ದುಬೈ: ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ ಮತ್ತು ದೇಶ ವಿದೇಶಗಳಲ್ಲಿ ಹಲವಾರು ಸುನ್ನಿ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿರುವ ಆಸಿಫ್ ಗೂಡಿನಬಳಿ ಹಾಗು ಸಮೀವುಲ್ಲಾ ಗೂಡಿನಬಳಿ ರವರ ತಂದೆ ಅಬ್ದುಲ್ ಹಮೀದ್ ಗೂಡಿನಬಳಿ ಅಲ್ಲಾಹನ ಅನುಲ್ಲಂಘನೀಯ ವಿಧೇಯರಾಗಿ ನಮ್ಮನ್ನಗಲಿದ್ದಾರೆ.
ಸುನ್ನಿ ಸಾಂಘಿಕ ಚಟುವಟಿಕೆಗಳಲ್ಲಿ ನಿರಂತರ ಗುರುತಿಸಿಕೊಂಡಿದ್ದ ಮರ್ಹೂಂ ಅಬ್ದುಲ್ ಹಮೀದ್ ಗೂಡಿನಬಳಿ ರವರ ಮರಣಕ್ಕೆ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ| ಶೈಖ್ ಬಾವ ತೀವ್ರ ಸಂತಾಪ ವ್ಯಕ್ತಪಡಿಸಿ, ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ಅಲ್ಲಾಹು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಮೃತರ ಹೆಸರಿನಲ್ಲಿ ಸುನ್ನಿ ಸಂಘ ಸಂಸ್ಥೆಗಳು ಕೆ.ಸಿ.ಎಫ್ ಸದಸ್ಯರು ಖುರ್ಆನ್ ತಹಲೀಲ್ ಹದ್ಯಾ ಮಾಡಿ ಪಾರತ್ರಿಕ ಮೋಕ್ಷಕ್ಕಾಗಿ ಪ್ರಾರ್ಥಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.