳೀಯ ಮಾಧ್ಯಮ ಕುವೈತ್ ಟೈಮ್ಸ್ ಡೈಲಿ ವರದಿ ಮಾಡಿದೆ.

error: Content is protected !! Not allowed copy content from janadhvani.com