ಮಂಗಳೂರು: ಕೊರೋನಾ ಮಹಾಮಾರಿಯು ವ್ಯಾಪಕವಾಗಿ ಹರಡುತ್ತಿರುವ ಪ್ರಸಕ್ತ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಅತೀ ಅಗತ್ಯಕ್ಕಲ್ಲದೆ ಮನೆಯಿಂದ ಹೊರಡದೆ ಮನೆಯಲ್ಲೇ ಇರುವಂತೆ ಮುಸ್ಲಿಂ ಒಕ್ಕೂಟ ಕರೆ ನೀಡಿದೆ.
ಸಾಧ್ಯವಾದಷ್ಟು ಒಳಾಂಗಣದಲ್ಲಿಯೇ ಇರುವುದು ಅತೀ ಅಗತ್ಯ ವಾಗಿದೆ.ಹೊರಾಂಗಣ ಭೇಟಿಯನ್ನು ತಾತ್ಕಾಲಿಕ ರದ್ದುಪಡಿಸುವುದು ಉತ್ತಮ. ಪ್ರಸ್ತುತ ಕೋರೋನಾ ಸೋಂಕು ಬಾಧಿತರ ಸಂಖ್ಯೆ ಅಧಿಕವಾಗಿರುವುದರಿಂದ ಮುಂಜಾಗ್ರತೆ ವಹಿಸಿ. ಈ ಆರೋಗ್ಯ ತುರ್ತು ಸ್ಥಿತಿಯನ್ನು ನಿಭಾಯಿಸಲು ಸಾರ್ವಜನಿಕರು ಸಹಕರಿ ಸಬೇಕಿದೆ.
ಕೊರೋನಾ ಮಹಾಮಾರಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇನೆ ಹೆಚ್ಚುತ್ತಿರುವುದು ದುಃಖಕರ,ಕೊರೋನಾಕೆ ಬಲಿಯಾದವರ ಮೃತ ದೇಹಗಳ ಅಂತ್ಯಕ್ರಿಯೆ ಸಂಧರ್ಭಗಳಲ್ಲಿ ಆಗುತ್ತಿರುವ ಅಡೆ ತಡೆ ಗಳನ್ನು ನಿವಾರಿಸುವ ಜವಾಬ್ದಾರಿಯು ಮಾನವೀಯತೆಯ ನೆಲೆಯಲ್ಲಿ ಸರ್ವರ ಮೇಲಿದೆ.
ಈ ಬಗ್ಗೆ ಪ್ರತೀ ಮಸೀದಿ ಮತ್ತು ಜಮಾಅತ್ ಗಳಲ್ಲಿ ಆಯಾ ಜಮಾಅತ್ ವ್ಯಾಪ್ತಿಯ ಅಥವಾ ಹೊರಗಿನ ಕೊರೋನಿ ಬಾಧಿತ ಮೃತ ದೇಹಗಳನ್ನು ಮುಕ್ತ ಮತ್ತು ವಿವಾದಾತೀತವಾಗಿ ದಫನ ಗೊಳಿಸುವಂತೆ ಪೂರಕ ನಿರ್ಣಯ ಕೈಗೊಳ್ಳಬೇಕಾದ ಅಗತ್ಯವಿದೆ. ಸರ್ವ ಜಮಾಅತ್ ಕಮಿಟಿಗಳು ಈ ಸತ್ಕಾರ್ಯಕ್ಕೆ ಸ್ಪಂದಿಸುವಂತೆ ವಿನಂತಿ.
ಕೆ.ಅಶ್ರಫ್
(ಅಧ್ಯಕ್ಷರು, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ)