ಮಕ್ಕಾ:ಕೊರೋನಾ ಸಾಂಕ್ರಾಮಿಕ ರೋಗ ಹರಡುವ ಹಿನ್ನೆಲೆಯಲ್ಲಿ ಜನಸಂಚಾರವಿಲ್ಲದೆ ಮಕ್ಕಾದ ಮಸ್ಜಿದ್ ಅಲ್-ಹರಮ್ ಮತ್ತದರ ದಾರಿಗಳು ಬಿಕೋ ಎನ್ನುತ್ತಿದೆ.
ರಮಝಾನ್ ಅಂತಿಮ 10ಕ್ಕೆ ತಲುಪಿದರೂ ಹರಮ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಜನಸಂಚಾರವಿಲ್ಲ. ಹರಮ್‌ನಲ್ಲಿನ ಸಿಬ್ಬಂದಿಗಳು ಪ್ರಾರ್ಥನೆಗಳನ್ನು ನಡೆಸುತ್ತಿದ್ದರೂ, ಪ್ರತಿಯೊಬ್ಬ ವಿಶ್ವಾಸಿಯ ಮನಸ್ಸು ನೋಯಿಸುವಂತಹ ಸನ್ನಿವೇಶ ನಿರ್ಮಾಣವಾಗಿದೆ.
ಸೌದಿಯಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿರುವ ಮಕ್ಕಾದಲ್ಲಿ ಮಾತ್ರ ಇದೀಗ 24 ಗಂಟೆಗಳ ಕರ್ಫ್ಯೂ ವಿಧಿಸಲಾಗಿದೆ. 10 ದಿನಗಳಿಗಿಂತಲೂ ಹೆಚ್ಚು ಕಾಲ ಮಸೀದಿಯಲ್ಲಿ ಕಳೆಯಲು ಆಸೆಪಡುವ ಸಮಯದಲ್ಲೂ ಹರಮ್‌ನಲ್ಲಿ ಜನರಿಲ್ಲ ಎಂಬುದು ವಿಶ್ವಾಸಿಗಳಿಗೆ ದುಃಖದ ಅನುಭವವಾಗಿದೆ.
ಬೆರಳೆಣಿಕೆಯಷ್ಟು ನೌಕರರು ಭಾಗವಹಿಸುವ ಪ್ರಾರ್ಥನೆಗಳು ಮಾತ್ರ ಕಅಬಾ ಪರಿಸರದಲ್ಲಿ ನಡೆಯುತ್ತಿದೆ. ಇಫ್ತಾರ್ ನಡೆಯುವ ಅಂಗಳ ಮತ್ತು ಹಗಲು ರಾತ್ರಿ ಪ್ರಾರ್ಥಿಸಲಾಗುವ ಮತ್ವಾಫ್ ಖಾಲಿಯಾಗಿದೆ. ಕೋವಿಡ್ ತಡೆಗಟ್ಟಲು ಜನರಿಂದ ತುಂಬಿತುಳುಕುತ್ತಿದ್ದ ಹರಮ್‌ನ ಪ್ರತಿಯೊಂದು ಮೂಲೆಯನ್ನೂ ಖಾಲಿಗೊಳಿಸಲಾಗಿದೆ.
ಹಜ್ ಋತುವಿನಲ್ಲಿ ಸೇರುವಂತೆ ಹೆಚ್ಚು ಜನರು ಭಾಗವಹಿಸುತ್ತಿದ್ದ ರಮಝಾನ್ ಸಮಯದಲ್ಲಿ, ಹರಮ್ ಮತ್ತು ಸುತ್ತಮುತ್ತಲಿನ ಪ್ರದೇಶವು ಖಾಲಿಯಾಗಿದ್ದು, ವಿಶ್ವಾಸಿಗಳ ಮನದಾಳದಲ್ಲಿ ಅತಿಯಾದ ನೋವನ್ನು ಉಂಟುಮಾಡುತ್ತಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು