ಪುತ್ತೂರು: ಬನ್ನೂರು ಮಸೀದಿಗೆ ಒಳಪಟ್ಟ ಬಡವರು,ಮಧ್ಯಮ ವರ್ಗ, ಶ್ರೀಮಂತರು ಮತ್ತು ಅನಿವಾಸಿ ಕನ್ನಡಿಗರ ಕುಟುಂಬಗಳಲ್ಲಿ ಬಹುತೇಕ ಜನರು ಕೋವಿಡ್-19 ಲಾಕ್ ಡೌನ್ ಸಮಸ್ಯೆಯಿಂದ ಒಂದೇ ರೀತಿಯ ಸಂಕಷ್ಟವನ್ನು ಎದುರಿಸುತ್ತಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಮಸೀದಿಯ ಅಧೀನದಲ್ಲಿರುವ ಸರ್ವ ಮನೆಗಳಿಗೆ ರಂಝಾನ್ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮವನ್ನು ಮಸೀದಿಯ ಖತೀಬರಾದ ಬಹು:ಅಬ್ದುಲ್ ಮಜೀದ್ ಮಲ್ಲಿ ಸಖಾಫಿ ಉಸ್ತಾದ್ ರವರು ದುಆಃ ಮಾಡುವುದರ ಮೂಲಕ ಉದ್ಘಾಟಿಸಿದರು.ಜಮಾಅತ್ ಕಮಿಟಿ ಅಧ್ಯಕ್ಷರಾದ ಮೊಯ್ದಿನ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಪುತ್ತೂರು ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್ ರವರು ಯೋಜನೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಜಮಾಅತ್ ಕಮೀಟಿ ಸದಸ್ಯರು ಜಮಾಅತ್’ನ ನೇತಾರರು ಹಾಗೂ ಯುವಕರು ಉಪಸ್ಥಿತರಿದ್ದರು.
ಖತೀಬ್ ಉಸ್ತಾದ್ ರವರ ನೇತೃತ್ವದಲ್ಲಿ ಆರಂಭಗೊಂಡು ಅನಿವಾಸಿ ಭಾರತೀಯರು, ಜಮಾಅತ್ ಸಮಿತಿಯ ಸದಸ್ಯರು ಹಾಗೂ ನಾಡಿನ ಕೊಡುಗೈ ಧಾನಿಗಳ ಸಹಕಾರದಿಂದ ಮತ್ತು ನಾಡಿನ ಯುವಕರ ಸ್ವಯಂ ಸ್ಪೂರ್ತಿಯ ಅಹರ್ನಿಶಿ ಸೇವೆಯಿಂದ ಯೋಜನೆಯು ಯಶಸ್ವಿಯಾಗಿ ನೆರವೇರಿತು. ಇದಕ್ಕೆ ತನು ಮನ ಧನಗಳಿಂದ ಸಹಕರಿಸಿದ ಸರ್ವರಿಗೂ ಸರ್ವ ಶಕ್ತನಾದ ಅಲ್ಲಾಹನು ತಕ್ಕುದಾದ ಪ್ರತಿಫಲ ನೀಡಲಿ, ಕೋರೋನ ವೈರಸ್ ನಂತಹ ಮಾರಕ ರೋಗದಿಂದ ಸರ್ವರನ್ನೂ ಅಲ್ಲಾಹು ಕಾಪಾಡಲಿ.